ETV Bharat / state

ಬೆಳಗಾವಿ: ಬೀದಿನಾಯಿಗಳ ದಾಳಿಗೆ ಆರು ಕುರಿಗಳು ಸಾವು - ಬೆಳಗಾವಿ ಸುದ್ದಿ

ಬೆಳಗಾವಿ ಜಿಲ್ಲೆಯ ಮುತಗಾ ಗ್ರಾಮದ ಬಳಿ ಮೇಯಲು ಹೋಗುತ್ತಿದ್ದ ಕುರಿಗಳ ಮೇಲೆ ಬೀದಿನಾಯಿಗಳು ದಾಳಿ ನಡೆಸಿವೆ.

sheeps died in belgavi
ಆರು ಕುರಿಗಳು ಸಾವು
author img

By

Published : Sep 22, 2021, 5:52 PM IST

ಬೆಳಗಾವಿ: ಬೀದಿನಾಯಿಗಳ ಹಾವಳಿಗೆ ಆರು ಕುರಿಗಳು ಸಾವನ್ನಪ್ಪಿರುವ ಘಟನೆ ಇಲ್ಲಿನ ಶಿವಬಸವ ನಗರದಲ್ಲಿ ನಡೆದಿದೆ.

ಬೆಳಗಾವಿ ತಾಲೂಕಿನ ಮುತಗಾ ಗ್ರಾಮದ ನರಸು ರಾಯಪ್ಪ ಕುಂಪಿ ಎಂಬುವರಿಗೆ ಸೇರಿದ ಕುರಿಗಳಿವು. ಸುಮಾರು 400 ಕುರಿಗಳನ್ನು ಮೇಯಿಸಲು ಹೋಗುತ್ತಿದ್ದಾಗ 20ಕ್ಕೂ ಹೆಚ್ಚು ಬೀದಿ ನಾಯಿಗಳು ದಾಳಿ ಮಾಡಿವೆ. ಕುರಿಗಾಹಿಗಳು ಎಷ್ಟೇ ಪ್ರಯತ್ನಪಟ್ಟರೂ ಕುರಿಗಳನ್ನು ಬಚಾವ್ ಮಾಡಲು ಸಾಧ್ಯವಾಗಲಿಲ್ಲ. ಕುರಿಗಾಹಿಗಳ ಮೇಲೂ ನಾಯಿಗಳು ದಾಳಿಗೆ ಮುಂದಾಗಿವೆ. ಆಗ ಸ್ಥಳೀಯರ ಸಹಕಾರ ಪಡೆದು ನಾಯಿಗಳನ್ನು ಓಡಿಸಲಾಗಿದೆ.

ಆರು ಕುರಿಗಳು ಮೃತಪಟ್ಟಿರುವುದಕ್ಕೆ 40 ಸಾವಿರ ರೂಪಾಯಿಗೂ ಅಧಿಕ ನಷ್ಟ ಸಂಭವಿಸಿದೆ ಎನ್ನುತ್ತಾನೆ ರೈತ.

ಇದನ್ನೂ ಓದಿ:ಹಣ ಡಬಲ್ ಮಾಡುವುದಾಗಿ ಫೈನಾನ್ಸ್ ಕಂಪನಿಯಿಂದ ಮೋಸ ಆರೋಪ: ಗದಗ ಜನರಿಗೆ ಪಂಗನಾಮ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.