ETV Bharat / state

ನೀತಿ ಸಂಹಿತೆ ಉಲ್ಲಂಘನೆ: ಸಂಸದೆ ಮಂಗಳಾ ಅಂಗಡಿ ಸೇರಿ ನಾಲ್ವರ ವಿರುದ್ಧ ದೂರು - ನಂದಗಡ ಠಾಣೆಯಲ್ಲಿ ದೂರು

ಖಾನಾಪುರ ತಾಲೂಕಿನ ಹಿರೇಮುನವಳ್ಳಿ ಗ್ರಾಮದಲ್ಲಿ ಲಿಂಗಾಯತ ಸಮಾಜದ ಸಭೆಯಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಭೆ ಆಯೋಜನೆಗೆ ಚುನಾವಣಾಧಿಕಾರಿಗಳಿಂದ‌ ಅನುಮತಿ ಪಡೆದಿರಲಿಲ್ಲ ಎಂದು ದೂರಲಾಗಿದೆ.

mp mangala angadi
ಸಂಸದೆ ಮಂಗಳಾ ಅಂಗಡಿ
author img

By

Published : May 4, 2023, 10:05 AM IST

ಬೆಳಗಾವಿ: ಸಂಸದೆ ಮಂಗಳಾ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ವಿಧಾನ ಪರಿಷತ್ ಮಾಜಿ ಸಚೇತಕ ಮಹಾಂತೇಶ ಕವಟಗಿಮಠ ಮತ್ತು ಮಲಪ್ರಭಾ ಶುಗರ್ಸ್ ಮಾಜಿ ಅಧ್ಯಕ್ಷ ಮೋಹನ ಸಂಬರಗಿ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪ ಹೊರಿಸಿ ಬುಧವಾರ ನಂದಗಡ ಠಾಣೆಗೆ ದೂರು ನೀಡಲಾಗಿದೆ. ಮಂಗಳವಾರ ರಾತ್ರಿ ಖಾನಾಪುರ ತಾಲೂಕಿನ ಹಿರೇಮುನವಳ್ಳಿ ಗ್ರಾಮದಲ್ಲಿ ಲಿಂಗಾಯತ ಸಮಾಜದ ಆಯೋಜಿಸಿ 500ಕ್ಕೂ ಹೆಚ್ಚು ಮುಖಂಡರನ್ನು ಸೇರಿಸಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಲಾಗಿತ್ತು. ಈ ಸಭೆ ಆಯೋಜನೆ ಮುನ್ನ ಚುನಾವಣಾಧಿಕಾರಿಗಳಿಂದ‌ ಯಾವುದೇ ಅನುಮತಿ ಪಡೆದಿರಲಿಲ್ಲ. ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಿದ್ದರು ಎಂದು ಚುನಾವಣೆಯ ನೀತಿ ಸಂಹಿತೆ ಪಾಲನೆಯ ಅಧಿಕಾರಿ ರಾಜೇಂದ್ರ ದೂರು ದಾಖಲಿಸಿದ್ದಾರೆ.

ಸಚಿವೆಗೆ ದಂಡ: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಡಿ ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವೆ ಅನ್ನಪೂರ್ಣ ದೇವಿ ಅವರನ್ನು ಜಾರ್ಖಂಡ್​ನ ಹಜಾರಿಬಾಗ್ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿದೆ. ನ್ಯಾಯಾಲಯವು ಅನ್ನಪೂರ್ಣ ದೇವಿ ಅವರಿಗೆ 200 ರೂಪಾಯಿ ದಂಡ ಕೂಡಾ ವಿಧಿಸಿದೆ. 2019ರ ಮೇ 13ರಂದು ಮತದಾನ ಮಾಡಲು ಅನ್ನಪೂರ್ಣ ದೇವಿ ಪಕ್ಷದ ಚುನಾವಣಾ ಚಿಹ್ನೆ ಧರಿಸಿ ಮತದಾನ ಕೇಂದ್ರಕ್ಕೆ ಆಗಮಿಸಿದ್ದರು ಎಂದು ಜಾರ್ಖಂಡ್ ವಿಕಾಸ್ ಮೋರ್ಚಾ (ಜೆವಿಎಂ) ನಾಯಕ ಮಹೇಶ್ ರಾಮ್ ದೂರು ದಾಖಲಿಸಿದ್ದರು. ಈ ದೂರಿನ ಮೇರೆಗೆ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 130 (ಇ) ಅಡಿಯಲ್ಲಿ ನ್ಯಾಯಾಲಯ ವಿಚಾರಣೆ ನಡೆಸಿತ್ತು. ಚಾರ್ಜ್‌ಶೀಟ್​ ಸಲ್ಲಿಸಲಾಗಿತ್ತು. 11 ಮಂದಿಯ ಸಾಕ್ಷ್ಯ ಒದಗಿಸಲಾಗಿತ್ತು. ಅಂತಿಮ ವಿಚಾರಣೆ ನಡೆಸಿದ ನ್ಯಾಯಾಧೀಶೆ ಮರ್ಯಮ್ ಹೆಂಬ್ರಾಮ್ ಅವರು ಸಚಿವೆಯನ್ನು ದೋಷಿ ಎಂದು ಘೋಷಿಸಿ, ದಂಡ ವಿಧಿಸಿದ್ದಾರೆ. ದಂಡ ಕಟ್ಟದಿದ್ದಲ್ಲಿ ಒಂದು ದಿನ ಸಾದಾ ಜೈಲುವಾಸ ಅನುಭವಿಸಬೇಕಾಗುತ್ತದೆ ಎಂದು ತಮ್ಮ ಆದೇಶದಲ್ಲಿ ಎಚ್ಚರಿಸಿದ್ದಾರೆ.

ಆರ್‌ಜೆಡಿ ಪ್ರಭಾವಿ ನಾಯಕಿ: ಅನ್ನಪೂರ್ಣ ದೇವಿ ಪರ ವಕೀಲ ನವೀಶ್ ಸಿನ್ಹಾ, ಈ ನಿರ್ಧಾರವನ್ನು ಸೆಷನ್​ ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಹೇಳಿದ್ದಾರೆ. ದೇವಿ ಜಾರ್ಖಂಡ್ ಆರ್‌ಜೆಡಿಯಲ್ಲಿ ಪ್ರಭಾವಿ ನಾಯಕಿಯಾಗಿದ್ದರು. ಆರ್‌ಜೆಡಿಯ ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡಿದ್ದರು. ಲಾಲು ಪ್ರಸಾದ್ ಅವರಿಗೂ ತುಂಬಾ ನಿಷ್ಠರಾಗಿದ್ದರು. 2019ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಬಿಜೆಪಿ ಸೇರಿದ್ದರು. ನಂತರ ಪಕ್ಷ ಅವರನ್ನು ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ಮಾಡಿತ್ತು. ಪ್ರಧಾನಿ ಮೋದಿ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಕೇಂದ್ರ ಶಿಕ್ಷಣ ಖಾತೆಯ ರಾಜ್ಯ ಸಚಿವರನ್ನಾಗಿ ನೇಮಕ ಮಾಡಲಾಗಿತ್ತು.

ಇದನ್ನೂಓದಿ: ಗಣಿಧಣಿಗಳ ಕ್ಷೇತ್ರದಲ್ಲಿ ಒಂದೆಡೆ ಕುಟುಂಬದಲ್ಲೇ ಪೈಪೋಟಿ.. ಇನ್ನೊಂದೆಡೆ ಹಳೆ ಹುಲಿಗಳ ನಡುವೆ ಗುದ್ದಾಟ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.