ETV Bharat / state

ಕೊರೊನಾ ಪರಿಹಾರ ನಿಧಿಗೆ 5 ಲಕ್ಷ ರೂಪಾಯಿ ನೀಡಿದ ಶ್ರೀಶೈಲ ಜಗದ್ಗುರುಗಳು - ಕೊರೊನಾ ಪರಿಹಾರ ನಿಧಿಗೆ ಶ್ರೀ ಶೈಲ ಜಗದ್ಗುರುಗಳು ಸಹಾಯ

ಬೆಳಗಾವಿಯ ಚಿಕ್ಕೋಡಿ ತಾಲೂಕಿನ ಯಡೂರಿನ ಶ್ರೀ ವೀರಭದ್ರೇಶ್ವರ ದೇವಸ್ಥಾನ ಹಾಗೂ ಶ್ರೀ ಕಾಡಸಿದ್ದೇಶ್ವರ ಮಠದ ವತಿಯಿಂದ ಕೊರೊನಾ ವೈರಸ್ ಪರಿಹಾರ ನಿಧಿಗೆ 5 ಲಕ್ಷ ರೂಪಾಯಿ ಪರಿಹಾರ ಹಣ ನೀಡಲಾಗಿದೆ.

Sri shaila jagadguru
ಶ್ರೀಶೈಲ ಜಗದ್ಗುರುಗಳು
author img

By

Published : May 2, 2020, 8:11 PM IST

ಚಿಕ್ಕೋಡಿ (ಬೆಳಗಾವಿ): ಮಾರ್ಚ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಮೊದಲ ಕೊರೊನಾ ಪ್ರಕರಣ ಕಾಣಿಸಿಕೊಂಡಿದ್ದು ಇಂದು ಆ ಸಂಖ್ಯೆ 601ಕ್ಕೆ ಏರಿದೆ. ಲಾಕ್​​ಡೌನ್​​​​ನಿಂದ ಕಷ್ಟಪಡುತ್ತಿರುವ ಜನರಿಗೆ ಸಹಾಯ ಮಾಡಲು ಸೆಲಬ್ರಿಟಿಗಳು, ಸಂಘಸಂಸ್ಥೆಗಳು ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಣ ದೇಣಿಗೆ ನೀಡುತ್ತಿದ್ದಾರೆ.

5 ಲಕ್ಷ ರೂಪಾಯಿ ನೀಡಿದ ಶ್ರೀಶೈಲ ಜಗದ್ಗುರುಗಳು

ಕೊರೊನಾ ಪರಿಹಾರ ನಿಧಿಗೆ ಮಠ ಮಾನ್ಯಗಳು ಕೂಡಾ ಮುಂದಾಗಬೇಕು ಎಂದು ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಮನವಿ ಮಾಡಿದ್ದರು. ಈ ಹಿನ್ನೆಲೆ ಯಡೂರಿನ ಶ್ರೀ ವೀರಭದ್ರೇಶ್ವರ ದೇವಸ್ಥಾನ ಹಾಗೂ ಶ್ರೀ ಕಾಡಸಿದ್ದೇಶ್ವರ ಮಠದಿಂದ ಕೊರೊನಾ ಪರಿಹಾರ ನಿಧಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ‌‌ ಎಂದು ಶ್ರೀಶೈಲ ಜಗದ್ಗುರುಗಳು ಹೇಳಿದ್ದಾರೆ. ಬೆಳಗಾವಿ‌ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರಿನ ಮಠದಲ್ಲಿ ಸಿಎಂ ಪರಿಹಾರ ನಿಧಿಗೆ ಹಣ ನೀಡಿದ ಅವರು ಮಾಧ್ಯಮದೊಂದಿಗೆ ಮಾತನಾಡಿದರು.

ವಿಶ್ವಾದ್ಯಂತ ಕೊರೊನಾ ವೈರಸ್ ಬಹಳಷ್ಟು ಅನಾಹುತ ಸೃಷ್ಟಿಸಿದೆ. ಈ ವೈರಸ್​​​​​​​​​​​​​​ನಿಂದ ಜನರ ಜೀವನ ಅಸ್ತವ್ಯಸ್ತವಾಗಿದೆ. ಅಲ್ಲದೆ, ಭಾರತಕ್ಕೆ ಕೂಡಾ ಕಾಲಿಟ್ಟು ಬಹಳಷ್ಟು ಸಾವು ನೋವು ಸಂಭವಿಸುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ವೈರಸ್​​​​​​ ನಿಯಂತ್ರಣಕ್ಕಾಗಿ ಸಮರ್ಪಕವಾಗಿ ಕೆಲಸವನ್ನೂ ಮಾಡುತ್ತಿದೆ. ಸಿಎಂ ಮನವಿ ಮಾಡಿದಂತೆ ಇತರ ಮಠಗಳು ಕೂಡಾ ಕೊರೊನಾ ವೈರಸ್ ತಡೆಗಟ್ಟಲು ಕೈಲಾದಷ್ಟು ಸಹಾಯ ಮಾಡಿ ಎಂದು ಶ್ರೀಶೈಲ ಜಗದ್ಗುರುಗಳು ಕರೆ ನೀಡಿದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.