ETV Bharat / state

ಅಥಣಿ ಉಪ ಚುನಾವಣೆಯಲ್ಲಿ ಗೆಲುವು ನಮ್ಮದೇ: ಎಂ.ಬಿ‌.ಪಾಟೀಲ್​​ - ಅಥಣಿಯಲ್ಲಿ ಮಾಜಿ ಸಚಿವ ಎಂ.ಬಿ‌. ಪಾಟೀಲ್​ ಪ್ರತಿಕ್ರಿಯೆ

ಅಥಣಿಯಲ್ಲಿ ಪಕ್ಷೇತರರಾಗಿ ಸ್ಪರ್ಧೆಗಿಳಿದಿದ್ದ ಮೂವರು ಅಭ್ಯರ್ಥಿಗಳು ಕಾಂಗ್ರೆಸ್ ಪಕ್ಷದ ನಾಯಕರಿಗೆ ಬೆಲೆ ಕೊಟ್ಟು ನಾಮಪತ್ರ ಹಿಂದಕ್ಕೆ ತೆಗೆದುಕೊಂಡಿದ್ದಾರೆ. ಎಲ್ಲರೂ ಪಕ್ಷದ ಗೆಲುವಿಗೆ ಒಗ್ಗಟ್ಟಿನಿಂದ ಶ್ರಮಿಸಲಿದ್ದೇವೆ ಎಂದು ಮಾಜಿ ಸಚಿವ ಎಂ.ಬಿ‌. ಪಾಟೀಲ್​ ಹೇಳಿದ್ರು.

ಅಥಣಿಯಲ್ಲಿ ಮಾಜಿ ಸಚಿವ ಎಂ.ಬಿ‌. ಪಾಟೀಲ್​ ಪ್ರತಿಕ್ರಿಯೆ
author img

By

Published : Nov 21, 2019, 5:07 PM IST

ಚಿಕ್ಕೋಡಿ: ಪಕ್ಷೇತರರಾಗಿ ಸ್ಪರ್ಧೆಗಿಳಿದಿದ್ದ ಮೂವರು ಅಭ್ಯರ್ಥಿಗಳು ಕಾಂಗ್ರೆಸ್ ಪಕ್ಷದ ನಾಯಕರಿಗೆ ಬೆಲೆ ಕೊಟ್ಟು ನಾಮಪತ್ರ ಹಿಂದಕ್ಕೆ ತೆಗೆದುಕೊಂಡಿದ್ದಾರೆ. ಎಲ್ಲರೂ ಪಕ್ಷದ ಗೆಲುವಿಗೆ ಒಗ್ಗಟ್ಟಿನಿಂದ ಶ್ರಮಿಸುತ್ತೇವೆ ಎಂದು ಮಾಜಿ ಸಚಿವ ಎಂ.ಬಿ‌.ಪಾಟೀಲ್​ ಹೇಳಿದರು.

ಅಥಣಿಯಲ್ಲಿ ಮಾಜಿ ಸಚಿವ ಎಂ.ಬಿ‌.ಪಾಟೀಲ್​ ಪ್ರತಿಕ್ರಿಯೆ

ಅಥಣಿ ತಹಸೀಲ್ದಾರ್​​ ಕಚೇರಿಯಲ್ಲಿ ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಹಿಂದಕ್ಕೆ ಪಡೆದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಶಹಜಾನ ಡೊಂಗರಗಾಂವ, ಸತೀಶಗೌಡ ಪಾಟೀಲ, ಸದಾಶಿವ ಬುಟಾಳಿ ಇವರೆಲ್ಲ ನಾಮಪತ್ರ ವಾಪಸ್​ ಪಡೆದಿದ್ದಾರೆ. ಇವರೆಲ್ಲರೂ ನಮ್ಮ ಪಕ್ಷದ ಅಭ್ಯರ್ಥಿ ಗಜಾನನ ಮಂಗಸೂಳಿಯವರನ್ನು ಗೆಲ್ಲಿಸಲು ಶ್ರಮಿಸಲಿದ್ದಾರೆ. ಸಾಮೂಹಿಕ ನಾಯಕತ್ವದಲ್ಲಿ ಅಥಣಿ ಉಪ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇಲ್ಲಿನ ಜನರು ನೆರೆ ಬಂದು ಬದುಕು ಕಳೆದುಕೊಂಡಾಗ ಇಲ್ಲಿನ ಶಾಸಕರಾದ ಮಹೇಶ ಕುಮಟಳ್ಳಿ ಅವರು ಮುಂಬೈ ಹೋಟೆಲ್​​ನಲ್ಲಿದ್ದುಕೊಂಡು ಸಂತ್ರಸ್ತರಿಗೆ ಮೋಸ ಮಾಡಿದ್ದಾರೆ. ನೆರೆ ಪೀಡಿತರ ಶಾಪ ಅವರಿಗೆ ತಟ್ಟದೆ ಬಿಡುವುದಿಲ್ಲ ಎಂದರು.

Intro:ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಮೂರು ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಹಿಂದಕ್ಕೆ ತೆಗೆದುಕೊಂಡಿದ್ದಾರೆ : ಎಂ ಬಿ ಪಾಟೀಲBody:

ಚಿಕ್ಕೋಡಿ :

ನಾಮಪತ್ರ ಕೊಟ್ಟಿರುವವರು ಎಲ್ಲರೂ ಕಾಂಗ್ರೆಸ್ ಪಕ್ಷದ ಮೇಲೆ ತಮ್ಮ ವಿಶ್ವಾಸ ಮರುಸ್ಥಾಪಿಸಿ ಕಾಂಗ್ರೆಸ್ ಪಕ್ಷದ ನಾಯಕರಿಗೆ ಬೆಲೆ ಕೊಟ್ಟು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಮೂರು ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಹಿಂದಕ್ಕೆ ತೆಗೆದುಕೊಂಡಿದ್ದಾರೆ ಎಂದು ಮಾಜಿ ಸಚಿವ ಎಂ.ಬಿ‌. ಪಾಟೀಲ ಹೇಳಿದರು

ಅಥಣಿ ತಹಶಿಲ್ದಾರ ಕಚೇರಿಯಲ್ಲಿ ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಹಿಂದಕ್ಕೆ ಪಡೆದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಶಹಜಾನ ಡೊಂಗರಗಾಂವ, ಸತೀಶಗೌಡಾ ಪಾಟೀಲ, ಸದಾಶಿವ ಬುಟಾಳಿ ಇವರೆಲ್ಲ ಕಾಂಗ್ರೆಸ್ ಪಕ್ಷ ಒಂದು ಕುಟುಂಬ, ಇವರೆಲ್ಲರೂ ಗಜಾನನ ಮಂಗಸೂಳಿ ಅವರನ್ನು ಗೆಲ್ಲಿಸಲು ಎಲ್ಲರೂ ನೇತೃತ್ವ ವಹಿಸಿಕೊಳ್ಳುತ್ತೇವೆ. ಸಾಮೂಹಿಕ ನಾಯಕತ್ವದಲ್ಲಿ ಅಥಣಿ ಉಪಚುನಾವಣೆಯಲ್ಲಿ ವಿಜಯಶಾಲಿಯಾಗಲೂ ಶ್ರಮಿಸುತ್ತೇವೆ ಎಂದರು.

ಇಲ್ಲಿನ ಜನರು ನೆರೆ ಬಂದಾಗ ಬದುಕು ಕಳಿದುಕೊಂಡಾಗ ಇಲ್ಲಿನ ಶಾಸಕರಾದ ಮಹೇಶ ಕುಮಟಳ್ಳಿ ಅವರು ಬಾಂಬೆ ಹೋಟೆಲ್ ನಲ್ಲಿದ್ದರು ಜನರಿಗೆ ಏನೂ ಮೋಸ ಮಾಡಿದ್ದಾರೆ. ಆ ಸಂತ್ರಸ್ಥರ ಶಾಪ ಅವರಿಗೆ ಮುಟ್ಟದೆ ಬಿಡುವುದಿಲ್ಲ. ನಮ್ಮಲ್ಲಿ ಒಡಕು ಕಾಣಬಾರದು ಎಂದು ನಾವೆಲ್ಲರೂ ಒಂದಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ತರುವ ಪ್ರಯತ್ನ ಮಾಡುತ್ತೇವೆ. ಯಾವುದೇ ಷರತ್ತು ಇಲ್ಲದೇ ಬಂಡಾಯಗಾರರೆಲ್ಲ ನಾಮಪತ್ರ ವಾಪಸ್ ಪಡೆದಿದ್ದಾರೆ. ಡೊಂಗರಗಾಂವ್ ಮೇಲೆ ಬೆಂಬಲಿಗರ ಒತ್ತಾಯ ಬಹಳ ಇತ್ತು ಹೀಗಾಗಿ ಅವರು ಭಾವುಕರಾಗಿದ್ದಾರೆ. ಡೊಂಗರಗಾಂವ್ ಅವರಿಗೆ ಸೂಕ್ತ ಸಮಯದಲ್ಲಿ ಸೂಕ್ತ ಗೌರವ ಕೊಡುತ್ತೇವೆ ಎಂದು ಎಂಬಿ ಪಾಟೀಲ ಹೇಳಿದರು.

Conclusion:ಸಂಜಯ ಕೌಲಗಿ
ಚಿಕ್ಕೋಡಿ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.