ಬೆಳಗಾವಿ: ಉಪಚುನಾವಣೆಯಲ್ಲಿ ಸ್ಪರ್ಧಿಸದಂತೆ ಲಖನ್ ಗೆ ಹೇಳುತ್ತೇನೆ. ಅಣ್ಣನಾಗಿ ಈ ರೀತಿ ಹೇಳುವುದು ನನ್ನ ಕರ್ತವ್ಯ. ಸ್ಪರ್ಧಿಸುವುದು, ಬಿಡುವುದು ಲಖನ್ ಗೆ ಬಿಟ್ಟಿದ್ದು. ಲಖನ್ ಸ್ಪರ್ಧಿಸಿದರೂ ಸ್ವಾಗತಿಸುತ್ತೇನೆ ಎಂದು ಅನರ್ಹ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಕಣದಿಂದ ಹಿಂದೆ ಸರಿಯುವುದಿಲ್ಲ, ನನಗೂ ಭೇಟಿ ಆಗುವುದಿಲ್ಲ ಎಂದು ಲಖನ್ ಹೇಳಿದ್ದಾರೆ. ಚುನಾವಣೆಗೆ ಸ್ಪರ್ಧಿಸದಂತೆ ಅಣ್ಣನಾಗಿ ಹೇಳುವುದು ನನ್ನ ಕರ್ತವ್ಯ. ನನ್ನ ಮಾತಿಗೆ ಲಖನ್ ಮನ್ನಣೆ ನೀಡದಿದ್ರೆ ಚುನಾವಣೆ ಎದುರಿಸುವೆ. ನಾಮಪತ್ರ ಸಲ್ಲಿಸಿದ ಬಳಿಕ ಎದುರಾಳಿ ಯಾರೇ ಆಗಿದ್ದರೂ ಗೆಲುವಿನ ಕಡೆಗೆ ಗಮನ ಹರಿಸುತ್ತೇನೆ ಎಂದರು.
ಕೋರ್ಟ್ ನಲ್ಲಿ ನಮಗೆ ನ್ಯಾಯ ಸಿಗುವ ಬಗ್ಗೆ ಸಂಪೂರ್ಣ ವಿಶ್ವಾಸ ಇದೆ. ನಮ್ಮ ಪ್ರಕರಣ ಕೋರ್ಟ್ ನಲ್ಲಿ ಶುಕ್ರವಾರ ಕ್ಲಿಯರ್ ಆಗುವ ಸಾಧ್ಯತೆ ಇದೆ. ನಂತರ ನಾವು ರಾಜಕೀಯವಾಗಿ ಮಾತನಾಡುತ್ತೇವೆ.
ನ್ಯಾಯಾಲಯ ಅನುಮತಿ ಕೊಟ್ಟರೆ ಸೋಮವಾರ ನಾಮಪತ್ರ ಸಲ್ಲಿಸುತ್ತೇನೆ. ನ್ಯಾಯಾಲಯದ ತೀರ್ಮಾನಕ್ಕೆ ನಾವು ಬದ್ದರಾಗಿದ್ದೇವೆ ಎಂದರು.