ETV Bharat / state

ಬೆಂಗಳೂರಿನಲ್ಲಿ ಹತ್ತು ಹೊಸ ಕೋವಿಡ್ ಸೆಂಟರ್ ತೆರೆಯಲು ತೀರ್ಮಾನಿಸಿದ್ದೇವೆ: ಸಿಎಂ ಬಿಎಸ್​ವೈ

author img

By

Published : Apr 14, 2021, 5:13 PM IST

Updated : Apr 14, 2021, 6:08 PM IST

ಕೊರೊನಾ ಸೋಂಕು ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

b-s-yadiyurappa
ಬಿಎಸ್​ವೈ

ಬೆಳಗಾವಿ: ಬೆಂಗಳೂರಿನಲ್ಲಿ ಹತ್ತು ಹೊಸ ಕೋವಿಡ್ ಸೆಂಟರ್ ತೆರೆಯಲು ತೀರ್ಮಾನಿಸಿದ್ದೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ನಗರದಲ್ಲಿಂದು ಮಾತನಾಡಿದ ಅವರು, ಹತ್ತು ಹೊಸ ಕೋವಿಡ್ ಸೆಂಟರ್​ನಲ್ಲಿ ಸುಮಾರು 1500 ಬೆಡ್ ವ್ಯವಸ್ಥೆ ಮಾಡುತ್ತಿದ್ದೇವೆ. ಆದರೆ, ಕೊರೊನಾ ಸೋಂಕು ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಮನವಿ ಮಾಡಿದ್ದಾರೆ.

ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಮಾತನಾಡಿದರು

ಲೋಕಸಭೆ ಉಪಚುನಾವಣೆ ಪ್ರಚಾರಾರ್ಥ ಇವತ್ತು ಗೋಕಾಕ್​, ಅರಭಾವಿಗೆ ಹೊರಟಿದ್ದೇನೆ. ಇದಕ್ಕೆ ಜಾರಕಿಹೊಳಿ‌ ಬ್ರದರ್ಸ್ ಸಹಕಾರ ಕೊಡ್ತಿದ್ದಾರೆ. ಈ ಬಾರಿ ಚುನಾವಣೆಯಲ್ಲಿ 4 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ. ಕೊರೊನಾ ಟಫ್ ರೂಲ್ಸ್ ಬಗ್ಗೆ ಸರ್ವಪಕ್ಷ ಸಭೆಯ ಬಳಿಕವಷ್ಟೇ ತೀರ್ಮಾನಿಸುತ್ತೇವೆ. ಸಭೆಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ಸಲಹೆ ಪಡೆಯುತ್ತೇನೆ ಎಂದು ತಿಳಿಸಿದ್ದಾರೆ.

ಓದಿ: ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅಭಿವೃದ್ಧಿ ಕೆಲಸಗಳನ್ನು ಗುರುತಿಸಿ, ಕಾಂಗ್ರೆಸ್​ಗೆ ಮತ ನೀಡಿ: ಸತೀಶ್​ ಜಾರಕಿಹೊಳಿ

Last Updated : Apr 14, 2021, 6:08 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.