ETV Bharat / state

ಪಕ್ಷ ಬೇರೆ ಇದ್ದರೂ ನೆಲ, ಜಲ ವಿಚಾರದಲ್ಲಿ ನಾವೆಲ್ಲ ಒಂದೇ: ಎಂಇಎಸ್‌ಗೆ ಸವದಿ ಎಚ್ಚರಿಕೆ - ಮಾಜಿ ಡಿಸಿಎಂ ಲಕ್ಷ್ಮಣ ಸವದಿ

ಎಂಇಎಸ್ ಸತ್ತ ಹೆಣ. ಅವರ ಪುಂಡಾಟಿಕೆ ಜೀವಂತವಾಗಿಡಲು ಮಹಾರಾಷ್ಟ್ರ ಹಾಗೂ ಬೆಳಗಾವಿಯಲ್ಲಿ ಕೆಲವರು ಪ್ರಯತ್ನಿಸುತ್ತಿದ್ದಾರೆ.- ಮಾಜಿ ಡಿಸಿಎಂ ಲಕ್ಷ್ಮಣ ಸವದಿ

Former DCM Lakshmana Savadi
ಮಾಜಿ ಡಿಸಿಎಂ ಲಕ್ಷ್ಮಣ ಸವದಿ
author img

By

Published : Dec 9, 2022, 3:31 PM IST

Updated : Dec 9, 2022, 4:52 PM IST

ಚಿಕ್ಕೋಡಿ: ಜಿಲ್ಲೆಯ ರಾಜಕಾರಣಿಗಳ ಪಕ್ಷಗಳು ಬೇರೆ ಬೇರೆಯಾಗಿದ್ದರೂ ನೆಲೆ, ಜಲ ವಿಷಯದಲ್ಲಿ ನಾವೆಲ್ಲರೂ ಒಂದೇ. ಎಂಇಎಸ್ ಪುಂಡರ ಆಟ ನಡೆಯೋದಿಲ್ಲ. ನಾವ್ಯಾರೂ ಇಲ್ಲಿ ಬಳೆ ಹಾಕಿಕೊಂಡಿಲ್ಲ, ಎಲ್ಲರೂ ಗಂಡಸರಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ್ ಸವದಿ ಹೇಳಿದರು. ಅಥಣಿ ತಾಲೂಕಿನ ನದಿ ಇಂಗಳಗಾಂವ ತೀರ್ಥ ಗ್ರಾಮದಲ್ಲಿ 4.96 ಲಕ್ಷ ರೂಪಾಯಿ ವೆಚ್ಚದಲ್ಲಿ ನಡೆದ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಹಲವು ವರ್ಷಗಳಿಂದ ಎಂಇಎಸ್ ಪುಂಡಾಟಿಕೆ ಮುಂದುವರಿಸಿಕೊಂಡು ಬಂದಿದೆ. ಇದೀಗ ಅದು ಸತ್ತ ಹೆಣವಾಗಿದೆ. ಅದನ್ನು ಜೀವಂತಗೊಳಿಸಲು ಮಹಾರಾಷ್ಟ್ರ ಹಾಗೂ ಬೆಳಗಾವಿಯಲ್ಲಿ ಕೆಲವರು ಪ್ರಯತ್ನ ಪಡುತ್ತಿದ್ದಾರೆ ಎಂದು ಹರಿಹಾಯ್ದರು. ಗಡಿ ವಿಚಾರವಾಗಿ ಉಭಯ ರಾಜ್ಯದಲ್ಲಿ ಗೊಂದಲ ಉದ್ಭವಿಸಿದೆ. ವ್ಯಾಪಾರ-ವಹಿವಾಟು ಮೇಲೆ ಪರಿಣಾಮ ಬೀರುತ್ತಿದೆ. ಮುಖ್ಯಮಂತ್ರಿ ಏಕನಾಥ್ ಶಿಂದೆ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ಅಂಥವರನ್ನು ಹದ್ದುಬಸ್ತಿನಲ್ಲಿಡಬೇಕೆಂದು ಮನವಿ ಮಾಡಿದರು.

ಮಾಜಿ ಡಿಸಿಎಂ ಲಕ್ಷ್ಮಣ ಸವದಿ

ಜತ್ತ ಕನ್ನಡಿಗರ ವಿಚಾರ: ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ 44 ಗ್ರಾಮಗಳು ಕರ್ನಾಟಕಕ್ಕೆ ಸೇರಬೇಕೆಂಬ ಬೇಡಿಕೆ ಹಿಂದಿನಿಂದಲೂ ಇವೆ. ಆದರೆ ಅಲ್ಲಿನ ಸರ್ಕಾರ ಅವರಿಗೆ ಮೂಲ ಸೌಕರ್ಯ ನೀಡಿಲ್ಲವೆಂದು ಅವರು ಕರುನಾಡಿಗೆ ಆಗಮಿಸುತ್ತಿದ್ದಾರೆ. ಅವರ ಆಗಮನ ಬೇಡ. ಅಲ್ಲಿಯೇ ಸರ್ಕಾರ ಅವರಿಗೆ ಮೂಲಸೌಕರ್ಯ ಒದಗಿಸಲಿ ಎಂದು ಹೇಳಿದರು.

ಇದನ್ನೂ ಓದಿ: ಗಡಿಯಲ್ಲಿರುವ ಕನ್ನಡಿಗರ ಪರ ನಿಲ್ಲುವಂತೆ ಸಿಎಂಗೆ ಅಶೋಕ್ ಚಂದರಗಿ ಒತ್ತಾಯ

Last Updated : Dec 9, 2022, 4:52 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.