ಚಿಕ್ಕೋಡಿ: ಉಪವಿಭಾಗದಲ್ಲಿ ಮತ್ತೆ ಮಳೆರಾಯ ತನ್ನ ಅರ್ಭಟ ಪ್ರಾರಂಭಿಸಿದ್ದಾನೆ. ಆದರೆ, ಮಹಾರಾಷ್ಟ್ರದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ ಹೀಗಾಗಿ ಮಹಾರಾಷ್ಟ್ರದ ವಿವಿಧ ಡ್ಯಾಂಗಳಿಂದ ನೀರು ಬಿಡುಗಡೆ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ಕೃಷ್ಣಾ, ವೇದಗಂಗಾ ಹಾಗೂ ದೂಧಗಂಗಾ ನದಿಗಳ ಒಳ ಹರಿವಿನಲ್ಲೂ ಇಳಿ ಮುಖ ಕಂಡಿದೆ. ಸದ್ಯ 40,000 ಅಧಿಕ ಕ್ಯೂಸೆಕ್ಗಿಂತ ಹೆಚ್ಚು ಕೃಷ್ಣಾ ನದಿ ಒಳ ಹರಿವು ಇದೆ ಎಂದು ಚಿಕ್ಕೋಡಿ ತಹಶೀಲ್ದಾರ ಶುಭಾಸ ಸಂಪಗಾಂವಿ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
ಮಹಾರಾಷ್ಟ್ರ ರಾಜಾಪೂರ ಜಲಾಶಯದಿಂದ 36,250 ಕ್ಯೂಸೆಕ್ ನೀರು ಹಾಗೂ ದೂಧಗಂಗಾ ನದಿಯಿಂದ 4,400 ಕ್ಯೂಸೆಕ್ ನೀರು ಹೀಗೆ ಒಟ್ಟು 40 ಸಾವಿರ ಕ್ಯೂಸೆಕ್ ಅಧಿಕ ನೀರು ಕೃಷ್ಣಾ ನದಿಗೆ ಹರಿದು ಬರುತ್ತಿದೆ. ಮಹಾರಾಷ್ಟ್ರ ಕೊಯ್ನಾ - 02 ಮಿ.ಮೀ, ನವಜಾ - 01 ಮಿ.ಮೀ, ಮಹಾಬಳೇಶ್ವರ - 65 ಮಿ.ಮೀ, ವಾರಣಾ - 00 ಮಿ.ಮೀ, ಕಾಳಮ್ಮವಾಡಿ - 00 ಮಿ.ಮೀ, ರಾಧಾನಗರಿ - 00 ಮಿ.ಮೀ, ಪಾಟಗಾಂವ - 00 ಮಿ.ಮೀ ಮಳೆಯಾಗಿದ್ದು ವರದಿಯಾಗಿದೆ.
ಚಿಕ್ಕೋಡಿ ಉಪವಿಭಾಗದ ಚಿಕ್ಕೋಡಿ - 1 ಮಿ.ಮೀ, ಅಂಕಲಿ - 5.4 ಮಿ.ಮೀ, ನಾಗರಮುನ್ನೋಳಿ - 0.8 ಮಿ.ಮೀ, ಸದಲಗಾ 8.1 ಮಿ.ಮೀ ಹಾಗೂ ಜೋಡಟ್ಟಿ - 8.4 ಮಿ.ಮೀ ಮಳೆಯಾಗಿರುವ ವರದಿಯಾಗಿದೆ. ಸದ್ಯ ಕೊಯ್ನಾ ಜಲಾಶಯ - 99%, ವಾರಣಾ ಜಲಾಶಯ - 100%, ರಾಧಾನಗರಿ ಜಲಾಶಯ 93%, ಕಣೇರ ಜಲಾಶಯ 100%, ಧೂಮ ಜಲಾಶಯ 100% ಹಾಗೂ ಪಾಟಗಂವ ಜಲಾಶಯ 100% ಭರ್ತಿಯಾಗಿದೆ. ಹಿಪ್ಪರಗಿ ಬ್ಯಾರೆಜ್‌ನಿಂದ 36,000 ಕ್ಯೂಸೆಕ್ ಹಾಗೂ ಆಲಮಟ್ಟಿ ಜಲಾಶಯದಿಂದ 37,000 ಕ್ಯೂಸೆಕ್ ನೀರು ಹೊರಗಡೆ ಬಿಡಲಾಗುತ್ತಿದೆ.