ETV Bharat / state

ಬೆಳಗಾವಿ: ಏಡಿ ಹಿಡಿಯಲು ಹೋಗಿ ಬಾವಿಗೆ ಬಿದ್ದು ಇಬ್ಬರು ಬಾಲಕರು ಸಾವು

author img

By

Published : Dec 8, 2020, 7:24 PM IST

ಇಂದು ಬೆಳಗಿನ ಜಾವ ಮೂವರು ಬಾಲಕರು‌ ಆಟವಾಡಲು ಗ್ರಾಮದ ಹೊರವಲಯದಲ್ಲಿರುವ ಬಾವಿಯ ಬಳಿ ಹೋಗಿದ್ದಾರೆ. ಈ‌ ಗ್ರಾಮದಲ್ಲಿ ಚಿಕ್ಕ ಚಿಕ್ಕ ಬಾವಿಗಳಿರುವುದರಿಂದ ಅದರಲ್ಲಿನ ಏಡಿಗಳನ್ನು ಹಿಡಿಯಲು ಮಕ್ಕಳಿಬ್ಬರು ಪ್ರಯತ್ನಿಸಿದ್ದಾರೆ. ಈ ವೇಳೆ ಆಯ ತಪ್ಪಿ ಮೂವರು ಬಾವಿಗೆ ಬಿದ್ದಿದ್ದಾರೆ. ಈಜು ಬಾರದ ಇಬ್ಬರು ನೀರಿನಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದು, ಅದರಲ್ಲಿ ಓರ್ವ ಬಾಲಕ ಪಾರಾಗಿದ್ದಾನೆ.

ಬಾಲಕರ ಸಾವು

ಬೆಳಗಾವಿ: ಏಡಿ ಹಿಡಿಯಲು ಹೋಗಿದ್ದ ಮೂವರು ಬಾಲಕರು ಆಯ ತಪ್ಪಿ ಬಾವಿಗೆ ಬಿದ್ದು ಓರ್ವ ಪಾರಾಗಿದ್ದು, ಇನ್ನಿಬ್ಬರು ಸಾವಿನ್ನಪ್ಪಿರುವ ದಾರುಣ ಘಟನೆ ಜಿಲ್ಲೆಯ ಬೆಕ್ಕಿನಕೇರಿ‌ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ಮಹಾರಾಷ್ಟ್ರದ ಚಂದಗಡ್ ಗ್ರಾಮದ ನಿವಾಸಿ ಲೋಕೇಶ ಪಾಟೀಲ್ (10) ಹಾಗೂ ಬೆಕ್ಕಿನಕೇರಿ ಗ್ರಾಮದ ನಿಖಿಲ್ ಬೊಂದ್ರೆ (7) ಮೃತ ದುರ್ದೈವಿಗಳು. ಬಾಲಕರ ಪೈಕಿ ಮಹಾರಾಷ್ಟ್ರ ಮೂಲದ ಲೋಕೇಶ್ ಪಾಟೀಲ ಕೊರೊನಾ ವೈರಸ್ ಹಿನ್ನೆಲೆ ಶಾಲೆಗಳು ಆರಂಭವಾಗದಿದ್ದರಿಂದ ಕಳೆದ ಹಲವು ದಿನಗಳ ಹಿಂದೆ ಬೆಕ್ಕಿನಕೇರಿಯಲ್ಲಿನ ತನ್ನ ಮಾವನ ಮನೆಗೆ ಬಂದಿದ್ದ.

ಏಡಿ ಹಿಡಿಯಲು ಹೋಗಿ ಬಾವಿಗೆ ಬಿದ್ದು ಇಬ್ಬರು ಬಾಲಕರ ಸಾವು

ಇಲ್ಲಿ ನೋಡಿ.. ಕಲಬುರಗಿ: ನೇಣು ಬಿಗಿದುಕೊಂಡು ಅಕ್ಕ-ತಂಗಿ ಆತ್ಮಹತ್ಯೆ

ಬದುಕುಳಿದ ಬಾಲಕ ಮನೆಗೆ ಓಡಿ ಹೋಗಿ ವಿಷಯ‌ ಮುಟ್ಟಿಸಿದ್ದಾನೆ. ಆದರೆ ಪೋಷಕರು ಬರುವಷ್ಟರಲ್ಲಿಯೇ ಇಬ್ಬರು ಮಕ್ಕಳು ಪ್ರಾಣ ಬಿಟ್ಟಿದ್ದಾರೆ. ಮಕ್ಕಳನ್ನು ಕಳೆದಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ಕಾಕತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.