ETV Bharat / state

ಬೆಳಗಾವಿ : ಆರ್‌ಎಲ್‌ಎಸ್ ಕಾಲೇಜಿನಲ್ಲಿ ಜಾನಪದ ಲೋಕವನ್ನೇ ಸೃಷ್ಟಿಸಿದ ವಿದ್ಯಾರ್ಥಿಗಳು - Students who created the folk world at RLS College

ಆಧುನಿಕತೆಯ ಜೀವನಶೈಲಿಯ ಭರಾಟೆಯಲ್ಲಿ ನಮ್ಮ ನಾಡಿನ ಶ್ರೀಮಂತ ಸಂಸ್ಕೃತಿ ನೇಪಥ್ಯಕ್ಕೆ ಸರಿಯುತ್ತಿರುವ ಈ ಸಂದರ್ಭದಲ್ಲಿ ಗ್ರಾಮೀಣ ಸೊಬಗನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ವಿಶೇಷ ಕಾರ್ಯಕ್ರಮವನ್ನು ಬೆಳಗಾವಿ ನಗರದ ಆರ್‌ಎಲ್ ಎಸ್ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ಜಾನಪದ ಲೋಕವನ್ನೇ ಸೃಷ್ಟಿಸಿದ್ದರು..

students-who-created-the-folk-world-at-rls-college
ಬೆಳಗಾವಿ : ಆರ್ ಎಲ್ ಎಸ್ ಕಾಲೇಜಿನಲ್ಲಿ ಜಾನಪದ ಲೋಕವನ್ನೇ ಸೃಷ್ಟಿಸಿದ ವಿದ್ಯಾರ್ಥಿಗಳು
author img

By

Published : Jun 5, 2022, 4:50 PM IST

ಬೆಳಗಾವಿ : ಕೊರೊನಾ ಮಹಾಮಾರಿ ಹಿನ್ನೆಲೆ ಕಳೆದೆರಡು ವರ್ಷಗಳಿಂದ ಶಾಲಾ-ಕಾಲೇಜುಗಳು ಸಂಪೂರ್ಣ ಸ್ಥಬ್ದವಾಗಿದ್ದವು. ಅಂತೆಯೇ ಕಾಲೇಜುಗಳಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಕಡಿವಾಣ ಬಿದ್ದಿತ್ತು.

ಇದೀಗ ಕೊರೊನಾ ನಿಯಂತ್ರಣಗೊಂಡ ಹಿನ್ನೆಲೆ ಕಾಲೇಜುಗಳು ಪೂರ್ಣ ಪ್ರಮಾಣದಲ್ಲಿ ಆರಂಭವಾಗಿವೆ. ಮತ್ತೆ ಕಾಲೇಜುಗಳಲ್ಲಿ ಮೊದಲಿನಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಬೆಳಗಾವಿಯ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳು ಜಾನಪದ ಜಾತ್ರೆ ಮಾಡುವ ಮೂಲಕ ಜಾನಪದ ಲೋಕವನ್ನೇ ಸೃಷ್ಟಿಸಿದ್ದಾರೆ.

ಬೆಳಗಾವಿಯ ಆರ್‌ಎಲ್‌ಎಸ್ ಕಾಲೇಜಿನಲ್ಲಿ ಜಾನಪದ ಜಾತ್ರೆಯ ವೈಭವ..

ಆಧುನಿಕತೆಯ ಜೀವನಶೈಲಿಯ ಭರಾಟೆಯಲ್ಲಿ ನಮ್ಮ ನಾಡಿನ ಶ್ರೀಮಂತ ಸಂಸ್ಕೃತಿ ನೇಪಥ್ಯಕ್ಕೆ ಸರಿಯುತ್ತಿರುವ ಈ ಸಂದರ್ಭದಲ್ಲಿ ಗ್ರಾಮೀಣ ಸೊಬಗನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ವಿಶೇಷ ಕಾರ್ಯಕ್ರಮವನ್ನು ಬೆಳಗಾವಿ ನಗರದ ಕಾಲೇಜೊಂದರಲ್ಲಿ ಹಮ್ಮಿಕೊಳ್ಳಲಾಗಿತ್ತು.

ಹೆಚ್ಚಾಗಿ ನಗರ ಪ್ರದೇಶದ ವಿದ್ಯಾರ್ಥಿಗಳೇ ಇರುವ ಬೆಳಗಾವಿ ನಗರದ ಆರ್‌ಎಲ್‌ಎಸ್ ಕಾಲೇಜಿನಲ್ಲಿ ಜಾನಪದ ಜಾತ್ರೆ ಕಾರ್ಯಕ್ರಮದ ಮೂಲಕ‌ ನಾಡಿನ ಭವ್ಯ ಸಂಸ್ಕೃತಿಯ ಬಗೆಗೆ ಒಲವು ಮೂಡಿಸುವ ಪ್ರಯತ್ನವನ್ನು ಕಾಲೇಜು ಆಡಳಿತ ಮಾಡಿತ್ತು. ಬೆಳಗಾವಿ ನಗರದ ಹೃದಯ ಭಾಗದಲ್ಲಿರುವ ಕೆಎಲ್ಇ ಸಂಸ್ಥೆಯ ಆರ್‌ಎಲ್‌ಎಸ್ ಕಾಲೇಜಿನಲ್ಲಿ ಹೊಸ ಲೋಕವೇ ತೆರೆದುಕೊಂಡಿತ್ತು.

ಕಾಲೇಜಿನಲ್ಲಿ ಜಾನಪದ ಜಾತ್ರೆ : ಪ್ರತಿದಿನ ಜೀನ್ಸ್‌-ಟೀಶರ್ಟ್‌ ಮತ್ತು ಚೂಡಿದಾರ್‌ಗಳಲ್ಲಿ ಆಗಮಿಸುತ್ತಿದ್ದ ವಿದ್ಯಾರ್ಥಿನಿಯರು ಇಂದು ಸಾಂಪ್ರದಾಯಿಕ ಉಡುಗೆಗಳಾದ ಸೀರೆ, ಲಂಗಾ-ದಾವಣಿಗಳಲ್ಲಿ ಕಂಗೊಳಿಸುತ್ತಿದ್ದರು. ಕೆಲವರು ರೇಷ್ಮೆ ಸೀರೆಗಳು ಹಾಗೂ ಚಿನ್ನಾಭರಣಗಳೊಂದಿಗೆ ಮಿರಿಮಿರಿ ಮಿಂಚುತ್ತಿದ್ದರು. ಇತ್ತ ಲಲನೆಯರು ಕಾಲೇಜಿನಲ್ಲಿ ಹೆಜ್ಜೆ ಹಾಕುತ್ತಿದ್ದರೆ ಎಲ್ಲರ ಗಮನವೂ ಅವರತ್ತಲೇ ಹೊರಳುತ್ತಿತ್ತು.

ಸಾಂಪ್ರದಾಯಿಕ ಉಡುಗೆಗಳ ಬಗ್ಗೆ ಒಲವು ಮೂಡಿಸುವ ಪ್ರಯತ್ನವೂ ಜಾನಪದ ಜಾತ್ರೆಯಲ್ಲಿ ಕಂಡು ಬಂತು. ತರಹೇವಾರಿ ಆಭರಣಗಳನ್ನು ಧರಿಸಿ ಬಂದಿದ್ದ ವಿದ್ಯಾರ್ಥಿಗಳನ್ನು ನೋಡುತ್ತಿದ್ದರೆ ಸಂಕ್ರಾಂತಿ ಹಬ್ಬದ ವಾತಾವರಣ ನಿರ್ಮಾಣವಾದಂತಿತ್ತು. ವಿದ್ಯಾರ್ಥಿನಿಯರು ಮಾತ್ರವಲ್ಲ, ಪ್ರಾಂಶುಪಾಲರು, ಕಾಲೇಜಿನ ಸರ್ವ ಸಿಬ್ಬಂದಿ, ಹಳೆಯ ವಿದ್ಯಾರ್ಥಿಗಳು ಸಾಂಪ್ರದಾಯಿಕ ವಸ್ತ್ರಗಳಲ್ಲಿ ಕಂಗೊಳಿಸುತ್ತಿದ್ದರು. ಮಹಿಳಾ ಸಿಬ್ಬಂದಿ ಸೀರೆಯುಟ್ಟಿದ್ದರೆ, ಪುರುಷರು ಬಿಳಿ ಅಂಗಿ ಮತ್ತು ಪಂಚೆಯಲ್ಲಿ‌ ಮಿಂಚುತ್ತಿದ್ದರು.

ಈ ಕುರಿತು ಪ್ರತಿಕ್ರಿಯೆ ನೀಡಿದ ಕಾಲೇಜು ಪ್ರಾಂಶುಪಾಲರು, ಕಾಲೇಜಿನಲ್ಲಿ ಹಲವು ವರ್ಷಗಳಿಂದ ನಿರಂತರವಾಗಿ ಜಾನಪದ ಜಾತ್ರೆ ನಡೆಸಿಕೊಂಡು ಬರಲಾಗುತ್ತಿದೆ. ಕೊರೊನಾ ಕಾರಣಕ್ಕೆ ಕಳೆದೆರಡು ವರ್ಷಗಳಿಂದ‌ ಆಚರಣೆ ಮಾಡಲಾಗಿರಲಿಲ್ಲ. ಆಧುನಿಕತೆಯ ಅಬ್ಬರದ ನಡುವೆ ಹಳ್ಳಿಯ ಸೊಗಡನ್ನು, ದೇಶಿಯ ಕಲೆ, ಸಂಸ್ಕೃತಿಯನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಜಾನಪದ ಜಾತ್ರೆ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ. ಜಾನಪದ ಕಲೆ, ಗ್ರಾಮೀಣ ಜೀವನಶೈಲಿ, ಉಡುಗೆ-ತೊಡುಗೆ, ತಿನಿಸುಗಳನ್ನು ಪರಿಚಯಿಸುವ ಪ್ರಯತ್ನ ಈ ಜಾತ್ರೆಯ ಉದ್ದೇಶವಾಗಿದೆ ಎಂದರು.

ಸಾಂಪ್ರದಾಯಿಕ ಉಡುಗೆ-ತೊಡುಗೆಯಲ್ಲಿ ವಿದ್ಯಾರ್ಥಿಗಳ ಮಿಂಚು : ಇನ್ನೂ ಕಾಲೇಜಿನಲ್ಲಿ ವಾರದಲ್ಲಿ ಒಂದೆರೆಡು ದಿನ ಮಾತ್ರ ವಿದ್ಯಾರ್ಥಿಗಳು ಇತರೆ ಬಟ್ಟೆ ತೊಟ್ಟು ಬರುತ್ತಾರೆ. ಸದಾ ಚೂಡಿದಾರ್, ಟೀಶರ್ಟ್, ಪ್ಯಾಂಟು ತೊಟ್ಟು ಕಾಲೇಜಿಗೆ ಬರುತ್ತಿದ್ದ ಕಾಲೇಜು ವಿದ್ಯಾರ್ಥಿಗಳು ಇಂದು ಬಣ್ಣ ಬಣ್ಣದ ರೇಷ್ಮೆ, ಫ್ಯಾಶನ್ ಸೀರೆಗಳನ್ನು ತೊಟ್ಟು ಮದುವಣಗಿತ್ತಿಯರಂತೆ ಮಿಣುಗುತ್ತಿದ್ದರು.

ಉದ್ದನೆಯ ಜಡೆ, ಮುಡಿಗೆ ಕನಕಾಂಬರ, ಮಲ್ಲಿಗೆ ಹೂವು, ಜುಟ್ಟಿಗೆ ಚೌಲಿ, ನಡುವಿಗೆ ಡಾಬು, ಕತ್ತಿಗೆ ನೆಕ್ಲೇಸ್, ಸರ, ಸೀರೆಗೆ ಹೊಂದುವ ಹಾಗೆ ಕೈ ತುಂಬಾ ಗಾಜಿನ ಬಳೆ, ಕಿವಿಗೆ ಓಲೆ, ಜುಮಕಿ, ಲಂಗಾ-ದಾವಣಿ ಹೀಗೆ ತಮಗಿಷ್ಟದ ಉಡುಪುಗಳೊಂದಿಗೆ ವಿದ್ಯಾರ್ಥಿಗಳು ಕಾಲೇಜಿಗೆ ಆಗಮಿಸಿದ್ದರು. ಇತ್ತ ಕಾಲೇಜು ಆವರಣವು ಸಂಕ್ರಾಂತಿ ಹಬ್ಬದ ಜೊತೆಗೆ ಮದುವೆ ಮನೆಯ ಸಂಭ್ರಮಕ್ಕೆ ಸಜ್ಜುಗೊಂಡಂತೆ ಕಾಣುತ್ತಿತ್ತು.

ಗ್ರಾಮೀಣ ಖಾದ್ಯಗಳ ಪ್ರದರ್ಶನ : ಒಂದು ಕಡೆ ಜಾನಪದ ಕಲೆಗಳು ಅನಾವರಣಗೊಳ್ಳುತ್ತಿದ್ದರೆ, ಮತ್ತೊಂದೆಡೆ ವಿದ್ಯಾರ್ಥಿನಿಯರಿಂದಲೇ ಗ್ರಾಮೀಣ ತಿನಿಸುಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಹಮ್ಮಿಕೊಳ್ಳಲಾಗಿತ್ತು. ಕೆಲ ವಿದ್ಯಾರ್ಥಿನಿಯರು ಮನೆಯಿಂದಲೇ ತಿನಿಸುಗಳನ್ನು ಮಾಡಿಕೊಂಡು ಬಂದಿದ್ದರು. ಇದರ ಜೊತೆಗೆ ಕಾಲೇಜಿನಲ್ಲಿ ಜಾನಪದ ಜಾತ್ರೆ ನಿಮಿತ್ತ ವಿದ್ಯಾರ್ಥಿಗಳು ಇಡೀ ದಿನ ನೃತ್ಯ, ಜಾನಪದ ಕಲೆ ಪ್ರದರ್ಶನ, ತಿಂಡಿ-ತಿನಿಸು ಸವಿದು ಹರ್ಷ ವ್ಯಕ್ತಪಡಿಸಿದರು.

ಪ್ರಸ್ತುತ ದಿನಗಳಲ್ಲಿ ದೇಸಿಯ ಸಂಸ್ಕೃತಿ ಕಣ್ಮರೆ ಆಗುತ್ತಿರುವ ಈ ಸಂದರ್ಭದಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಜಾನಪದ ಶೈಲಿಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ನಮ್ಮ ನಾಡಿನ ಕಲೆ,ಸಾಹಿತ್ಯ, ಸಂಸ್ಕೃತಿ, ಜಾನಪದ ಉಳಿಸುವ ಕೆಲಸ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಇದರಿಂದ ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಸಾಧ್ಯವಾಗುತ್ತದೆ.

ಓದಿ : ರಾಜ್ಯಾದ್ಯಂತ ಮುಂದಿನ ಐದು ದಿನ ಭಾರಿ ಮಳೆ ಮುನ್ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.