ಬೆಳಗಾವಿ: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯ ನೂತನ ಕುಲಪತಿ ಆಗಿ ಡಾ. ವಿದ್ಯಾಶಂಕರ ಎಸ್ ನೇಮಕಗೊಂಡಿದ್ದಾರೆ. ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಆದೇಶದ ಮೇರೆಗೆ ಡಾ. ವಿದ್ಯಾಶಂಕರ ಅವರು ಮೂರು ವರ್ಷಗಳ ಅವಧಿಗೆ ವಿಟಿಯು ಕುಲಪತಿ ಆಗಿ ನೇಮಕಗೊಂಡಿದ್ದಾರೆ.
2016, ಸೆ.24 ರಿಂದ ಈವರೆಗೆ ಪ್ರೊ.ಕರಿಸಿದ್ದಪ್ಪ ಎರಡು ಅವಧಿಗೆ ವಿಟಿಯು ವಿಸಿ ಆಗಿದ್ದರು. ಸೆ. 30ಕ್ಕೆ ಪ್ರೊ. ಕರಿಸಿದ್ದಪ್ಪ ಸೇವಾ ನಿವೃತ್ತಿಯಾಗಲಿರುವ ಹಿನ್ನೆಲೆಯಲ್ಲಿ ವಿಟಿಯು ನೂತನ ಕುಲಪತಿಯಾಗಿ ಡಾ. ವಿದ್ಯಾಶಂಕರ ನೇಮಕಗೊಂಡಿದ್ದಾರೆ. ಡಾ. ವಿದ್ಯಾಶಂಕರ ಎಸ್ ಈ ಮೊದಲು ರಾಜ್ಯ ಮುಕ್ತ ವಿವಿಯ ಕುಲಪತಿ ಆಗಿದ್ದರು.
![VC ಆಗಿ ವಿದ್ಯಾಶಂಕರ ನೇಮಕ](https://etvbharatimages.akamaized.net/etvbharat/prod-images/kn-bgm-vtu-new-vc-appointment-ka-10065_29092022193525_2909f_1664460325_406.jpg)
(ಓದಿ: 16 ಚಿನ್ನದ ಪದಕ ಪಡೆದು ವಿದ್ಯಾರ್ಥಿನಿ ದಾಖಲೆ.. ಭಾರತ್ ಬಯೋಟೆಕ್ ಎಂಡಿ ಸೇರಿ ಮೂವರಿಗೆ VTU ಗೌರವ ಡಾಕ್ಟರೇಟ್)