ಬೆಳಗಾವಿ : ಜನ್ಮ ನೀಡಿದ ಮಗನನ್ನು ನೋಡಲು ಹೆಂಡತಿಯ ಮನೆಗೆ ಬಂದ ಗಂಡನನ್ನು, ಪತ್ನಿ ಹಾಗೂ ಕುಟುಂಬಸ್ಥರು ಸೇರಿ ಕೊಲೆಗೈದ ಅಮಾನವೀಯ ಘಟನೆ ನಗರದಲ್ಲಿ ನಡೆದಿದೆ.
ನಗರದ ಕಿರಣ್ ಲೊಕರೆ ಹಾಗೂ ಸವಿತಾ 5 ವರ್ಷಗಳಿಂದ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಇವರ ಸುಮಧುರ ಪ್ರೇಮದ ಫಲವಾಗಿ ಮುದ್ದಾದ ಗಂಡು ಮಗು ಜನಿಸಿತ್ತು. ಆದರೆ ಅದ್ಯಾರ ಕಣ್ಣು ಅವರ ಪ್ರೀತಿ ಮೇಲೆ ಬಿತ್ತೋ ಗೊತ್ತಿಲ್ಲ. ದಂಪತಿ ಮಧ್ಯೆ ಮನಸ್ತಾಪ ಸೃಷ್ಟಿಯಾಗಿ ಕಳೆದ ಒಂದು ವರ್ಷದಿಂದ ದೂರವಾಗಿದ್ರು. ಪತ್ನಿ ಸವಿತಾ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ಇಂದು ಎರಡು ವರ್ಷದ ಮಗನೊಂದಿಗೆ ಸವಿತಾ ಬೆಂಗಳೂರಿನಿಂದ ಬೆಳಗಾವಿಯ ತವರುಮನೆಗೆ ಬಂದಿದ್ದರು.
ಎಷ್ಟಾದ್ರೂ ತಂದೆ ಅಲ್ವೇ, ಮಗನನ್ನ ನೋಡುವ ಹಂಬಲದಿಂದ ಅತ್ತೆ ಮನೆಗೆ ಬಂದ ಕಿರಣ್‌ನನ್ನು ಪತ್ನಿ ಸಂಬಂಧಿಕರು ಅಟ್ಟಾಡಿಸಿ, ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ. ಪತ್ನಿ ಸವಿತಾ, ಮಾವ ವಿಠ್ಠಲ, ಅತ್ತೆ ಸುರೇಖಾ, ಭಾಮೈದ ಜ್ಯೋತಿಬಾ ಓಣಿಯಲ್ಲೆಲ್ಲ ಓಡಾಡಿಸಿ ಹೊಡೆದು ಕಿರಣ್‌ನನ್ನು ಕೊಲೆಗೈದಿದ್ದಾರೆ.
ಶಹಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.