ETV Bharat / state

ಸದನದೊಳಗೆ ಬಿಟ್ಟು, ಹೊರಗೆ ಮಾತನಾಡಿದರೆ ಯಾರ್ರೀ ಕೇಳ್ತಾರೆ: ಡಿಸಿಎಂ ಡಿ ಕೆ ಶಿವಕುಮಾರ್ - ಉತ್ತರ ಕರ್ನಾಟಕ ಸಮಸ್ಯೆ

''ಸದನದೊಳಗೆ ಮಾತನಾಡುವುದನ್ನು ಬಿಟ್ಟು, ಹೊರಗೆ ಮಾತನಾಡಿದರೆ ಯಾರ್ರೀ ಕೇಳ್ತಾರೆ'' ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.

Etv Bharat
Etv Bharat
author img

By ETV Bharat Karnataka Team

Published : Dec 13, 2023, 2:31 PM IST

ಬೆಳಗಾವಿ: ''ಕಲಾಪದೊಳಗೆ ಮಾತಾಡೋದು ಬಿಟ್ಟು, ಹೊರಗೆ ಮಾತಾಡುತ್ತೇನೆ ಅಂದ್ರೆ ಯಾರ್ರೀ ಕೇಳ್ತಾರೆ'' ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಗುಡುಗಿದರು.

ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಸರ್ಕಾರದ ವಿರುದ್ಧ ಬಿಎಸ್​ವೈ ಹೋರಾಟದ ವಿಚಾರವಾಗಿ ಪ್ರತಿಕ್ರಿಯಿಸಿ, ''ಬಿಜೆಪಿಯಲ್ಲಿ ಒಮ್ಮತವಿಲ್ಲ. ಶಾಸಕಾಂಗ ಪಕ್ಷದ ನಾಯಕ, ರಾಜ್ಯಾಧ್ಯಕ್ಷ ಇಬ್ಬರು ಇರ್ತಾರೆ ಬಹಳ ಸಂತೋಷ. ಸರ್ಕಾರ ತಪ್ಪು ಮಾಡಿದಿಯಾ? ಬರಗಾಲದಲ್ಲಿ ಏನಾದರೂ ತೊಂದರೆ ಆಗಿದೆಯಾ'' ಎಂದು ಪ್ರಶ್ನಿಸಿದರು.

''ಸರ್ಕಾರದ ವೈಫಲ್ಯ ಎತ್ತಿ ಹಿಡಿಯುವುದನ್ನು ಬಿಟ್ಟು. ಉತ್ತರ ಕರ್ನಾಟಕ ಸಮಸ್ಯೆಗಳನ್ನು ಸದನದೊಳಗೆ ಚರ್ಚೆ ಮಾಡೋದನ್ನು ಬಿಟ್ಟು‌, ಹೊರಗಡೆ ಮಾಡ್ತೇನಿ ಎಂದರೆ ಯಾರ್ರೀ ಕೇಳ್ತಾರೆ. ಯಡಿಯೂರಪ್ಪ ಆದರೂ ಆಗಲಿ, ಯಾರಾದರೂ ಬರಲಿ. ಅವರು ಯಾವುದಾದರೂ ಒಂದು ಕ್ಷೇತ್ರ ತೆಗೆದುಕೊಂಡು ಮಾತಾಡಲಿ. ನಮಗೆ ಯಾವುದೇ ತೊಂದರೆ ಇಲ್ಲ. ಎಷ್ಟು ದುರ್ಬಲ ಆಗಿದೆ ಎನ್ನುವುದಕ್ಕೆ ಇದೊಂದು ಕಾರಣ.‌ 66 ಶಾಸಕರು ಒಳಗಡೆ ಮಾತಾಡಲಿ ಎಂದು ಜನರು ಕಳಿಸಿಕೊಟ್ಟಿದ್ದಾರೆ. ಅವರ ವೈಫಲ್ಯ, ದುರ್ಬಲ ಇದರಿಂದ ಅರ್ಥ ಆಗುತ್ತಿದೆ'' ಎಂದು ಡಿಕೆಶಿ ಟೀಕಿಸಿದರು. ರಮೇಶ್ ಜಾರಕಿಹೊಳಿ ಕೇಸ್ ಮತ್ತೆ ಮರು ತನಿಖೆ ವಿಚಾರದ ಪ್ರಶ್ನೆಗೆ ಪ್ರತಿಕ್ರಿಯಿಸಿ, ನನಗೆ ಗೊತ್ತಿಲ್ಲಪ್ಪ ಎಂದು ಹೇಳಿ ತೆರಳಿದರು.

ಇದನ್ನೂ ಓದಿ: ಕಲಾಪದಲ್ಲಿ ಉತ್ತರ ಕರ್ನಾಟಕ ಚರ್ಚೆ: ನೀರಾವರಿ ಸಮಸ್ಯೆ ಬಗ್ಗೆ ಸರ್ಕಾರ ಗಮನ ಹರಿಸಲಿ- ಯತ್ನಾಳ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.