ಚಿಕ್ಕೋಡಿ : ಸಬ್ ಜೈಲ್ನಲ್ಲಿ ಶೌಚಾಲಯದ ಕಿಟಕಿ ಮುರಿದು ವಿಚಾರಣಾಧೀನ ಕೈದಿಗಳು ಪರಾರಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ ನಡೆದಿದೆ.
ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಅನಿಲ್ ಲಂಬುಗೋಳ ಹಾಗೂ ಗೋಕಾಕ್ ತಾಲೂಕಿನ ಕೊಣ್ಣೂರ ಗ್ರಾಮದ ಪರಶುರಾಮ ಕಮತೆಕರ ಪರಾರಿಯಾದವರು. ಮನೆ ಕಳ್ಳತನ ಆರೋಪದಡಿ ಇವರನ್ನು ಬಂಧಿಸಲಾಗಿತ್ತು.
ಹುಕ್ಕೇರಿ ಸಬ್ ಜೈಲ್ನಲ್ಲಿ ಒಂದೇ ಕೋಣೆಯಲ್ಲಿ 10 ಕೈದಿಗಳನ್ನು ಇರಿಸಲಾಗಿತ್ತು. ಅದರಲ್ಲಿ ಇಬ್ಬರು ಪರಾರಿಯಾಗಿದ್ದು,ಈ ಬಗ್ಗೆ ಉಳಿದವರನ್ನು ವಿಚಾರಿಸಿದರೆ ನಾವು ರಾತ್ರಿ ನಿದ್ದೆಯಲ್ಲಿದ್ದೆವು. ನಮಗೆ ಗೊತ್ತಿಲ್ಲ ಎಂದಿದ್ದಾರೆ. ಘಟನೆ ನಂತರ ಇನ್ನುಳಿದ ಕೈದಿಗಳನ್ನು ಹುಕ್ಕೇರಿ ಸಬ್ ಜೈಲಿನಿಂದ ಗೋಕಾಕ್ ಜೈಲಿಗೆ ಸ್ಥಳಾಂತರಿಸಲಾಗಿದೆ.