ETV Bharat / state

ಮಾಧ್ಯಮಗಳ ಮುಂದೆ ಸಮಸ್ಯೆ ಹೇಳಿಕೊಂಡ ನೆರೆ ಸಂತ್ರಸ್ತರಿಗೆ ತಹಶೀಲ್ದಾರ್​ ಎಚ್ಚರಿಕೆ ಆರೋಪ - Dundappa Komara

ಮಾಧ್ಯಮಗಳ ಮೂಲಕ ಸಮಸ್ಯೆ ಹೇಳಿದ್ದಾರೆ ಎಂದು ಸಂತ್ರಸ್ತರ ವಿರುದ್ಧ ತಹಶೀಲ್ದಾರ್ ದುಂಡಪ್ಪ ಕೋಮಾರ ಆಕ್ರೋಶಗೊಂಡಿದ್ದು, ಎಫ್​ಐಆರ್​ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

ತಹಶೀಲ್ದಾರ್ ದುಂಡಪ್ಪ ಕೋಮಾರ
ತಹಶೀಲ್ದಾರ್ ದುಂಡಪ್ಪ ಕೋಮಾರ
author img

By

Published : Aug 24, 2020, 2:24 PM IST

Updated : Aug 24, 2020, 3:24 PM IST

ಅಥಣಿ: ಮಾಧ್ಯಮಗಳ ಮುಂದೆ ನೆರೆ ಸಂತ್ರಸ್ತರು ತಮ್ಮ ಸಮಸ್ಯೆಗಳನ್ನು ಹೇಳಿದ್ದಾರೆ ಎಂದು ಆಕ್ರೋಶಗೊಂಡ ಅಥಣಿ ತಹಶೀಲ್ದಾರ್ ದುಂಡಪ್ಪ ಕೋಮಾರ, ಸಂತ್ರಸ್ತರ ವಿರುದ್ಧ ಎಫ್​ಐಆರ್​ ದಾಖಲಿಸುತ್ತೇನೆ ಎಂದು ಎಚ್ಚರಿಕೆ ನೀಡಿರುವ ಆರೋಪ ಕೇಳಿ ಬಂದಿದೆ.

ತಹಶೀಲ್ದಾರ್ ದುಂಡಪ್ಪ ಕೋಮಾರ ಎಚ್ಚರಿಕೆ ನೀಡುತ್ತಿರುವ ದೃಶ್ಯ

ತಾಲೂಕಿ ಹುಲಗಬಾಳ ಗ್ರಾಮದ ಮಾಂಗ ವಸತಿಯ ಕೆಲವು ಸಂತ್ರಸ್ತರರು ಮಾಧ್ಯಮಗಳ ಮುಂದೆ ತಮ್ಮ ಸಮಸ್ಯೆಗಳ ಕುರಿತು ಹೇಳಿಕೊಂಡಿದ್ದರು. ಅಷ್ಟೇ ಅಲ್ಲದೆ ಶಾಶ್ವತ ಪರಿಹಾರ, ತುರ್ತಾಗಿ ದನಕರುಗಳಿಗೆ ಮೇವು, ವಸತಿ ಸಂಪರ್ಕಕ್ಕೆ ಸೇತುವೆ ವ್ಯವಸ್ಥೆ ಮಾಡುವಂತೆ ಮಾಧ್ಯಮಗಳ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದರು. ಆದರೆ ಈ ವಿಚಾರ ತಿಳಿದ ತಹಶೀಲ್ದಾರ್​ ಭೇಟಿ ನೀಡಿ ಸಮಸ್ಯೆ ಕುರಿತು ಆಲಿಸುವುದನ್ನು ಬಿಟ್ಟು, ಸಂತ್ರಸ್ತರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ ಎನ್ನಲಾಗಿದೆ.

ಕೆಲ ಮೂಲಗಳ ಮಾಹಿತಿ ಪ್ರಕಾರ, ಸಮಸ್ಯೆಗಳ ಕುರಿತು ಸಿಎಂ ಯಡಿಯೂರಪ್ಪನವರು ಗಮನಿಸಿ ಜಿಲ್ಲಾಧಿಕಾರಿಗೆ ಕರೆ ಮಾಡಿ ಅಲ್ಲಿನ ಜನರಿಗೆ ಮೂಲಭೂತ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ತಹಶೀಲ್ದಾರರ ವಿರುದ್ಧ ಸಂತ್ರಸ್ತರು ಆಕ್ರೋಶ ಹೊರ ಹಾಕಿದ್ದಾರೆ.

Last Updated : Aug 24, 2020, 3:24 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.