ETV Bharat / state

ಬಿಜೆಪಿ ಮಡಿಲಿಗೆ ಕಾಗವಾಡ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನ! - Shobha Sukhadeva Bandara

ಕಾಗವಾಡ ತಾಲೂಕು ಪಂಚಾಯತ್​ ಅಧ್ಯಕ್ಷರಾಗಿ ಜುಗೂಳ ತಾಪಂ ಸದಸ್ಯೆ ಕೃಷ್ಣಾಬಾಯಿ ಬಂಡು ನಂದ್ಯಾಳ ಇವರು 6 ಮತಗಳನ್ನು ಪಡೆದು ಆಯ್ಕೆಯಾದರು. ಇವರ ವಿರುದ್ಧ ಸ್ಪರ್ಧಿಸಿರುವ ಉಗಾರ ತಾ.ಪಂ. ಸದಸ್ಯ ವಸಂತ ಖೋತ 2 ಮತಗಳನ್ನು ಪಡೆದು ಸೋಲು ಅನುಭವಿಸಿದರು. ಉಪಾಧ್ಯಕ್ಷರಾಗಿ ಕಾತ್ರಾಳ ತಾಪಂ ಸದಸ್ಯೆ ಶೋಭಾ ಸುಖದೇವ ಬಂಡಗರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Taluk Panchayat President-Vice-President selection
ಪ್ರಥಮ ತಾಲೂಕು ಪಂಚಾಯತ್​ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಆಯ್ಕೆ
author img

By

Published : Oct 6, 2020, 6:50 PM IST

ಚಿಕ್ಕೋಡಿ : ಕಾಗವಾಡ ತಾಲೂಕು ಪಂಚಾಯತ್​ನಲ್ಲಿ ಪ್ರಥಮ ಬಾರಿಗೆ ತಾಲೂಕು ಪಂಚಾಯತ್​ ಅಧ್ಯಕ್ಷ - ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಅಧ್ಯಕ್ಷರಾಗಿ ಜುಗೂಳ ತಾಲೂಕು ಪಂಚಾಯಿತಿ ಸದಸ್ಯೆ ಕೃಷ್ಣಾಬಾಯಿ ಬಂಡು ನಂದ್ಯಾಳ ಆಯ್ಕೆಯಾಗಿದ್ದಾರೆ.

ತಾಲೂಕು ಪಂಚಾಯತ್ ಪ್ರಥಮ​ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನ ಬಿಜೆಪಿ ಮಡಿಲಿಗೆ

ಚಿಕ್ಕೋಡಿ ಉಪವಿಭಾಗಿಯ ಅಧಿಕಾರಿ ಯುಕೇಶ ಕುಮಾರ ಎಸ್ ಮತ್ತು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ವೀರಣಗೌಡ ಎಗಣಗೌಡರು ನೇತೃತ್ವ ವಹಿಸಿದ್ದರು.

ಕಾಗವಾಡ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಅಧ್ಯಕ್ಷ - ಉಪಾಧ್ಯಕ್ಷರ ಆಯ್ಕೆಗಾಗಿ ಚುನಾವಣೆ ಜರುಗಿತು. 9 ಸದಸ್ಯರನ್ನು ಹೊಂದಿರುವ ಹೊಸ ತಾಲೂಕಿನಲ್ಲಿ ಓರ್ವ ಸದಸ್ಯರು ಮೃತಪಟ್ಟಿದ್ದು, 8 ಸದಸ್ಯರಲ್ಲಿ ಆಯ್ಕೆ ಪ್ರಕ್ರಿಯೆ ನೆರವೇರಿತು.

ಅಧ್ಯಕ್ಷರಾಗಿ ಜುಗೂಳ ತಾ.ಪಂ ಸದಸ್ಯೆ ಕೃಷ್ಣಾಬಾಯಿ ಬಂಡು ನಂದ್ಯಾಳ ಇವರು 6 ಮತಗಳನ್ನು ಪಡೆದು ಆಯ್ಕೆಯಾದರು. ಇವರ ವಿರುದ್ಧ ಸ್ಪರ್ಧಿಸಿರುವ ಉಗಾರ ತಾ.ಪಂ. ಸದಸ್ಯ ವಸಂತ ಖೋತಾ 2 ಮತಗಳನ್ನು ಪಡೆದು ಸೋಲು ಅನುಭವಿಸಿದರು. ಉಪಾಧ್ಯಕ್ಷರಾಗಿ ಕಾತ್ರಾಳ ತಾಪಂ ಸದಸ್ಯೆ ಶೋಭಾ ಸುಖದೇವ ಬಂಡಗರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.