ETV Bharat / state

ಪ್ರವಾಹ: ನಿಪ್ಪಾಣಿ ತಾಲೂಕಲ್ಲಿ ಗಂಜಿ ಕೇಂದ್ರ ಆರಂಭ - Start of Porridge Center

ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನಲ್ಲಿ ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. ನದಿ ಪಾತ್ರದ ಜನರನ್ನು ಸ್ಥಳಾಂತರಿಸಲಾಗುತ್ತಿದ್ದು, ಜನರಿಗೆ ಗಂಜಿ ಕೇಂದ್ರಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಗ್ರಾಮ ಲೆಕ್ಕಾಧಿಕಾರಿ ವಿ.ಎಂ.ಅಂಗಡಿ ಹೇಳಿದರು.

Start of Porridge Center in Nippani Taluk
ಗಂಜಿ ಕೇಂದ್ರ ಆರಂಭ
author img

By

Published : Aug 8, 2020, 6:24 PM IST

ಚಿಕ್ಕೋಡಿ: ಜಿಲ್ಲೆಯ ನಿಪ್ಪಾಣಿ ತಾಲೂಕಿನ ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ತಾಲೂಕು ಆಡಳಿತದಿಂದ ನದಿ ತೀರದ ಗ್ರಾಮಸ್ಥರನ್ನು ಸ್ಥಳಾಂತರಿಸಲಾಗುತ್ತಿದ್ದು, ಗಂಜಿ ಕೇಂದ್ರಗಳನ್ನು ತೆರೆಯಲಾಗುತ್ತಿದೆ ಎಂದು ಗ್ರಾಮ ಲೆಕ್ಕಾಧಿಕಾರಿ ವಿ.ಎಂ.ಅಂಗಡಿ ಹೇಳಿದರು.

ಗಂಜಿ ಕೇಂದ್ರ ಆರಂಭ

ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ‌ ಭಾರಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ದೂಧಗಂಗಾ, ವೇದಗಂಗಾ ನದಿಗಳಿಂದಾಗಿ ನಿಪ್ಪಾಣಿ ತಾಲೂಕಿನ ಬೋಳೆವಾಡಿ, ಹುನ್ನುರಗಿ, ಸಿದ್ನಾಳ ಮಮದಾಪುರ ಕೆ.ಎಲ್.ಜತ್ರಾಟ್ ಗ್ರಾಮಗಳನ್ನು ಸ್ಥಳಾಂತರಿಸಲಾಗುತ್ತದೆ.

ನಿಪ್ಪಾಣಿ ತಾಲೂಕಿನ ಐದು ಗ್ರಾಮಗಳ 150ಕ್ಕೂ ಹೆಚ್ಚು ಜನರಿಗೆ ಗಂಜಿ ಕೇಂದ್ರ ಸ್ಥಾಪನೆ ಮಾಡಲಾಗಿದೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ದೂಧಗಂಗಾ, ವೇದಗಂಗಾ, ಕೃಷ್ಣಾ ನದಿ ಒಳಹರಿವಿನಿಂದ ನದಿ ತೀರದ ಗ್ರಾ‌ಮಸ್ಥರು ಆತಂಕಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.