ಚಿಕ್ಕೋಡಿ (ಬೆಳಗಾವಿ): ರಾಜ್ಯದಲ್ಲಿ ಇಂದಿನಿಂದ ಶಾಲೆಗಳು ಆರಂಭವಾಗಿದ್ದು, 1ರಿಂದ 5 ನೇ ತರಗತಿಗಳು ಶುರುವಾಗಿವೆ. ಈ ನಡುವೆ ಇಂದಿನ ಮೊದಲ ದಿನದ ತರಗತಿ ಮುಗಿಸಿ ಮನೆಗೆ ಬಂದ ವಿದ್ಯಾರ್ಥಿಗೆ ಅದ್ದೂರಿಗೆ ಸ್ವಾಗತ ನೀಡಿದ್ದಾರೆ.
ಶಾಲೆಯಿಂದ ಮನೆಗೆ ಬಂದ ವಿದ್ಯಾರ್ಥಿಗೆ ಕುಟುಂಬಸ್ಥರು ಹೂವಿನ ಹಾರ ಹಾಕಿ, ತೆಂಗಿನಕಾಯಿ ಒಡೆದು, ಸಿಹಿ ತಿನ್ನಿಸಿ ಮನೆಯೊಳಗೆ ಬರಮಾಡಿಕೊಂಡಿದ್ದಾರೆ. ಚಿಕ್ಕೋಡಿ ಪಟ್ಟಣದ ಮುಲ್ಲಾ ಪ್ಲಾಟ್ ನಿವಾಸಿ, ಕುಂದಾಚಾರ್ಯ ಶಾಲೆಯ 3ನೇ ತರಗತಿ ವಿದ್ಯಾರ್ಥಿ ತಮೀಮ್ ಕುಡಚೆಗೆ ಮನೆಯಲ್ಲಿ ಅಚ್ಚರಿ ಎದುರಾಗಿತ್ತು.
ತರಗತಿ ಮುಗಿಸಿ ಮನೆಗೆ ಬಂದಾಗ ಬಾಗಿಲಲ್ಲಿ ನಿಲ್ಲಿಸಿ ಹೂವಿನ ಹಾರ ಹಾಕಿ, ತೆಂಗಿನಕಾಯಿ ಒಡೆದು ಸಂಭ್ರಮಿಸಿದ್ದಾರೆ.
ಇದನ್ನೂ ಓದಿ: 'ಸಾಹೇಬ್ರೆ ನಮ್ದೊಂದು ಕೆಲಸ ಮಾಡಿಕೊಡ್ರಿ' ಎಂದು ಅಂಗಲಾಚಿದ ರೈತ: ಲಂಚ ಪಡೆಯುತ್ತಿರುವ PDO ವಿಡಿಯೋ ವೈರಲ್