ETV Bharat / state

ಕೃಷಿ ಕಾಯ್ದೆ ವಿರೋಧಿಸಿ ನಾಳೆ ಬೆಳಗಾವಿಯಲ್ಲಿ ಟ್ರ್ಯಾಕ್ಟರ್ ರ‍್ಯಾಲಿ: ಬಾಬಾಗೌಡ ಪಾಟೀಲ

author img

By

Published : Jan 25, 2021, 5:23 PM IST

ಬಿಜೆಪಿ ಸರ್ಕಾರ ರೈತರನ್ನು ದಾಸರನ್ನಾಗಿ ಮಾಡಲು ಹೊರಟಿದೆ. ಸೂರ್ಯ ಚಂದ್ರ ಇರುವವರೆಗೂ ಸಾಲದ ಬಡ್ಡಿಗಾಗಿ ದುಡಿಸಿಕೊಳ್ಳಬೇಕು ಎಂಬ ಒಳಗುಟ್ಟು ಕೇಂದ್ರ ಸರ್ಕಾರಕ್ಕಿದೆ ಎಂದು ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ ಆರೋಪಿಸಿದರು.

former union minister Babagouda Patil
ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ್

ಬೆಳಗಾವಿ: ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ಕೃಷಿ, ಎಪಿಎಂಸಿ ಸೇರಿದಂತೆ ಇನ್ನಿತರ ಕಾಯ್ದೆಗಳನ್ನು ವಿರೋಧಿಸಿ ನಾಳೆ‌ (ಜ.26) ಟ್ರ್ಯಾಕ್ಟರ್ ರ‍್ಯಾಲಿ ನಡೆಸಲಾಗುತ್ತಿದೆ ಎಂದು‌ ಕೇಂದ್ರದ ಮಾಜಿ‌ ಸಚಿವ ಬಾಬಾಗೌಡ ಪಾಟೀಲ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಜನರಲ್ಲಿ ಒಂದು‌ ಆಶಾಭಾವನೆ ಇತ್ತು. ಹಳ್ಳಿಗಳು ಪಟ್ಟಣಗಳ ಹಾಗೆ ಸುಧಾರಣೆಯಾಗುವುದರ ಜತೆಗೆ ದೇಶ ರಾಮರಾಜ್ಯ ಆಗುತ್ತದೆ ಎಂಬ ನಮ್ಮ ಭ್ರಮೆ ಸುಳ್ಳಾಗಿದೆ. ಬಿಜೆಪಿ ಸರ್ಕಾರ ರೈತರನ್ನು ದಾಸರನ್ನಾಗಿ ಮಾಡಲು ಹೊರಟಿದೆ. ಸೂರ್ಯ ಚಂದ್ರ ಇರುವವರೆಗೂ ಸಾಲದ ಬಡ್ಡಿಗಾಗಿ ದುಡಿಸಿಕೊಳ್ಳಬೇಕು ಎಂಬ ಒಳಗುಟ್ಟು ಕೇಂದ್ರ ಸರ್ಕಾರಕ್ಕಿದೆ. ಆ ಕಾರಣಕ್ಕೆ ಇವರು‌ ತಂದಿರುವ ಕಾನೂನುಗಳು ಇಡೀ ದೇಶದ ವ್ಯಾಪಾರ-ವಹಿವಾಟನ್ನು ಖಾಸಗಿ ಒಡೆತನಕ್ಕೆ ಕೊಟ್ಟು ನಮ್ಮನ್ನು ದಾಸರನ್ನಾಗಿ ಮಾಡುವ ಹುನ್ನಾರವಿದೆ ಎಂದು ಆರೋಪಿಸಿದರು.

ಬಿಜೆಪಿಯವರ ಇಂತಹ ಕೆಟ್ಟ ಉದ್ದೇಶ ಈಗ ಎಲ್ಲರಿಗೂ ಗೊತ್ತಾಗಿದೆ. ಬಿಜೆಪಿಯವರು ಸುಳ್ಳುಗಾರರು, ಸತ್ಯವನ್ನು ಮಾತನಾಡೊದಿಲ್ಲ. ಆತ್ಮವಂಚಕರಾಗಿದ್ದು, ವ್ಯಾಪಾರಸ್ಥರ ಸರ್ಕಾರವಾಗಿದೆ‌. ಇದನ್ನು ವಿರೋಧಿಸಿ ಸಮಗ್ರ ರೈತರ ಹಿತಕ್ಕಾಗಿ ಕೇಂದ್ರ ಸರ್ಕಾರಕ್ಕೆ‌ ನಾವೇ ಸಲಹೆ ನೀಡುತ್ತೇವೆ.

ಓದಿ: ಗೋಹತ್ಯೆ ನಿಷೇಧ ವಿಧೇಯಕಕ್ಕೆ ಸರ್ಕಾರ ತರಾತುರಿ ಮಾಡಿದ್ದು ಏಕೆ? ಬಾಬಾಗೌಡ ಪಾಟೀಲ್ ಪ್ರಶ್ನೆ

ನಾಳೆ ಜಿಲ್ಲೆಯ ವಿವಿಧ ಭಾಗಗಳಿಂದ ರೈತರು ಟ್ರ್ಯಾಕ್ಟರ್ ಮೂಲಕ ಆಗಮಿಸಲಿದ್ದಾರೆ. ಎಲ್ಲರೂ ಗಾಂಧಿನಗರದಿಂದ‌ ಟ್ರ್ಯಾಕ್ಟರ್ ರ‍್ಯಾಲಿ ಮಾಡಿಕೊಂಡು ಅಶೋಕ ವೃತ್ತ, ಸಂಗೊಳ್ಳಿ ರಾಯಣ್ಣ ಸರ್ಕಲ್ ಹಾಗೂ ಚೆನ್ನಮ್ಮ ವೃತ್ತದ ಮೂಲಕ ಹಾಯ್ದು ಸರ್ದಾರ್ ಮೈದಾನದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.