ETV Bharat / state

ನಾವೆಲ್ಲ ಒಂದೇ ಡಿಪಾರ್ಟ್​ಮೆಂಟ್​​ ಅಲ್ವಾ?: ಮಾಸ್ಕ್​ ಹಾಕಿಕೊಳ್ಳದ ಪೊಲೀಸರಿಬ್ಬರಿಗೆ ಕಾನ್ಸ್​ಟೇಬಲ್ ತರಾಟೆ! - ಬೆಳಗಾವಿ ಕೊರೊನಾ ಸುದ್ದಿ

ಬೆಳಗಾವಿಯಲ್ಲಿ ಮಾಸ್ಕ್ ಧರಿಸದೇ ಪೊಲೀಸರು ಜಾಲಿ ರೈಡ್ ಮಾಡುತ್ತಿದ್ದಾಗ ಕಾನ್ಸ್​ಟೇಬಲ್​ವೊಬ್ಬರು ತರಾಟೆ ತೆಗೆದುಕೊಂಡ ಪ್ರಸಂಗ ಕಂಡು ಬಂತು.

Two policemen bike riding without masks, Belagavi constable angry on police, Belagavi corona news, Belagavi corona update, ಮಾಸ್ಕ್​ ಹಾಕಿಕೊಳ್ಳದ ಪೊಲೀಸರಿಬ್ಬರಿಗೆ ಕಾನ್ಸ್​ಟೇಬಲ್​ನಿಂದ ತರಾಟೆ, ಬೆಳಗಾವಿಯಲ್ಲಿ ಪೊಲೀಸರ ಮೇಲೆ ಕಾನ್ಸ್​ಟೇಬಲ್​ ಕಿಡಿ, ಬೆಳಗಾವಿ ಕೊರೊನಾ ಸುದ್ದಿ, ಬೆಳಗಾವಿ ಕೊರೊನಾ ಅಪ್​ಡೇಟ್​,
ಮಾಸ್ಕ್​ ಹಾಕಿಕೊಳ್ಳದ ಪೊಲೀಸರಿಬ್ಬರಿಗೆ ಕಾನ್ಸ್​ಟೇಬಲ್​ನಿಂದ ತರಾಟೆ
author img

By

Published : Jan 8, 2022, 11:41 AM IST

Updated : Jan 8, 2022, 11:50 AM IST

ಬೆಳಗಾವಿ: ಮಾಸ್ಕ್ ಹಾಕದೇ ಬೈಕ್‌‌ ಮೇಲೆ‌ ಸುತ್ತಾಡುತ್ತಿದ್ದ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಕಾನ್ಸ್​ಟೇಬಲ್​ ತರಾಟೆಗೆ ತೆಗೆದುಕೊಂಡ ಘಟನೆ ಇಲ್ಲಿನ ಚೆನ್ನಮ್ಮ ವೃತ್ತದಲ್ಲಿ ನಡೆದಿದೆ. ಇಬ್ಬರೂ ಪೊಲೀಸ್ ಸಿಬ್ಬಂದಿ ಮಾಸ್ಕ್ ಧರಿಸದೇ ಸಿವಿಲ್ ಡ್ರೆಸ್‌ನಲ್ಲಿ ಬಂದಿದ್ದರು.

ಮಾಸ್ಕ್​ ಹಾಕಿಕೊಳ್ಳದ ಪೊಲೀಸರಿಬ್ಬರಿಗೆ ಕಾನ್ಸ್​ಟೇಬಲ್ ತರಾಟೆ

ಬೆಳಗಾವಿಯ ಚೆನ್ನಮ್ಮ ವೃತ್ತದ ವೆಹಿಕಲ್ ಚೆಕ್ಕಿಂಗ್ ಪಾಯಿಂಟ್‌ ಬಳಿ ಇಬ್ಬರು ಆಗಮಿಸಿದ್ದಾರೆ. ಪೊಲೀಸ್ ಎಂದು ಬರೆಸಿದ್ದ ಬೈಕ್ ಮೇಲೆ ಸಿವಿಲ್ ಡ್ರೆಸ್‌ನಲ್ಲಿ ಇಬ್ಬರು ಪೊಲೀಸರು ಬರುವಾಗ ಕರ್ತವ್ಯ ನಿರತ ಕಾನ್ಸ್​ಟೇಬಲ್​ ತಡೆದು ತಪಾಸಣೆ ನಡೆಸಿದ್ದಾರೆ.

ಓದಿ: ಒಂದೂವರೆ ಲಕ್ಷದ ಸನಿಹಕ್ಕೆ ಕೊರೊನಾ ಪ್ರಕರಣಗಳು.. ಏರುತ್ತಲೇ ಇದೆ ಕೋವಿಡ್​ ಭಯದ ಅಲೆ!

ಈ ವೇಳೆ, ಮಾಸ್ಕ್ ಯಾಕೆ ಹಾಕಿಲ್ಲ ಎಂದು ಕಾನ್ಸ್​ಟೇಬಲ್​ ಪ್ರಶ್ನಿಸಿದ್ದಾರೆ. ನಾವು ಪೊಲೀಸರು ಒಂದೇ ಡಿಪಾರ್ಟ್ಮೆಂಟ್ ಗೊತ್ತಾಗಲ್ವಾ ಎಂದು ಬೈಕ್ ಮೇಲಿದ್ದವರು ಉತ್ತರಿಸಿದ್ದಾರೆ. ಒಂದೇ ಡಿಪಾರ್ಟ್ಮೆಂಟ್ ಆದರೆ ಏನಾಯ್ತು?.. ಮಾಸ್ಕ್ ಏಕೆ ಹಾಕಿಲ್ಲ ಎಂದು ಕಾನ್ಸ್​ಟೇಬಲ್​ ತರಾಟೆ ತೆಗೆದುಕೊಂಡರು. ಬಳಿಕ ಜೇಬಿನಲ್ಲಿದ್ದ ಕರವಸ್ತ್ರ ಮುಖಕ್ಕೆ ಕಟ್ಟಿಕೊಂಡು ಪೊಲೀಸರು ತೆರಳಿದರು. ಮಾಸ್ಕ್ ಧರಿಸದೇ ಬಸ್ ಚಾಲನೆ ಮಾಡುತ್ತಿದ್ದ ಸರ್ಕಾರಿ ಬಸ್ ಚಾಲಕನಿಗೂ ಇದೆ ವೇಳೆ ತರಾಟೆ ತೆಗೆದುಕೊಳ್ಳಲಾಯಿತು.

Last Updated : Jan 8, 2022, 11:50 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.