ETV Bharat / state

ಜಾಕ್​​​​ವೆಲ್ ದುರಸ್ತಿಗೆ ತೆರಳಿ ನಾಪತ್ತೆಯಾಗಿದ್ದ ವಾಟರ್​ಮ್ಯಾನ್ ಶವ ಪತ್ತೆ - ಚಿಕ್ಕೋಡಿ ಬೆಳಗಾವಿ ಲೆಟಸ್ಟ್ ನ್ಯೂಸ್

ನಿನ್ನೆ ಜಾಕ್​​ವೆಲ್ ದುರಸ್ತಿ ಸಂದರ್ಭದಲ್ಲಿ ಬಸವರಾಜ ಯಮನಪ್ಪಾ ಹರಜನ ಎಂಬುವವರು ಕೆಸರಿನಲ್ಲಿ‌ ಸಿಲುಕಿ ಸಾವನ್ನಪ್ಪಿರುವ ಶಂಕೆ ಜೊತೆಗೆ ಮೊಸಳೆ ದಾಳಿಯಿಂದ ಸಾವನ್ನಪ್ಪಿರಬಹದು ಎಂಬ ಶಂಕೆ ವ್ಯಕ್ತಪಡಿಸಲಾಗಿತ್ತು. ಇಂದು ಅವರ ಶವ ಪತ್ತೆಯಾಗಿದೆ.

The body of a Waterman who went to repair a Jack Well was found today
ಜಾಕ್​​​​ವೆಲ್ ದುರಸ್ತಿಗೆ ತೆರಳಿದ್ದ ವಾಟರ್ ಮ್ಯಾನ್ ಶವ ಪತ್ತೆ
author img

By

Published : Sep 2, 2020, 1:51 PM IST

ಚಿಕ್ಕೋಡಿ: ಹೀರಣ್ಯಕೇಶಿ ನದಿ ತೀರದ ಜಾಕ್​​ವೆಲ್ ದುರಸ್ತಿಗೆ ತೆರಳಿ ನದಿಗೆ ಬಿದ್ದಿದ್ದ ವಾಟರ್​ಮ್ಯಾನ್ ಶವ ಇಂದು ಪತ್ತೆಯಾಗಿದೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ‌ ಶಿರಡಾಣ ಗ್ರಾಮದ ತೀರದ ಜಾಕ್​​ವೆಲ್ ದುರಸ್ತಿಗೆ ನಿನ್ನೆ ಬೆಳಿಗ್ಗೆ ತೆರಳಿದ್ದ ಪಾಮಲದಿನ್ನಿ ಗ್ರಾಮದ ಬಸವರಾಜ ಯಮನಪ್ಪಾ ಹರಜನ (32) ಮೃತಪಟ್ಟಿದ್ದಾರೆ. ಇವರು ಪಾಮಲದಿನ್ನಿ ಗ್ರಾಮ ಪಂಚಾಯತ್​ನಲ್ಲಿ ಗುತ್ತಿಗೆ ಆಧಾರದಲ್ಲಿ ವಾಟರ್​ಮ್ಯಾನ್​​ ಆಗಿ ಕಾರ್ಯನಿರ್ವಹಿಸುತ್ತಿದ್ದರು. ನಿನ್ನೆ ಜಾಕ್​​ವೆಲ್ ದುರಸ್ತಿ ಸಂದರ್ಭದಲ್ಲಿ ಕೆಸರಿನಲ್ಲಿ‌ ಸಿಲುಕಿ ಸಾವನ್ನಪ್ಪಿರುವ ಶಂಕೆ ಜೊತೆಗೆ ಮೊಸಳೆ ದಾಳಿಯಿಂದ ಸಾವನ್ನಪ್ಪಿರಬಹುದು ಎಂಬ ಶಂಕೆ ವ್ಯಕ್ತಪಡಿಸಲಾಗಿತ್ತು. ನಿನ್ನೆಯಿಂದ ಅಗ್ನಿ‌ಶಾಮಕ ದಳದ ಸಿಬ್ಬಂದಿ ಶವಕ್ಕಾಗಿ ಹುಡುಕಾಟ ನಡೆಸುತ್ತಿದ್ದರು.

ವಾಟರ್​ಮ್ಯಾನ್ ಶವ ಪತ್ತೆ

ಇಂದು ಎನ್‌ಡಿಆರ್‌ಎಫ್ ಹಾಗೂ ಅಗ್ನಿಶಾಮಕ‌ ದಳದ ಸಿಬ್ಬಂದಿಯಿಂದ ಹುಡುಕಾಟ ಕಾರ್ಯ ನಡೆದಿದ್ದು, ಶವ ಪತ್ತೆಯಾಗಿದೆ. ಇದರಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಹುಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ‌.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.