ಅಥಣಿ: ತಾಲೂಕಿನಲ್ಲಿ ಹಾಗೂ ಪಕ್ಕದ ಮಹಾರಾಷ್ಟ್ರದಲ್ಲಿ ಅತಿವೃಷ್ಟಿಯಿಂದಾಗಿ ಬೆಳೆದ ತರಕಾರಿ ಜಮೀನಿನಲ್ಲೇ ಕೊಳೆತು ಹೋಗಿದೆ. ಇದರಿಂದ ಅಲ್ಪ-ಸ್ವಲ್ಪ ಉಳಿದಿರುವ ತರಕಾರಿಯ ಬೆಲೆ ದುಬಾರಿಯಾಗಿದೆ.
ಪಟ್ಟಣದಲ್ಲಿ ಕಳೆದ ಒಂದು ವಾರದ ಹಿಂದೆ 20 ರೂಪಾಯಿ ಕೆಜಿಗೆ ಮಾರಾಟವಾಗುತ್ತಿದ್ದ ಈರುಳ್ಳಿ ಈಗ 70 ರಿಂದ 100 ರೂಪಾಯಿ ಮಾರಾಟವಾಗುತ್ತಿದೆ. ಎಲ್ಲ ತರಕಾರಿ ಬೆಲೆ ದುಬಾರಿಯಾದ ಕಾರಣ ಗ್ರಾಹಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಈ ಬಗ್ಗೆ ಗ್ರಾಹಕ ಪ್ರಕಾಶ್ ಎಂಬುವರು ಮಾತನಾಡಿ, ಮೊದಲು ಇಂತಿಷ್ಟು ಹಣದಲ್ಲಿ ರೇಷನ್ ಮತ್ತು ತರಕಾರಿ ಖರೀದಿಸುತ್ತಿದ್ದೆವು. ಆದರೆ ಈಗ ಸಾಕಷ್ಟು ಸಮಸ್ಯೆಯಾಗಿದೆ. ಸರ್ಕಾರ ತಕ್ಷಣವೇ ಬಡವರ ಹಿತಾಸಕ್ತಿ ಕಾಪಾಡಬೇಕು ಎಂದು ಆಗ್ರಹಿಸಿದರು.