ETV Bharat / state

ಸಂಗೊಳ್ಳಿ ರಾಯಣ್ಣನ ಮೂರ್ತಿಯ ತಲೆ ಮೇಲೆ ಕಾಲಿಟ್ಟ ಮಾನಸಿಕ ಅಸ್ವಸ್ಥ..

ಮಾನಸಿಕ ಅಸ್ವಸ್ಥನ ಈ ಕೃತ್ಯದಿಂದ ಕೆಲಕಾಲ ಪೀರನವಾಡಿ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮಾನಸಿಕ ಅಸ್ವಸ್ಥನನ್ನು ಕೆಳಗಿಳಿಸಿದ ಬಳಿಕ‌ ಯಲ್ಲಪ್ಪ ಗಡಾದಾರ್ ಎಂಬುವರಿಂದ ಸಂಗೊಳ್ಳಿ ರಾಯಣ್ಣನ ಮೂರ್ತಿಗೆ ಕ್ಷೀರಾಭಿಷೇಕ..

sangolli Rayanna statue
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಶುದ್ಧೀಕರಣ
author img

By

Published : Nov 16, 2020, 5:27 PM IST

ಬೆಳಗಾವಿ: ಇಲ್ಲಿನ ಪೀರನವಾಡಿ ಗ್ರಾಮದಲ್ಲಿ ರಾತ್ರೋರಾತ್ರಿ ಕನ್ನಡಪರ ಸಂಘಟನೆಗಳು ಪ್ರತಿಷ್ಠಾಪಿಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿಯ ತಲೆ ಮೇಲೆ ಮಾನಸಿಕ ಅಸ್ವಸ್ಥನೊಬ್ಬ ಕಾಲಿಟ್ಟ ಘಟನೆ ನಡೆದಿದೆ.

ಸಂಗೊಳ್ಳಿ ರಾಯಣ್ಣ ಮೂರ್ತಿ ತಲೆ ಮೇಲೆ ಕಾಲಿಟ್ಟ ಮಾನಸಿಕ ಅಸ್ವಸ್ಥ..

ಬೆಳಗಾವಿಯ ಹೊರವಲಯದ ಪೀರನವಾಡಿ ಬಳಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಮೇಲೆ ಕಾಲಿಟ್ಟ ಮಾನಸಿಕ ಅಸ್ವಸ್ಥ ಪರಶುರಾಮ ಭರಮಣ್ಣ ಪೂಜೇರಿ ಎಂಬಾತನನ್ನು ಅಲ್ಲಿನ ಸಂಗೊಳ್ಳಿ ರಾಯಣ್ಣನ ಅಭಿಮಾನಿಗಳು ಹಿಡಿದು ಕೆಳಗಿಳಿಸಿದ್ದಾರೆ.

ಮಾನಸಿಕ ಅಸ್ವಸ್ಥನ ಈ ಕೃತ್ಯದಿಂದ ಕೆಲಕಾಲ ಪೀರನವಾಡಿ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮಾನಸಿಕ ಅಸ್ವಸ್ಥನನ್ನು ಕೆಳಗಿಳಿಸಿದ ಬಳಿಕ‌ ಯಲ್ಲಪ್ಪ ಗಡಾದಾರ್ ಎಂಬುವರಿಂದ ಸಂಗೊಳ್ಳಿ ರಾಯಣ್ಣನ ಮೂರ್ತಿಗೆ ಕ್ಷೀರಾಭಿಷೇಕ ಮಾಡಲಾಯಿತು.

ಮಾನಸಿಕ ಅಸ್ವಸ್ಥ ರಾಯಣ್ಣನ ಮೇಲೆ ಕಾಲಿಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆದ್ರೆ, ವೈರಲ್ ಆದ ವಿಡಿಯೋ ನೋಡಿ ಯಾರೂ ಸಹ ಗೊಂದಲಕ್ಕೀಡಾಗಬೇಡಿ, ಮಾನಸಿಕ ಅಸ್ವಸ್ಥನಿಂದ ಅಚಾತುರ್ಯವಾಗಿ ಈ ಘಟನೆ ನಡೆದಿದೆ ಎಂದು ರಾಯಣ್ಣ ಅಭಿಮಾನಿಗಳು ಮನವಿ ಮಾಡಿಕೊಂಡಿದ್ದಾರೆ.‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.