ಬೆಳಗಾವಿ: ಉದ್ಯೋಗ ಕೊಡದಿದ್ರೆ ಯುವಕರು ತಮ್ಮ ಪದವಿ ಪ್ರಮಾಣ ಪತ್ರಗಳನ್ನು ನರೇಂದ್ರ ಮೋದಿಗೆ ಪೋಸ್ಟ್ ಮೂಲಕ ವಾಪಸ್ ಕಳುಹಿಸುವ ಕೆಲಸ ಮಾಡ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾರ್ನಿಂಗ್ ಕೊಟ್ಟಿದ್ದಾರೆ.
ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ನೇತೃತ್ವದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಿಸವಂತೆ ಆಗ್ರಹಿಸಿ ಸುವರ್ಣಸೌಧವರೆಗೆ ಹಮ್ಮಿಕೊಂಡ ಪಾದಯಾತ್ರೆಗೆ ಚಾಲನೆ ನೀಡುವುದಕ್ಕೂ ಮುಂಚೆ ಮಾಧ್ಯಮದವರೊಂದಿಗೆ ಡಿಕೆಶಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಯುವಕರಿಗೆ ವರ್ಷಕ್ಕೆ ಸರಿ ಸುಮಾರು 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಮಾತು ಕೊಟ್ಟಿದ್ದರು. ಆದರೀಗ ಆ ಮಾತಿನಂತೆ ಬಿಜೆಪಿ ನಡೆದುಕೊಂಡಿಲ್ಲ. ಹೀಗಾಗಿ ಯುವಕರಿಗೆ ಸರ್ಕಾರ ಉದ್ಯೋಗ ಕೊಡಬೇಕು. ಇಲ್ಲವೇ 9 ಸಾವಿರ ರೂ. ಭತ್ಯೆ ನೀಡಬೇಕು ಎಂದು ಒತ್ತಾಯಿಸಿದರು.
ಒಂದು ವೇಳೆ, ಯುವಕರಿಗೆ ಉದ್ಯೋಗ ಕೊಡದಿದ್ದರೆ ಮೋದಿಗೆ ಯುವಕರು ತಮ್ಮ ಪದವಿ ಸರ್ಟಿಫಿಕೇಟ್ಗಳನ್ನು ಪೋಸ್ಟ್ ಮೂಲಕ ವಾಪಸ್ ಕಳುಹಿಸುವ ಕೆಲಸ ಮಾಡುತ್ತಾರೆ. ನಾನು ಕೂಡ ಯುವಕರಿಗೆ ಕರೆ ಕೊಡ್ತೇನೆ.ಉದ್ಯೋಗ ಕೊಡಲಿಲ್ಲ ಅಂದ್ರೆ ಪದವಿ ಪ್ರಮಾಣ ಪತ್ರಗಳನ್ನು ಹಿಂದಿರುಗಿಸುವ ಚಳವಳಿ ಪ್ರಾರಂಭ ಮಾಡ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಕೇಂದ್ರ ಮಾಜಿ ಸಚಿವ ಆರ್ ಎಲ್ ಜಾಲಪ್ಪ ವಿಧಿವಶ.. ರಾಜ್ಯ ನಾಯಕರ ಸಂತಾಪ