ETV Bharat / state

ಗೆಳೆಯರೊಂದಿಗೆ ಯೂಟ್ಯೂಟ್ ಚಾನಲ್​ ಹೊಂದಿದ್ದವನ ಕಿರಿಕ್​.. ಬರ್ಬರವಾಗಿ ಕೊಚ್ಚಿ ಕೊಂದ ದೋಸ್ತರು

author img

By

Published : Jun 27, 2021, 9:36 PM IST

ಪೊಲೀಸರಿಗೆ ನಾನೇ ದೂರು ಕೊಡುತ್ತೇನೆ ಎಂದು ಬೆದರಿಸುತ್ತಿದ್ದನಂತೆ. ಹೀಗಾಗಿ, ಮೂವರು ಆರೋಪಿಗಳು ಒಟ್ಟು ಸೇರಿ ಈತನ ಉಸಿರು ನಿಲ್ಲಿಸಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಕಳೆದ ಜೂನ್‌ 10ರಂದು ರಾತ್ರಿ‌ ಮನೆಯ ಪಕ್ಕದಲ್ಲೇ ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ..

ಬರ್ಬರವಾಗಿ ಕೊಚ್ಚಿ ಕೊಂದ ದೋಸ್ತರು
ಬರ್ಬರವಾಗಿ ಕೊಚ್ಚಿ ಕೊಂದ ದೋಸ್ತರು

ಬೆಳಗಾವಿ : ಕಳೆದ 20 ದಿನಗಳ ಹಿಂದೆ ಯೂಟ್ಯೂಬ್ ಚಾನಲ್​​​ ನಡೆಸುತ್ತಿದ್ದ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಕೊಲೆ ಮಾಡಿದ್ದ ಮೂವರು ಆರೋಪಿಗಳನ್ನು ಘಟಪ್ರಭಾ ಪೊಲೀಸರು ಬಂಧಿಸಿದ್ದಾರೆ. ಮೂಡಲಗಿ ತಾಲೂಕಿನ ರಾಜಾಪೂರ ಗ್ರಾಮದ ಜ್ಯೋತೆಪ್ಪಾ ಮುಗದುಮ್(27), ವಸಂತ ಬಮ್ಮವ್ವಗೋಳ(27) ಹಾಗೂ ಬಸವನಗರ ಕಲ್ಲೋಳ್ಳಿ‌ ಗ್ರಾಮದ ಭೀಮಪ್ಪ ಬಾನಸಿ (27) ಬಂಧಿತರು. ಆರೋಪಿಗಳೆಲ್ಲರೂ ಕೊಲೆಯಾದ ಶಿವಾನಂದನ ಕಾಚ್ಯಾಗೋಳ ಎಂಬುವನ ಸ್ನೇಹಿತರಾಗಿದ್ದವರು.

ಕೊಲೆ ಹಿಂದಿನ ರಹಸ್ಯ

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಘಟಪ್ರಭಾ ಪೊಲೀಸ್ ಠಾಣಾ ವ್ಯಾಪ್ತಿಯ ರಾಜಾಪುರ ಗ್ರಾಮದ ಚೂನಿಮಟ್ಟಿ ತೋಟದ ನಿವಾಸಿಯಾಗಿರುವ ಶಿವಾನಂದನ ಕಾಚ್ಯಾಗೋಳ ಯೂಟ್ಯೂಬ್ ಚಾನಲ್ ನಡೆಸುತ್ತಿದ್ದ. ಕೊಲೆ ಆರೋಪದಲ್ಲಿ ಈಗಾಗಲೇ ಬಂಧಿತನಾಗಿರುವ ಭೀಮಪ್ಪ ಬಾನಸಿಯ ತಂಗಿಯನ್ನು ಅತ್ಯಾಚಾರಕ್ಕೆ ಯತ್ನಿಸಿ 2014ರಲ್ಲಿ ಪೋಕ್ಸೊ ಕಾಯ್ದೆಯಡಿ ಶಿವಾನಂದ ಜೈಲು ಸೇರಿರುತ್ತಾನೆ.

ಘಟನೆ ಕುರಿತು ಎಸ್​​​ಪಿ ಲಕ್ಷ್ಮಣ ನಿಂಬರಗಿ ಮಾಹಿತಿ

1 ವರ್ಷ 9 ತಿಂಗಳು ಜೈಲುವಾಸ ಅನುಭವಿಸಿದ್ದ ಶಿವಾನಂದ ಬಳಿಕ ಆರೋಪಿ ಭೀಮಪ್ಪನನ್ನು ಸಂಪರ್ಕಿಸಿ ನಿನ್ನ ತಂಗಿಯನ್ನು ಮದುವೆಯಾಗುವುದಾಗಿ ಭರವಸೆ ಕೊಡುತ್ತಾನೆ‌. ಆತನ ಮಾತು ನಂಬಿದ ಭೀಮಪ್ಪ ಬಾನಸಿ ಶಿವಾನಂದನಿಗೆ ಜಾಮೀನು ಕೊಡಿಸಿ ಗೆಳೆಯನ ಕೃತ್ಯವನ್ನೆಲ್ಲ ಸಹಿಸಿಕೊಂಡು ಹೊರ ಕರೆದುಕೊಂಡು ಬಂದಿದ್ದ.

ಇದಾದ ಎರಡ್ಮೂರು ವರ್ಷಗಳ ಕಾಲ ಸುಮ್ಮನಿದ್ದ ಶಿವಾನಂದ ಕ್ರಮೇಣ ನಿನ್ನ ತಂಗಿಯನ್ನ ಮದುವೆ ಆಗವುದಿಲ್ಲ ಎಂದು ಹೇಳುವ ಮೂಲಕ‌ ಉಲ್ಟಾ ಹೊಡೆಯುತ್ತಾನೆ. ಇದರಿಂದಾಗಿ ಕೊಲೆ ಆರೋಪಿ ಭೀಮಪ್ಪ ರೊಚ್ಚಿಗೆದಿದ್ದಲ್ಲದೇ ಸೇಡು ತೀರಿಸಿಕೊಳ್ಳಲು ಹೊಂಚು ಹಾಕಿದ್ದ.

ಇತ್ತ ಇನ್ನೋರ್ವ ಆರೋಪಿಯಾಗಿ ಜೈಲು ಸೇರಿರುವ ಜ್ಯೋತೆಪ್ಪ ಬೇರೊಬ್ಬಳ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದ ವಿಡಿಯೋಗಳು ಶಿವಾನಂದ ಬಳಿ ಇದ್ದವು. ಹಣ ನೀಡದಿದ್ದರೆ ವಿಡಿಯೋವನ್ನ ಯೂಟ್ಯೂಬ್​ನಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ.

ಅಲ್ಲದೆ ಇನ್ನೋರ್ವ ಆರೋಪಿ ವಸಂತನ ಬಳಿ ಕಾರು ಪಡೆದು ವಾಪಸು ಕೊಡಲು ಸತಾಯಿಸುತ್ತಿದ್ದ. ವಾಪಸು ಕೇಳಿದರೆ ಇದಕ್ಕೆ ದಾಖಲೆ ಇಲ್ಲ. ಪೊಲೀಸರಿಗೆ ನಾನೇ ದೂರು ಕೊಡುತ್ತೇನೆ ಎಂದು ಬೆದರಿಸುತ್ತಿದ್ದನಂತೆ. ಹೀಗಾಗಿ, ಮೂವರು ಆರೋಪಿಗಳು ಒಟ್ಟು ಸೇರಿ ಈತನ ಉಸಿರು ನಿಲ್ಲಿಸಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಕಳೆದ ಜೂನ್‌ 10ರಂದು ರಾತ್ರಿ‌ ಮನೆಯ ಪಕ್ಕದಲ್ಲೇ ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

ಓದಿ: ಬೆಳಗಾವಿಯಲ್ಲಿ ಕೋವ್ಯಾಕ್ಸಿನ್,ಕೋವಿಶೀಲ್ಡ್ ಲಸಿಕೆ ಔಟ್ ಆಫ್ ಸ್ಟಾಕ್ : ಸಾರ್ವಜನಿಕರಿಂದ ಆಕ್ರೋಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.