ಬೆಳಗಾವಿ : ಮಾರುಕಟ್ಟೆಯಲ್ಲಿ ಜನಜಂಗುಳಿ ತಪ್ಪಿಸಲು ಜಿಲ್ಲಾಡಳಿತ ಹೊಸ ಪ್ಲ್ಯಾನ್ ಮಾಡಿದ್ದು, ನಗರದ ನಾಲ್ಕು ಕಡೆ ಹೋಲ್ ಸೇಲ್ ತರಕಾರಿ ಮಾರುಕಟ್ಟೆಗಳನ್ನು ತೆರೆದಿದೆ.
ಈವರೆಗೆ ನಗರದ ಎಪಿಎಂಸಿ ಆವರಣದಲ್ಲಿ ಮಾತ್ರ ಹೋಲ್ ಸೇಲ್ ತರಕಾರಿ ಮಾರುಕಟ್ಟೆ ಇತ್ತು. ಹೀಗಾಗಿ ಲಾಕ್‌ಡೌನ್ ಮಧ್ಯೆಯೂ ಜನಜಂಗುಳಿ ಇರುತ್ತಿತ್ತು. ಈ ಸಮಸ್ಯೆಗೆ ಇತಿಶ್ರೀ ಹಾಡಲು ಜಿಲ್ಲಾಡಳಿತ ನಗರದ ನಾಲ್ಕು ಕಡೆ ಮಾರುಕಟ್ಟೆಗಳನ್ನು ತೆರೆದಿದೆ.
ಹಿಂಡಾಲ್ಕೋ ಮೈದಾನ, ರಾಮತೀರ್ಥ ನಗರದ ಆರ್‌ಟಿಓ ಮೈದಾನ, ಪೊದ್ದಾರ್ ಶಾಲಾ ಮೈದಾನ, ಬಿ.ಎಸ್.ಯಡಿಯೂರಪ್ಪ ಮಾರ್ಗದ ಮಾಲಿನಿ ಸಿಟಿ ಮೈದಾನದಲ್ಲಿ ಮಾರುಕಟ್ಟೆ ತೆರೆಯಲಾಗಿದೆ .