ETV Bharat / state

'ಕಾನೂನು ಬಡವರನ್ನು ಆಳುತ್ತಿದೆ, ಪ್ರಭಾವಿಗಳು ಕಾನೂನನ್ನು ಆಳುತ್ತಿದ್ದಾರೆ' - chikkod latest news updates'

ಸರ್ಕಾರ 10 ವರ್ಷದೊಳಗಿನ ಮಕ್ಕಳಿಗೆ ಹಾಗೂ 65 ವರ್ಷದ ವೃದ್ಧರು ಹೊರಗಡೆ ಮನೆ ಬಿಟ್ಟು ಬರಬಾರದೆಂದು ಆದೇಶ ಮಾಡಿದೆ. ಆದರೆ ಪ್ರಭಾವಿ ವ್ಯಕ್ತಿಗಳು ಈ ಆದೇಶವನ್ನು ಪಾಲನೆ ಮಾಡ್ತಿಲ್ಲ ಅಂತ ಚಿಕ್ಕೋಡಿಯಲ್ಲಿ ಸಾಮಾಜಿಕ ಹೋರಾಟಗಾರ ಚಂದ್ರಕಾಂತ ಹುಕ್ಕೇರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

social worker chandrakan th hukkeri opinion
ಚಂದ್ರಕಾಂತ ಹುಕ್ಕೇರಿ
author img

By

Published : Jun 13, 2020, 5:00 PM IST

ಚಿಕ್ಕೋಡಿ: ಕಾನೂನು ಬಡವರನ್ನು ಆಳುತ್ತಿದೆ, ಪ್ರಭಾವಿಗಳು ಕಾನೂನನ್ನು ಆಳುತ್ತಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಚಂದ್ರಕಾಂತ ಹುಕ್ಕೇರಿ ಪ್ರಭಾವಿಗಳ ವಿರುದ್ಧ ಕಿಡಿ ಕಾರಿದ್ದಾರೆ.

ಕಾನೂನು ಪಾಲನೆ ಮಾಡದ ಪ್ರಭಾವಿಗಳ ವಿರುದ್ಧ ಚಂದ್ರಕಾಂತ ಹುಕ್ಕೇರಿ ತೀವ್ರ ಅಸಮಾಧಾನ
ಚಿಕ್ಕೋಡಿ ಪಟ್ಟಣದಲ್ಲಿ ಮಾತನಾಡಿದ ಅವರು, ಈಗಾಗಲೇ ಸರ್ಕಾರ 10 ವರ್ಷದೊಳಗಿನ ಮಕ್ಕಳು ಹಾಗೂ 65 ವರ್ಷ ಮೇಲ್ಪಟ್ಟ ವೃದ್ಧರು ಮನೆ ಬಿಟ್ಟು ಹೊರಗಡೆ ಬರಬಾರದೆಂದು ಆದೇಶ ಮಾಡಿದೆ. ಸರ್ಕಾರ ನಮ್ಮ ಸಲುವಾಗಿ ಈ ಆದೇಶ ಹೊರಡಿಸಿದ್ರೂ ಸಹ ಪ್ರಭಾವಿಗಳು ಮಾತ್ರ ಈ ಆದೇಶ ಪಾಲನೆ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ರಾಜಕಾರಣಿಗಳಲ್ಲಿ ನೋಡುವುದಾದರೆ 65 ವರ್ಷ ಮೇಲ್ಪಟ್ಟವರು ತುಂಬಾ ಜನ ಇದ್ದಾರೆ. ಆದರೂ ಅವರು ಬಿಂದಾಸ್​​ ಆಗಿ ತಿರುಗಾಡುತ್ತಿದ್ದಾರೆ. ಮಾಸ್ಕ್​​ ​​ಹಾಕುತ್ತಿಲ್ಲ, ಸಾಮಾಜಿಕ ಅಂತರವಿಲ್ಲದೆ ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಅವರಿಗೆ ಕಾನೂನು ಅನ್ವಯವಾಗುದಿಲ್ಲವೆ? ಎಂದು ಪ್ರಶ್ನಿಸಿದ್ದಾರೆ.
ಕಾನೂನು ಕೇವಲ ಬಡವರಿಗೆ, ಮಧ್ಯಮವರ್ಗದವರಿಗೆ ಮಾತ್ರವಿದೆಯೇ?.ರಾಜಕಾರಣಿಗಳಿಗೆ ಕಾನೂನು ಅಪ್ಲೈ ಆಗುವುದಿಲ್ಲವೇ? ದಯಮಾಡಿ ಕಾನೂನು ಪಾಲನೆ ಮಾಡುವುದನ್ನು ಹೇಳುವ ಮೊದಲು ದೇಶ, ರಾಜ್ಯ ಆಳುವ ನೀವು ಕಾನೂನು ಪಾಲನೆ ಮಾಡಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಎಲ್ಲರೂ ಕಾನೂನಿನ ಮುಂದೆ ಸಮಾನರು ಅದಕ್ಕಾಗಿ ರಾಜಕಾರಣಿಗಳು ಕಾನೂನನ್ನು ಪಾಲಿಸಿ ಎಂದು ಚಂದ್ರಕಾಂತ ಹುಕ್ಕೇರಿ ಹೇಳಿದ್ದಾರೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.