ಬೆಂಗಳೂರು/ಬೆಳಗಾವಿ: ಹಳ್ಳಿಗೆ ಸುಮ್ಮನೆ ಹೋಗಿ ಮಲಗಿ ಬರೋದಾ? ತಿಳಿದುಕೊಂಡು ಹೋಗಬೇಕಲ್ವಾ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಂದಾಯ ಸಚಿವ ಆರ್.ಅಶೋಕ್ ಗ್ರಾಮ ವಾಸ್ತವ್ಯವನ್ನು ಕಾಲೆಳೆದರು.
ಸಿದ್ದರಾಮಯ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ವೇಳೆ ಮಧ್ಯಪ್ರವೇಶ ಮಾಡಿದ ಸಚಿವ ಆರ್.ಅಶೋಕ್, ಪುಣ್ಯಕ್ಕೆ ಪಶುಸಂಗೋಪನೆ ಸಚಿವರು ಇಲ್ಲ. ಇದ್ದಿದ್ರೆ ಲೆಕ್ಕದಲ್ಲಿ ಸಿಕ್ಕಿಹಾಕಿಕೊಂಡಿದ್ದರೆ ಓಡಿ ಹೋಗಬೇಕಿತ್ತು ಎಂದರು. ಈ ವೇಳೆ, ನೀನೇ ಹೇಳಿ ಬಿಡಪ್ಪ. ಹಳ್ಳಿಯಲ್ಲಿ ಹೋಗಿ ಮಲಗ್ತಿಯಲ್ಲಾ, ಹಳ್ಳಿಯಲ್ಲಿ ಮಲಗಿದವರಿಗೆ ಇದೆಲ್ಲಾ ಗೊತ್ತಾಗಬೇಕಲ್ವಾ? ತಿಳಿದುಕೊಂಡು ಹೋಗಬೇಕಲ್ವಾ?. ಸುಮ್ಮನೆ ಮಲಗಿ ಬರೋದಾ? ಎಂದು ಪ್ರಶ್ನಿಸಿದರು.
ನಾನು ಸಣ್ಣ ವಯಸ್ಸಿನಲ್ಲಿ ಅದೆಲ್ಲಾ ಮಾಡಿ ಬಂದಿದ್ದೇನೆ. ಆದರೆ, ನಾನು ಹೇಳಿದ್ದು, ನಿಮ್ಮ ಲೆಕ್ಕ ನೋಡಿ ಅವರು ಓಡಿ ಹೋಗ್ತಿದ್ರು ಎಂದು ಆರ್.ಅಶೋಕ್ ಸ್ಪಷ್ಟಪಡಿಸಿದರು. ಇದಕ್ಕೆ ನಕ್ಕು, ಅವರು ಅದಕ್ಕೆ ಬಂದಿಲ್ಲ, ಉತ್ತರ ಕೊಟ್ಟಿಲ್ಲ, ಸಹವಾಸ ಬೇಡ ಎಂದು ಲಿಖಿತ ಉತ್ತರ ಕೊಟ್ಟಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಇದನ್ನೂ ಓದಿ: ಕೈದಿಗಳ ಸಂಬಳ ಮೂರು ಪಟ್ಟು ಜಾಸ್ತಿ..! ರಾಜ್ಯದ ಕೈದಿಗಳಿಗೆ ಈಗ ದೇಶದಲ್ಲೆ ಹೆಚ್ಚು ಸಂಬಳ..!!