ಬೆಳಗಾವಿ/ಬೆಂಗಳೂರು: ವಿದೇಶಕ್ಕೆ ಹೋಗೋದು ಬಲು ಸುಲಭ. ಆದರೆ ಪಾಸ್‌ಪೋರ್ಟ್ ಪಡೆಯೋದು ಸರಳವಲ್ಲ. ಬೆಂಗಳೂರಿನಲ್ಲಿನ 3 ಕೇಂದ್ರ ಸೇರಿ ರಾಜ್ಯದಲ್ಲಿ ಒಟ್ಟು 27 ಪಿಎಸ್ಕೆಗಳು ಕಾರ್ಯನಿರ್ವಹಿಸುತ್ತಿವೆ.
ಆದರೆ, ಬೆಳಗಾವಿಯಲ್ಲಿ ಪೊಲೀಸರು ಮಾತ್ರ ಮೂರೇ ದಿನಗಳಲ್ಲಿ ಪಾಸ್‍ಪೋರ್ಟ್ ಪರಿಶೀಲನೆ ಕಾರ್ಯ ಪೂರ್ಣಗೊಳಿಸ್ತಾರೆ. ಡಿಜಿಟಲ್ ವ್ಯವಸ್ಥೆ ಜಾರಿಯಾಗಿರೋದ್ರಿಂದ ಶೀಘ್ರ ಪರಿಶೀಲನೆ ಸಾಧ್ಯವಾಗಿದೆ.
ಪಾಸ್ಪೋರ್ಟ್ ಅರ್ಜಿದಾರನ ಸಂಪೂರ್ಣ ಮಾಹಿತಿಯನ್ನು ಪೊಲೀಸ್ ಇಲಾಖೆ ಪಡೆದ ಬಳಿಕವೇ ಅರ್ಜಿಯನ್ನು ಪಾಸ್‍ಪೋರ್ಟ್ ಸೇವಾ ಕೇಂದ್ರಕ್ಕೆ ಕಳುಹಿಸಲಾಗುತ್ತದೆ. ಅರ್ಜಿದಾರರ ಹಿನ್ನೆಲೆ ಬಗ್ಗೆ ಪರಿಶೀಲಿಸಲು ವಿಶೇಷ ತಂಡ ಕೂಡ ರಚಿಸಲಾಗಿದೆ. ಒಟ್ಟಿನಲ್ಲಿ ಈ ತ್ವರಿತ ಸೇವೆ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಎಲ್ಲೆಡೆ ಪೊಲೀಸರು ಇರೋಕಾಗಲ್ಲ.. ಅವರಿಟ್ಟ ಕಣ್ಣುಗಳಿವೆ, ಹುಷಾರು!
ಪಾಸ್ಪೋರ್ಟ್ ಅರ್ಜಿದಾರರ ಕೈ ಸೇರಬೇಕೆಂದರೆ ಪೊಲೀಸ್ ಇಲಾಖೆಯಿಂದ ಸಂಪೂರ್ಣ ಪರಿಶೀಲನೆ ಕಾರ್ಯ ನಡೆಯುತ್ತದೆ. ಅರ್ಜಿದಾರರ ಮಾಹಿತಿ ಸೂಕ್ತವಾಗಿದ್ದರೆ ಮಾತ್ರ ಅವರು ಪಾಸ್ಪೋರ್ಟ್ ಪಡೆಯಲು ಅರ್ಹ. ಬೆಳಗಾವಿಯಂತೆ ಇತರೆ ಜಿಲ್ಲೆಗಳಲ್ಲೂ ಕೂಡ ಡಿಜಿಟಲ್ ವ್ಯವಸ್ಥೆ ಅಳವಡಿಕೊಂಡರೆ ತ್ವರಿತವಾಗಿ ಪರಿಶೀಲನೆ ಸಾಧ್ಯ.