ಬಳ್ಳಾರಿ: ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ 1622 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 28 ಮೃತಪಟ್ಟಿದ್ದಾರೆ.
![1622 infected in Vijayanagar, Bellary](https://etvbharatimages.akamaized.net/etvbharat/prod-images/11773712_th.jpg)
ಸೋಂಕಿತರ ಸಂಖ್ಯೆ 72,677 ಕ್ಕೆ ಏರಿಕೆಯಾಗಿದ್ದು, ಈವರೆಗೆ ಸೋಂಕಿಗೆ 1047 ಮಂದಿ ಬಲಿಯಾಗಿದ್ದಾರೆ. ಇಂದು 3,586 ಜನರು ಡಿಸ್ಟಾರ್ಜ್ ಆಗಿದ್ದು, ಒಟ್ಟು 54,112 ಮಂದಿ ಗುಣಮುಖರಾಗಿದ್ದಾರೆ. 17,518 ಸಕ್ರಿಯ ಪ್ರಕರಣಗಳಿವೆ.
ಈ ಪೈಕಿ ಬಳ್ಳಾರಿ- 534, ಸಂಡೂರು- 130,ಸಿರುಗುಪ್ಪ- 93, ಹೊಸಪೇಟೆ-326, ಹೆಚ್.ಬಿ.ಹಳ್ಳಿ- 126, ಕೂಡ್ಲಿಗಿ -143 ,ಹರಪನಹಳ್ಳಿ- 94, ಹಡಗಲಿ- 167 ಮತ್ತು ಹೊರ ರಾಜ್ಯ 3, ಹೊರ ಜಿಲ್ಲೆಯ 6 ಮಂದಿಗೆ ಕೊರೊನಾ ವಕ್ಕರಿಸಿದೆ.