ETV Bharat / state

ಎಣ್ಣೆ ಪಾರ್ಟಿಗೆ ಕರೆದು ಸ್ನೇಹಿತನನ್ನೇ ಹತ್ಯೆಗೈದ ಬೆಳಗಾವಿಯ ದುಷ್ಕರ್ಮಿಗಳು - Murder in drinks party at Belagavi

ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ಮಧ್ಯೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿದೆ. ಬಳಿಕ ಸೂರಜ್​ಗೆ ರಾಡ್​ನಿಂದ ಹೊಡೆದು ಹತ್ಯೆಗೈದಿರುವ ದುಷ್ಕರ್ಮಿಗಳು, ರಸ್ತೆ ಪಕ್ಕ ಶವ ಎಸೆದು ಪರಾರಿಯಾಗಿದ್ದಾರೆ..

Murder in drinks party at Belagavi
ಎಣ್ಣೆ ಪಾರ್ಟಿಯಲ್ಲಿ ಸ್ನೇಹಿತನ ಹತ್ಯೆ
author img

By

Published : Nov 29, 2021, 4:00 PM IST

ಬೆಳಗಾವಿ : ಎಣ್ಣೆ ಪಾರ್ಟಿಗೆಂದು ಆಹ್ವಾನಿಸಿ ಸ್ನೇಹಿತನನ್ನೇ ದುಷ್ಕರ್ಮಿಗಳು ಹತ್ಯೆಗೈದಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ವಡಗಾವಿಯ ಸೂರಜ್ ಗೊಂದವಾಡ್ಕರ್ (23) ಕೊಲೆಯಾದ ದುರ್ದೈವಿ.

ಮನೆಯಲ್ಲಿದ್ದ ಸೂರಜ್​ಗೆ ಫೋನ್ ಮಾಡಿರುವ ದುಷ್ಕರ್ಮಿಗಳು, ಎಣ್ಣೆ ಪಾರ್ಟಿಗೆ ಆಹ್ವಾನಿಸಿದ್ದಾರೆ. ನಂತರ ಹಳೆ ಬೆಳಗಾವಿಯ ಯಡಿಯೂರಪ್ಪ ಮಾರ್ಗದಲ್ಲಿ ಸ್ನೇಹಿತರೆಲ್ಲರೂ ಪಾರ್ಟಿ ಮಾಡಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ಮಧ್ಯೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿದೆ. ಬಳಿಕ ಸೂರಜ್​ಗೆ ರಾಡ್​ನಿಂದ ಹೊಡೆದು ಹತ್ಯೆಗೈದಿರುವ ದುಷ್ಕರ್ಮಿಗಳು, ರಸ್ತೆ ಪಕ್ಕ ಶವ ಎಸೆದು ಪರಾರಿಯಾಗಿದ್ದಾರೆ.

ಸೂರಜ್ ಹತ್ಯೆಗೆ ಆತನ ಸ್ನೇಹಿತರೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ: ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರ​ ದಾಳಿ: ತಪ್ಪಿಸಿಕೊಳ್ಳಲು ಯತ್ನಿಸಿದ ವ್ಯಕ್ತಿ ಅನುಮಾನಾಸ್ಪದ ಸಾವು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.