ETV Bharat / state

ಭಾರತೀಯರ ಹೆಸರಲ್ಲಿ ಅಫ್ಘಾನ್ ಮುಸ್ಲಿಮರು ದೇಶಕ್ಕೆ ನುಸುಳುವ ಬಗ್ಗೆ ಎಚ್ಚರಿಕೆವಹಿಸಿ : ಕೇಂದ್ರಕ್ಕೆ ಮುತಾಲಿಕ್ ಆಗ್ರಹ

author img

By

Published : Aug 18, 2021, 4:41 PM IST

Updated : Aug 18, 2021, 7:28 PM IST

ನೌಶಾದ್ ಎಂಬ ಯುವಕ 'ಶ್ರೀರಾಮ' ಹೆಸರಲ್ಲಿ ದಾಬಾ ನಡೆಸುತ್ತಿದ್ದಾನೆ. ಹಿಂದೂ ಹೆಸರಿಟ್ಟುಕೊಂಡು ಹಿಂದೂ ಯುವತಿಯರ ಮೇಲೆ ದೌರ್ಜನ್ಯ ನಡೀತಿದೆ. ಎಫ್ಐಆರ್ ಆಗಿ ಮೂರು ತಿಂಗಳಾಗಿದೆ. ಈವರೆಗೂ ಏಕೆ ಅರೆಸ್ಟ್ ಮಾಡ್ತಿಲ್ಲ? ಮೊದಲು ಆ ಮುಸ್ಲಿಂ ಯುವಕ ನಡೆಸುತ್ತಿದ್ದ ದಾಬಾ ಮುಚ್ಚಿಸಿ. ತಾವು ತೆರಳಿದ್ದ ಹೋಟೆಲ್‌ಗಳ ಹೆಸರು ಫೋನ್ ನಂಬರ್ ಎಲ್ಲಾ ಆ ಯುವತಿ ನೀಡಿದ್ದಾಳೆ. ಕೋಲ್ಕತ್ತಾದಿಂದ ಯುವತಿ ಬರುತ್ತಿದ್ದು, ಆಕೆಗೆ ನಾವು ಬೆಂಬಲ ನೀಡಿದ್ದೇವೆ ಎಂದಿದ್ದಾರೆ..

the chief of the Shrirama Sena Pramod Mutalik about Afghanistan
ಕೇಂದ್ರಕ್ಕೆ ಮುತಾಲಿಕ್ ಆಗ್ರಹ

ಬೆಳಗಾವಿ : ಭಾರತೀಯರ ಹೆಸರಿನಲ್ಲಿ ಅಫ್ಘಾನಿಸ್ತಾನ ಮುಸ್ಲಿರು ದೇಶಕ್ಕೆ ನುಸುಳುವ ಸಾಧ್ಯತೆ ಇದ್ದು, ಕೇಂದ್ರ ಸರ್ಕಾರ ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಬಾಂಗ್ಲಾದೇಶದ ರೋಹಿಂಗ್ಯಾ ಮುಸ್ಲಿಮರಿಂದ ದೇಶ ಸಮಸ್ಯೆ ಎದುರಿಸುತ್ತಿದೆ. ಅಫ್ಘಾನ್ ವಿಚಾರದಲ್ಲಿ ಅಲ್ಲಿನ ಮುಸ್ಲಿಮರನ್ನು ಕೇಂದ್ರ ಸರ್ಕಾರ ತಲೆ ಮೇಲೆ ಇಟ್ಟುಕೊಳ್ಳುವುದು ಬೇಡ.

ಕೇಂದ್ರಕ್ಕೆ ಮುತಾಲಿಕ್ ಆಗ್ರಹ

ಅಫ್ಘಾನ್ ಮುಸ್ಲಿಮರು ಭಾರತೀಯರ ಹೆಸರಿನಲ್ಲಿ ದೇಶದೊಳಗೆ ನುಸುಳದಂತೆ ಕೇಂದ್ರ ಸರ್ಕಾರ ಎಚ್ಚರಿಕೆ ವಹಿಸಬೇಕು.‌ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ದೇಶದಲ್ಲಿ ಏನೇನೋ ನಡೀತಿದೆ. ಅಫ್ಘಾನ ಮುಸ್ಲಿಮರು, ತಾಲಿಬಾನ್ ಉಗ್ರರು ದೇಶಕ್ಕೆ ನುಸುಳುವುದು ದೊಡ್ಡ ಮಾತಲ್ಲ. ತಕ್ಷಣವೇ ಈ ಬಗ್ಗೆ ಕೇಂದ್ರ ಸರ್ಕಾರ ನಿಗಾವಹಿಸಬೇಕು ಎಂದು ಹೇಳಿದ್ದಾರೆ.

ಗಣೇಶೋತ್ಸವ ನಿರ್ಬಂಧ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ : ಕೊರೊನಾ 3ನೇ ಅಲೆ ಹೆಸರಿನಲ್ಲಿ ಗಣೇಶೋತ್ಸವಕ್ಕೆ ನಿರ್ಬಂಧ ಹೇರಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ, ಆಗಸ್ಟ್ 21ರಂದು ರಾಜ್ಯದ ಎಲ್ಲ ತಾಲೂಕು ಹಾಗೂ ಜಿಲ್ಲಾ ಕೇಂದ್ರದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಮುತಾಲಿಕ್ ಎಚ್ಚರಿಸಿದ್ದಾರೆ.

ಸರ್ಕಾರದ ನಿರ್ಧಾರವನ್ನು ಶ್ರೀರಾಮ ಸೇನೆ ಸಂಘಟನೆ ವಿರೋಧಿಸುತ್ತದೆ. ಈ ಆದೇಶ ಕೂಡಲೇ ವಾಪಸ್ ತೆಗೆದುಕೊಳ್ಳಲು ಆಗ್ರಹಿಸುತ್ತೇವೆ. ತೆಲಂಗಾಣ, ಮಹಾರಾಷ್ಟ್ರ ಸರ್ಕಾರಗಳು ಆರು ತಿಂಗಳ ಮೊದಲೇ ಈ ಬಗ್ಗೆ ಸ್ಪಷ್ಟಪಡಿಸಿವೆ. ಆದರೆ, ಕರ್ನಾಟಕ ಸರ್ಕಾರ ಕಡಿಮೆ ಅವಧಿಯಲ್ಲಿ ಆದೇಶ ಹೊರಡಿಸಿದೆ ಎಂದಿದ್ದಾರೆ.

ಹಿಂದೂ ದೇವಸ್ಥಾನ, ಜಾತ್ರೆಗಳಿಗೆ ಮಾತ್ರ ನಿರ್ಬಂಧ ಹಾಕುತ್ತಿರುವುದೇಕೆ? ಮೊಹರಮ್​ಗೆ ನಿರ್ಬಂಧ ಇಲ್ಲ. ಶಾಲಾ, ಕಾಲೇಜು ಆರಂಭಕ್ಕೆ ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ. ಬಸ್, ಮಾರ್ಕೆಟ್, ಮಾಲ್, ರೆಸ್ಟೋರೆಂಟ್ ಎಲ್ಲವೂ ಒಪನ್ ಇವೆ. ಹಿಂದೂಗಳ ಆಚರಣೆಗೇಕೆ ಸರ್ಕಾರ ನಿರ್ಬಂಧ ಹಾಕುತ್ತಿದೆ?.

ನೂರು ನಿಯಮಗಳನ್ನು ಜಾರಿಗೊಳಿಸಿ, ನಾವು ಪಾಲಿಸುತ್ತೇವೆ. ಆದರೆ, ಅವೈಜ್ಞಾನಿಕವಾದ ಆದೇಶ ಹಿಂಪಡೆಯಬೇಕು. ಕೊರೊನಾ ಯಾವುದಕ್ಕೂ ಬರಲ್ಲ, ಹಿಂದೂಗಳ ಆಚರಣೆಗೆ ಮಾತ್ರ ಬರುತ್ತವೆಯೇ? ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ನಾಯಕರು ಘೋರ ಅಪರಾಧ ಮಾಡುತ್ತಿದ್ದಾರೆ. ಲಕ್ಷಾಂತರ ಜನರ ಭಾವನೆ, ಪರಂಪರೆ, ಭಕ್ತಿ ಇದೆ. ಕೋವಿಡ್ ನೆಪ ಹೇಳಿ ಗಣೇಶೋತ್ಸವಕ್ಕೆ ನಿರ್ಬಂಧ ಹಾಕಿರುವುದನ್ನು ನಾವು ಸಹಿಸಲ್ಲ. ಕೆಲವು ಅಧಿಕಾರಿಗಳು ಸರ್ಕಾರವನ್ನು ದಾರಿ ತಪ್ಪಿಸುತ್ತಿದ್ದಾರೆ. ಅದಕ್ಕಾಗಿ ಗಣೇಶೋತ್ಸವಕ್ಕೆ ನಿರ್ಬಂಧ ಹೇರಿದ್ದಾರೆ.

ರಾಜ್ಯದ ಮೂರು ಮಹಾನಗರ ಪಾಲಿಕೆ ಚುನಾವಣೆ ಮಾಡಲಾಗುತ್ತಿದೆ. ಕೇಂದ್ರದ ಮಂತ್ರಿಗಳು ಜನಾಶೀರ್ವಾದ ಕಾರ್ಯಕ್ರಮ ಮಾಡುತ್ತಿದ್ದಾರೆ. ಇದ್ಯಾವುದಕ್ಕೂ ಕೊರೊನಾ ಬರುವುದಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದೂ ಸಚಿವರ ಮೌನವೇಕೆ? : ಹಿಂದೂ ಧರ್ಮದ ಬಗ್ಗೆ ಬಿಜೆಪಿ ನಾಯಕರು ಉದ್ದುದ್ದ ಮಾತನಾಡುತ್ತಾರೆ. ಹಿಂದೂತ್ವದ ಹೆಸರಿನಲ್ಲಿ ಹಲವರು ಮಂತ್ರಿಗಳಾಗಿದ್ದಾರೆ. ರಾಜಕೀಯ ಕಚ್ಚಾಟದಲ್ಲಿ ಹಿಂದೂ ಹಬ್ಬಗಳನ್ನ ಹಾಳು ಮಾಡುತ್ತಿರುವುದು ಎಷ್ಟು ಸರಿ. ನಮ್ಮವರೇ ನಮ್ಮ ಸಂಪ್ರದಾಯಕ್ಕೆ ಭಂಗ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಒಬ್ಬ ಹಿಂದೂ ಸಚಿವರು, ಶಾಸಕರು ಸರ್ಕಾರದ ನಿರ್ಧಾರ ಖಂಡಿಸುತ್ತಿಲ್ಲ. ಸಚಿವರಾಗಲು ಹೋರಾಡುತ್ತೀರಿ, ಹಿಂದೂ ಹುಲಿ ಅಂತಾ ಹೇಳುವವರು ಈಗ ಬಾಯಿ ಬಿಡಿ ನೋಡೋಣ ಎಂದಿದ್ದಾರೆ.

ಬೆಳಗಾವಿಯಲ್ಲಿ ಲವ್ ಜಿಹಾದ್! : ಬೆಳಗಾವಿಯಲ್ಲಿ ಲವ್ ಜಿಹಾದ್ ನಡೆದಿದೆ. ಆರೋಪಿ ಬಂಧಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ಕೋಲ್ಕತಾ ಮೂಲದ ಹಿಂದೂ ಯುವತಿಗೆ ಮುಸ್ಲಿಂ ಯುವಕನಿಂದ ಮೋಸ ಆಗಿದೆ. ನೌಶಾದ್ ಎಂಬ ಮುಸ್ಲಿಂ ಯುವಕ ನಿರ್ಮಲಕುಮಾರ್ ಅಂತಾ ಫೇಸ್ ಬುಕ್ ಐಡಿ ಕ್ರಿಯೇಟ್ ಮಾಡಿ ಯುವತಿಗೆ ವಂಚಿಸಿದ್ದಾನೆ. ನೌಶಾದ್ ವಿರುದ್ಧ ಬೆಳಗಾವಿ ಮಾರ್ಕೆಟ್ ಠಾಣೆಗೆ ಯುವತಿ ದೂರು ನೀಡಿದ್ದಾಳೆ. ಯುವತಿ ದೂರು ನೀಡಿ ಮೂರು ತಿಂಗಳಾದರೂ ಇನ್ನೂ ಆರೋಪಿಯನ್ನು ಬಂಧಿಸಿಲ್ಲ ಎಂದು ಹೇಳಿದ್ದಾರೆ.

ನೌಶಾದ್ ಎಂಬ ಯುವಕ 'ಶ್ರೀರಾಮ' ಹೆಸರಲ್ಲಿ ದಾಬಾ ನಡೆಸುತ್ತಿದ್ದಾನೆ. ಹಿಂದೂ ಹೆಸರಿಟ್ಟುಕೊಂಡು ಹಿಂದೂ ಯುವತಿಯರ ಮೇಲೆ ದೌರ್ಜನ್ಯ ನಡೀತಿದೆ. ಎಫ್ಐಆರ್ ಆಗಿ ಮೂರು ತಿಂಗಳಾಗಿದೆ. ಈವರೆಗೂ ಏಕೆ ಅರೆಸ್ಟ್ ಮಾಡ್ತಿಲ್ಲ? ಮೊದಲು ಆ ಮುಸ್ಲಿಂ ಯುವಕ ನಡೆಸುತ್ತಿದ್ದ ದಾಬಾ ಮುಚ್ಚಿಸಿ. ತಾವು ತೆರಳಿದ್ದ ಹೋಟೆಲ್‌ಗಳ ಹೆಸರು ಫೋನ್ ನಂಬರ್ ಎಲ್ಲಾ ಆ ಯುವತಿ ನೀಡಿದ್ದಾಳೆ. ಕೋಲ್ಕತ್ತಾದಿಂದ ಯುವತಿ ಬರುತ್ತಿದ್ದು, ಆಕೆಗೆ ನಾವು ಬೆಂಬಲ ನೀಡಿದ್ದೇವೆ ಎಂದಿದ್ದಾರೆ.

ಆರೋಪಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ತಿರಸ್ಕಾರಗೊಂಡಿದೆ. ಪೊಲೀಸ್ ಕಮಿಷನರ್‌ ಅವರೇ ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಯೋಚನೆ ಮಾಡಬೇಕು. ಯಾವುದೇ ರಾಜಕಾರಣಿ ಒತ್ತಡಕ್ಕೆ ಮಣಿಯಬೇಡಿ. ಗದಗದ ಮುಸ್ಲಿಂ ಹುಡುಗನಿಂದ 16 ವರ್ಷದ ಬಾಲಕಿಯ ರೇಪ್ & ಮರ್ಡರ್ ಆಗಿದೆ. ಮಾಳಮಾರುತಿ ಠಾಣೆಗೆ ದೂರು ನೀಡಿದ್ರೂ ಇನ್ನೂವರೆಗೂ ಕಂಪ್ಲೇಂಟ್ ಆಗಿಲ್ಲ.

ಬೆಳಗಾವಿಯಲ್ಲಿ ಕೋಲ್ಕತಾ ಮಹಿಳೆಗೆ ಮೋಸ, ಹಾರೂಗೇರಿಯಲ್ಲಿ ಹಿಂದೂ ಬಾಲಕಿ ಮೇಲೆ ಅತ್ಯಾಚಾರ ಆಗಿದೆ. ಸಾಕಷ್ಟು ಪ್ರಕರಣಗಳು ಆಗ್ತಿದ್ದು, ನಾವು ಗೃಹಮಂತ್ರಿ ಅವರಿಗೆ ವರದಿ ಕೊಡುತ್ತೇವೆ. ಕರ್ನಾಟಕದಲ್ಲಿ ಹಿಂದೂ ಮಹಿಳೆಗೆ ರಕ್ಷಣೆ ಇಲ್ಲ ಅಂತಾ ಕೇಂದ್ರಕ್ಕೆ ವರದಿ ಸಲ್ಲಿಸುತ್ತೇನೆ. ರಾಜಕೀಯ ಒತ್ತಡಕ್ಕೆ ಪೊಲೀಸ್​ ಇಲಾಖೆ ಬಲಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಓದಿ: ಬಂದೂಕಿನಿಂದ ಗುಂಡು ಹಾರಿಸಿ ಕೇಂದ್ರ ಸಚಿವರಿಗೆ ಸ್ವಾಗತ

Last Updated : Aug 18, 2021, 7:28 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.