ಬೆಳಗಾವಿ: ರಾಜ್ಯ ಪೊಲೀಸರ ಕಣ್ಣು ತಪ್ಪಿಸಿ ನಗರಕ್ಕೆ ಆಗಮಿಸಿದ್ದ ಮಹಾರಾಷ್ಟ್ರ ಸಚಿವನನ್ನು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಎಂಇಎಸ್ ಬೆಳಗಾವಿಯಲ್ಲಿ ಹುತಾತ್ಮ ದಿನ ಕಾರ್ಯಕ್ರಮ ಆಯೋಜಿಸಿದ್ದು, ರಾಜ್ಯ ಪೊಲೀಸರ ಸೂಚನೆ ಉಲ್ಲಂಘಿಸಿರುವ ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಂದ್ರ ಪಾಟೀಲ ನಗರಕ್ಕೆ ಆಗಮಿಸಿದ್ದರು. ಪೊಲೀಸರ ಕಣ್ಣುತಪ್ಪಿಸಿ ನಗರಕ್ಕೆ ಬಂದ ಮಹಾರಾಷ್ಟ್ರದ ಸಚಿವನನ್ನು ಬೆಳಗಾವಿ ಹುತಾತ್ಮ ವೃತ್ತದ ಬಳಿ ವಶಕ್ಕೆ ಪಡೆಯಲಾಯಿತು.
ಬೆಳಗಾವಿಯಲ್ಲಿ ಹುತಾತ್ಮ ದಿನಾಚರಣೆ: ಪೊಲೀಸರು ಅಲರ್ಟ್!
ಈ ವೇಳೆ ಪೊಲೀಸರು ಹಾಗೂ ಎಂಇಎಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ವಶಕ್ಕೆ ಪಡೆಯುವ ಸಂದರ್ಭದಲ್ಲಿ ಸಚಿವ ರಾಜೇಂದ್ರ ಪಾಟೀಲ ಹಾಗೂ ಎಂಇಎಸ್ ಕಾರ್ಯಕರ್ತರು ನಾಡದ್ರೋಹಿ ಘೋಷಣೆ ಕೂಗಿ ಉದ್ಧಟತನ ಮೆರೆದರು.