ಬೆಳಗಾವಿ: ಕೆಂಪೇಗೌಡರ ಪ್ರತಿಮೆ ನಿರ್ಮಾಣಕ್ಕೆ ಬೆಳಗಾವಿ ಜಿಲ್ಲೆಗೆ ಗೃಹಸಚಿವ ಆರಗ ಜ್ಞಾನೇಂದ್ರ, ಉನ್ನತ ಶಿಕ್ಷಣ ಸಚಿವ ಡಾ. ಸಿ. ಅಶ್ವತ್ಥ ನಾರಾಯಣ, ಕಂದಾಯ ಸಚಿವ ಆರ್.ಅಶೋಕ, ಸಚಿವ ನಾರಾಯಣ ಗೌಡ ಹಂಪಿಯಿಂದ ನೇರವಾಗಿ ಬೆಳಗಾವಿ ಸುವರ್ಣ ಸೌಧದ ಹೆಲಿಪ್ಯಾಡ್‌ಗೆ ಆಗಮಿಸಿದ್ದಾರೆ. ಈ ವೇಳೆ, ನಾಲ್ವರು ಸಚಿವರನ್ನು ಶಾಸಕ ಅಭಯ ಪಾಟೀಲ್, ಮಾಜಿ ಶಾಸಕ ಸಂಜಯ ಪಾಟೀಲ್ ಸ್ವಾಗತಿಸಿಕೊಂಡರು.
ಪ್ರಧಾನಿಯಿಂದ ಲೋಕಾರ್ಪಣೆ: ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಗೃಹಸಚಿವ ಆರಗ ಜ್ಞಾನೇಂದ್ರ, ಕೆಂಪೇಗೌಡರ 108ಅಡಿಯ ಪ್ರತಿಮೆ ನವೆಂಬರ್ 11ರಂದು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡುತ್ತಿದ್ದಾರೆ. ಥೀಮ್ ಪಾರ್ಕ್ ಸಹ ನಿರ್ಮಾಣ ಆಗುತ್ತಿದೆ. ರಾಜ್ಯದ ಶೌರ್ಯ, ಕೀರ್ತಿ ತಂದಿದ್ದ ಸ್ಥಳದಿಂದ ಮಣ್ಣು ಸಂಗ್ರಹಕ್ಕೆ ಸರ್ಕಾರ ನಿರ್ಧಾರ ಮಾಡಿದೆ.
ಹೀಗಾಗಿ ಹಂಪಿ, ಕೂಡಲಸಂಗಮ, ಕಿತ್ತೂರಿನಿಂದ ಮಣ್ಣು ಸಂಗ್ರಹ ಮಾಡಲಾಗುತ್ತಿದೆ. ಏಕತೆ, ಸಮಗ್ರತೆ ದೃಷ್ಟಿಯಿಂದ ನಾಲ್ಕು ಜನ ಸಚಿವರು ಭೇಟಿ ನೀಡಿದ್ದೇವೆ. ಆರ್ ಅಶೋಕ್, ಅಶ್ವತ್ಥ ನಾರಾಯಣ, ನಾರಾಯಣ ವಿವಿಧ ಭಾಗಗಳಿಗೆ ಭೇಟಿ ನೀಡಿದ್ದಾರೆ ಎಂದರು.
ತನಿಖೆಯ ಮಾಹಿತಿ: ಶಾಸಕ ರೇಣುಕಾಚಾರ್ಯ ಸಹೋದರನ ಪುತ್ರನ ಅನುಮಾನಾಸ್ಪದ ಸಾವು ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾರು ಚಾನಲ್ ನಲ್ಲಿ ಬಿದ್ದಿದೆ. ಎಫ್ ಎಸ್ ಎಲ್ ತಂಡ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ದಾವಣಗೆರೆ ಎಸ್ಪಿ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದೆ. ಕುಟುಂಬಸ್ಥರು ಕೊಲೆ ಎಂದು ಆರೋಪಿಸಿದ್ದಾರೆ. ಹೀಗಾಗಿ ಎಲ್ಲ ಆಯಾಮದಲ್ಲೂ ತನಿಖೆ ನಡೆಯುತ್ತಿದೆ. ಯಾವ ಹಿನ್ನೆಲೆಯಲ್ಲಿ ಘಟನೆ ಆಗಿದೆ ಎಂಬುದು ತನಿಖೆಯಿಂದ ಬಯಲು ಮಾಡಲಾಗುತ್ತದೆ. ಫೋನ್ ಸಹ ವಿಶ್ಲೇಷಣೆ ಮಾಡಲಾಗುತ್ತಿದೆ ಎಂದರು.
ಇದನ್ನೂ ಓದಿ: ಕೆಂಪೇಗೌಡರ ಪ್ರತಿಮೆ ಅನಾವರಣಕ್ಕೆ ಹಂಪಿಯಲ್ಲಿ ಮೃತ್ತಿಕೆ ಸಂಗ್ರಹ