ಚಿಕ್ಕೋಡಿ : ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಪಟ್ಟಣದಲ್ಲಿ ಕೋವಿಡ್-19 ಸೋಂಕು ಇಬ್ಬರಿಗೆ ತಗುಲಿದ ಪರಿಣಾಮ ಆತಂಕಗೊಂಡಿರುವ ಜನರು ಒಂದು ವಾರದ ಸ್ವಯಂ ಘೋಷಿತ ಲಾಕ್ಡೌನ್ಗೆ ನಿರ್ಧರಿಸಿದ್ದಾರೆ.
ಧಾರವಾಡಕ್ಕೆ ಹೋಗಿ ಬಂದಿರುವ ವ್ಯಕ್ತಿಯೋರ್ವನಿಗೆ ಸೋಂಕು ತಗುಲಿದ್ದು, ಆತ ಹಲವು ಜನರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದಾನೆ. ಪರಿಣಾಮ ಆತ ಚಿಕಿತ್ಸೆ ಪಡೆದ ಖಾಸಗಿ ಆಸ್ಪತ್ರೆಯನ್ನೂ ಸೀಲ್ ಡೌನ್ ಮಾಡಲಾಗಿದೆ. ಅಲ್ಲದೆ ಈಗಾಗಲೇ 10 ಜನರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ.
ಐನಾಪುರ ಜನತೆಯ ನಿದ್ದೆಗೆಡಿಸಿದ ಕೊರೊನಾ: ಸ್ವಯಂಘೋಷಿತ ಲಾಕ್ಡೌನ್ಗೆ ಮುಂದಾದ ಜನ! - chikkodi covid news
ಕೊರೊನಾ ಮಹಾಮಾರಿ ಸೋಂಕಿಗೆ ಇಡೀ ಜಗತ್ತೇ ತತ್ತರಿಸಿದ್ದು, ಇದೀಗ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಪಟ್ಟಣದಲ್ಲಿನ ಜನ ಸ್ವಯಂಘೋಷಿತ ಲಾಕ್‍ಡೌನ್ ಮಾಡಿಕೊಂಡಿದ್ದಾರೆ.
Breaking News
ಚಿಕ್ಕೋಡಿ : ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಪಟ್ಟಣದಲ್ಲಿ ಕೋವಿಡ್-19 ಸೋಂಕು ಇಬ್ಬರಿಗೆ ತಗುಲಿದ ಪರಿಣಾಮ ಆತಂಕಗೊಂಡಿರುವ ಜನರು ಒಂದು ವಾರದ ಸ್ವಯಂ ಘೋಷಿತ ಲಾಕ್ಡೌನ್ಗೆ ನಿರ್ಧರಿಸಿದ್ದಾರೆ.
ಧಾರವಾಡಕ್ಕೆ ಹೋಗಿ ಬಂದಿರುವ ವ್ಯಕ್ತಿಯೋರ್ವನಿಗೆ ಸೋಂಕು ತಗುಲಿದ್ದು, ಆತ ಹಲವು ಜನರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದಾನೆ. ಪರಿಣಾಮ ಆತ ಚಿಕಿತ್ಸೆ ಪಡೆದ ಖಾಸಗಿ ಆಸ್ಪತ್ರೆಯನ್ನೂ ಸೀಲ್ ಡೌನ್ ಮಾಡಲಾಗಿದೆ. ಅಲ್ಲದೆ ಈಗಾಗಲೇ 10 ಜನರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ.
ಸಂತೆ ರದ್ದು: ಐನಾಪುರ ಪಟ್ಟಣದಲ್ಲಿ ಪ್ರತಿ ಶನಿವಾರ ಮತ್ತು ಬುಧವಾರ ನಡೆಯುವ ಸಂತೆಯನ್ನು ರದ್ದು ಮಾಡಲಾಗಿದೆ. ಆಸ್ಪತ್ರೆ ಮತ್ತು ಮೆಡಿಕಲ್ ಶಾಪ್ ಹೊರತುಪಡಿಸಿದರೆ ಉಳಿದೆಲ್ಲಾ ಅಂಗಡಿ ಮುಗ್ಗಟ್ಟುಗಳನ್ನು ಸ್ವಯಂಪ್ರೇರಿತರಾಗಿ ಲಾಕ್‍ಡೌನ್ ಮಾಡಲಾಗಿದೆ. ಅಲ್ಲದೇ ಐನಾಪುರದ ವ್ಯಕ್ತಿಯೋರ್ವನಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಆತನ ಮನೆಯನ್ನು ಸಹ ಸೀಲ್ ಡೌನ್ ಮಾಡಲಾಗಿದೆ.