ETV Bharat / state

ರಾಜ್ಯದಲ್ಲಿ ಸಿಎಂ ಬದಲಾವಣೆಗೆ 2023ರವರೆಗೂ ಕಾಯಬೇಕು : ಸತೀಶ್ ಜಾರಕಿಹೊಳಿ‌

ಹೋಮ -ಹವನದಿಂದ ಕೋವಿಡ್ ಕಡಿಮೆ ಆಗುತ್ತದೆ ಅಂತಾ ವೈಜ್ಞಾನಿಕವಾಗಿ ಸಾಬೀತುಪಡಿಸಿದ್ರೆ ನಾವು ಸ್ವಾಗತ ಮಾಡುತ್ತೇವೆ.ಇದರಿಂದ ಕೊರೊನಾ ಕಡಿಮೆಯಾದರೆ ಕಾಂಗ್ರೆಸ್ ವತಿಯಿಂದ ಅಭಯ್ ಪಾಟೀಲ್​ಗೆ ಸನ್ಮಾನ ಮಾಡುತ್ತೇವೆ. ಪೂಜೆಯಿಂದ ಕೊರೊನಾ ಹೋಗೋದಾದ್ರೆ ಎಂಬಿಬಿಎಸ್ ವೈದ್ಯರು ಯಾಕೆ ಬೇಕು ಎಂದು ಸತೀಶ್ ಜಾರಕಿಹೊಳಿ‌ ಪ್ರಶ್ನಿಸಿದ್ದಾರೆ..

Satish jarakiHoli
ಸತೀಶ್ ಜಾರಕಿಹೊಳಿ‌
author img

By

Published : May 30, 2021, 4:20 PM IST

‌ಬೆಳಗಾವಿ : ರಾಜ್ಯ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ಕುರಿತು ಚರ್ಚೆ ವಿಚಾರಕ್ಕೆ 2023ರ ಮೇನಲ್ಲಿ ಉತ್ತರ ಸಿಗುತ್ತೆ, ಅಲ್ಲಿಯವರೆಗೆ ವೇಟ್ ಮಾಡಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ‌ ಹೇಳಿದ್ದಾರೆ.

ನಾಯಕತ್ವ ಬದಲಾವಣೆ ಕುರಿತಂತೆ ಸತೀಶ್ ಜಾರಕಿಹೊಳಿ‌ ಹೇಳಿಕೆ

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಕೋವಿಡ್ ವಾರ್ ರೂಮ್ ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಸಿಎಂ ಬದಲಾವಣೆಗೆ 2023ರವರೆಗೂ ಕಾಯಬೇಕು.

ಸಿಡಿ ಕೇಸ್ ಬಗ್ಗೆ ನಮ್ಮ ಪಕ್ಷದ ವರಿಷ್ಠರು ಸರ್ಕಾರಕ್ಕೆ ಏನು ಹೇಳಬೇಕೋ ಅದನ್ನು ಹೇಳಿದ್ದಾರೆ. ಆದರೆ, ಅಂತಿಮವಾಗಿ ನ್ಯಾಯಾಲಯ, ತನಿಖಾ ತಂಡ ನಿರ್ಧರಿಸಬೇಕು. ವರದಿ ಬಂದ ಬಳಿಕ ಪಕ್ಷದ ವತಿಯಿಂದ ಏನು ಹೇಳಬೇಕೋ ಅದನ್ನ ಹೇಳೇ ಹೇಳ್ತೀವಿ ಎಂದರು.

ಸೆಮಿ ಲಾಕ್‌ಡೌನ್ ವೇಳೆ ಶಾಸಕ ಅಭಯ್ ಪಾಟೀಲ್ ನೇತೃತ್ವದಲ್ಲಿ ಹೋಮ-ಹವನ ಮಾಡಿರುವ ಶಾಸಕ ಅಭಯ್ ಪಾಟೀಲ್ ಬಿಟ್ಟು ನಾಲ್ವರ ವಿರುದ್ಧ ಕೇಸ್ ದಾಖಲಾದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸತೀಶ್ ಜಾರಕಿಹೊಳಿ‌, ಬಿಜೆಪಿಯಲ್ಲಿ ಇದೇನು ಹೊಸದೇನಲ್ಲ.

ಹೋಮ -ಹವನದಿಂದ ಕೋವಿಡ್ ಕಡಿಮೆ ಆಗುತ್ತದೆ ಅಂತಾ ವೈಜ್ಞಾನಿಕವಾಗಿ ಸಾಬೀತುಪಡಿಸಿದ್ರೆ ನಾವು ಸ್ವಾಗತ ಮಾಡುತ್ತೇವೆ.ಇದರಿಂದ ಕೊರೊನಾ ಕಡಿಮೆಯಾದರೆ ಕಾಂಗ್ರೆಸ್ ವತಿಯಿಂದ ಅಭಯ್ ಪಾಟೀಲ್​ಗೆ ಸನ್ಮಾನ ಮಾಡುತ್ತೇವೆ. ಪೂಜೆಯಿಂದ ಕೊರೊನಾ ಹೋಗೋದಾದ್ರೆ ಎಂಬಿಬಿಎಸ್ ವೈದ್ಯರು ಯಾಕೆ ಬೇಕು ಎಂದು ಸತೀಶ್ ಜಾರಕಿಹೊಳಿ‌ ಪ್ರಶ್ನಿಸಿದ್ದಾರೆ.

ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆ ಕುರಿತು ಜೂನ್ 7ರ ಬಳಿಕ ಮತ್ತೊಮ್ಮೆ ಬೆಳಗಾವಿ ಡಿಸಿ ಭೇಟಿಯಾಗಿ ಮೂರನೇ ಅಲೆ ಮುಂಜಾಗ್ರತಾ ಕ್ರಮ ಬಗ್ಗೆ ಚರ್ಚೆ ನಡೆಸಿ ನಮ್ಮ ಪಕ್ಷದ ಮೂಲಕ ಒತ್ತಾಯ ಮಾಡುತ್ತೇವೆ. ಜೂನ್ 7ರ ಬಳಿಕ ಲಾಕ್‌ಡೌನ್ ವಿಸ್ತರಣೆ ಬಗ್ಗೆ ರಾಜ್ಯ ಸರ್ಕಾರ ನಮ್ಮ ಸಲಹೆ ಏನೂ ಕೇಳಿಲ್ಲ.

ಜೂನ್ 7ರ ಬಳಿಕ ಕೋವಿಡ್ ಕಡಿಮೆ ಆದರೆ ಹಂತ ಹಂತವಾಗಿ ಅನ್‌ಲಾಕ್ ಮಾಡಬೇಕು. ಎಲ್ಲವನ್ನೂ ಒಮ್ಮೆಗೆ ಓಪನ್ ಮಾಡಿದ್ರೆ ಸಮಸ್ಯೆ ಆಗಲಿದೆ. ಸ್ಟೆಪ್ ವೈಸ್ ಮಾಡಿ ಜೂನ್ 30ರೊಳಗೆ ನಾರ್ಮಲ್ ಆಗುವಂತೆ ಮಾಡಿ ಎಂಬುದು ನಮ್ಮ ಸಲಹೆ ಎಂದರು.

ವಾತಾವರಣ ಶುದ್ಧಿ ಆಗುತ್ತದೆ ಎಂದರೆ ಹೋಮ-ಹವನ ಏಕೆ ಮಾಡಬಾರದು : ಶಾಸಕ ಅಭಯ್ ಪಾಟೀಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.