ಬಳ್ಳಾರಿ: ಜಿಲ್ಲೆಯ ಹೊಸಪೇಟೆ ನಗರದ ಹೊರವಲಯದ ತುಂಗಭದ್ರಾ ಜಲಾಶಯದ ವ್ಯಾಪ್ತಿಯ ಇವಿ ಕ್ಯಾಂಪಿನ ಐಎಸ್ ಫ್ಯಾಕ್ಟರಿ ಬಳಿ ಮಹಾಗಣಪತಿ ಸಮಿತಿ ವತಿಯಿಂದ 33 ಅಡಿಯ ಎತ್ತರದ ಗಣೇಶಮೂರ್ತಿ ಪ್ರತಿಷ್ಠಾಪಿಸಲಾಗಿದೆ.
![33 feet tall Ganesh idol in ballery](https://etvbharatimages.akamaized.net/etvbharat/prod-images/4362371_thumbaary.jpg)
ಇಷ್ಟೊಂದು ಎತ್ತರದ ಗಣೇಶ ಮೂರ್ತಿಯು ಸಾರ್ವಜನಿಕರ ವಿಶೇಷ ಗಮನ ಸೆಳೆದಿದ್ದು, ನೋಡುಗರ ಆಕರ್ಷಣೆಯಾಗಿದೆ. ಮಹಾಗಣಪತಿ ಸಮಿತಿಯ ಸದಸ್ಯರು ಈ ಬೃಹತ್ ಗಣೇಶ ಮೂರ್ತಿ ಸ್ಥಾಪಿಸಿದ್ದಲ್ಲದೇ, ಸತತ 12 ದಿನಗಳಕಾಲ ನಿತ್ಯವೂ ಹೋಮ-ಹವನ ಸೇರಿದಂತೆ ಇನ್ನಿತರ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಲಾಗುತ್ತಿದೆ.
ಸಾವಿರಾರು ಲೀಟರ್ ಹಾಲಿನ ಅಭಿಷೇಕದಿಂದ ನಿಮ್ಮಜ್ಜನ: ಸೆಪ್ಟೆಂಬರ್ 13ರಂದು ಶುಕ್ರವಾರ ನಿಮ್ಮಜ್ಜನ ಮಾಡಲು ಕೊನೆ ದಿನವಾಗಿದ್ದು, ಅಂದು ಸಾವಿರಾರು ಲೀಟರ್ ನಷ್ಟು ಹಾಲಿನಿಂದ ಅಭಿಷೇಕದ ಮುಖೇನ ಅದೇ ಸ್ಥಳದಲ್ಲೇ ಬೃಹತ್ ಪ್ರತಿಮೆಯನ್ನು ನಿಮ್ಮಜ್ಜನ ಮಾಡಲು ಸಮಿತಿ ಸದಸ್ಯರು ನಿರ್ಧರಿಸಿದ್ದಾರೆ.