ETV Bharat / state

ಬೆಳಗಾವಿ ಕೋರ್ಟ್​ಗೆ ಹಾಜರಾದ ಶಿವಸೇನಾ ಸಂಸದ ಸಂಜಯ ರಾವತ್ - ಬೆಳಗಾವಿಯ ಜಿಲ್ಲಾ ಸತ್ರ ನ್ಯಾಯಾಲಯ

''ಸಮಾಜಕ್ಕಾಗಿ ಹೋರಾಟ ನಡೆಸುವ ಮಹಾರಾಷ್ಟ್ರ ಏಕೀಕರಣ ಸಮಿತಿಯ ಸಂಘಟನೆಯ ಸಮಸ್ಯೆಗಳು ಯಾವಾಗಲೂ ನ್ಯಾಯಾಲಯದಲ್ಲಿ ಇರುತ್ತದೆ. ಇದರಿಂದ ಬೆಳಗಾವಿಯ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ನಡೆದ ವಿಚಾರಣೆಗೆ ಹಾಜರಾಗಿದ್ದೆ'' ಎಂದು ಶಿವಸೇನಾ ಸಂಸದ ಸಂಜಯ ರಾವತ್ ತಿಳಿಸಿದರು.

Shivasena MP Sanjay Rawat
ಶಿವಸೇನಾ ಸಂಸದ ಸಂಜಯ ರಾವತ್
author img

By

Published : May 3, 2023, 10:08 PM IST

ಬೆಳಗಾವಿ: ''ಮಹಾರಾಷ್ಟ್ರ ಏಕೀಕರಣ ಸಮಿತಿ ಸಮಸ್ಯೆಗಳು ಯಾವಗಲೂ ನ್ಯಾಯಾಲಯದಿಂದ ಪ್ರಾರಂಭವಾಗುತ್ತವೆ. ನಮ್ಮ ಪ್ರಕರಣ ಇದ್ದಿದ್ದರಿಂದ ನಾನು ಕೋರ್ಟ್​ಗೆ ಹಾಜರಾಗಿದ್ದೇನೆ'' ಎಂದು ಶಿವಸೇನಾ ಸಂಸದ ಸಂಜಯ ರಾವತ್ ಹೇಳಿದರು.

ಇಂದು ಬೆಳಗಾವಿಯ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಹಾಜರಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಸಮಾಜಕ್ಕಾಗಿ ಹೋರಾಟ ನಡೆಸುವ ಮಹಾರಾಷ್ಟ್ರ ಏಕೀಕರಣ ಸಮಿತಿಯ ಸಂಘಟನೆಯ ಸಮಸ್ಯೆಗಳು ಯಾವಾಗಲೂ ನ್ಯಾಯಾಲಯದಲ್ಲಿ ಇರುತ್ತದೆ. ಅದರ ವಿಚಾರವಾಗಿ ನಾನು ಜಾಮೀನಿಗಾಗಿ ಬಂದಿದ್ದೆ. ವಿಚಾರಣೆ ನಡೆದಿದೆ'' ಎಂದರು. ''ಅಲ್ಲದೆ, ಚುನಾವಣೆಯ ಹಿನ್ನೆಲೆಯಲ್ಲಿ ಖಾನಾಪುರ, ದಕ್ಷಿಣ, ಉತ್ತರ ಮತಕ್ಷೇತ್ರದಲ್ಲಿ ಎಂಇಎಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದೇನೆ. ಬಳಿಕ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದೇನೆ'' ಎಂದ ಅವರು ತಿಳಿಸಿದರು.

ಇದನ್ನೂ ಓದಿ: ಜೆಡಿಎಸ್​ ಅಧಿಕಾರಕ್ಕೆ ಬಂದ್ರೆ ಕ್ರಿಕೆಟ್ ಬೆಟ್ಟಿಂಗ್, ರಮ್ಮಿ ನಿಷೇಧ: ಕುಮಾರಸ್ವಾಮಿ ಘೋಷಣೆ

ಸಂಜಯ್ ರಾವತ್ ಪರ ವಕೀಲರು ಹೇಳಿದ್ದೇನು?: 2018ರಲ್ಲಿ ಬೆಳಗಾವಿಯಲ್ಲಿ ಅಧಿವೇಶನ ನಡೆಸಿದ ಸಂದರ್ಭದಲ್ಲಿ ಸಂಜಯ ರಾವತ್ ವಿರುದ್ಧ ಪ್ರಕರಣ ಇತ್ತು. ನಿಷೇಧ ಇದ್ದರೂ ಎಂಇಎಸ್ ಮಹಾಮೇಳಾವ್​ದಲ್ಲಿ ಭಾಗವಹಿಸಿರುವ ಬಗ್ಗೆ, ಕರ್ನಾಟಕದಲ್ಲಿ ಮಹಾರಾಷ್ಟ್ರದ ಬಸ್‌ಗೆ ಕಲ್ಲು ಎಸೆದರೆ, ಮಹಾರಾಷ್ಟ್ರದಲ್ಲಿ ಕರ್ನಾಟಕದ ನೂರು ಬಸ್‌ಗೆ ಬೆಂಕಿ ಹಚ್ಚುವ ಹೇಳಿಕೆ ನೀಡಿದ್ದರು. ಈ ವಿಷಯದ ಕುರಿತು ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ಆ ಹಿನ್ನೆಲೆಯಲ್ಲಿ ಬುಧವಾರ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರಿಗೆ ಷರತ್ತುಬದ್ಧ ಜಾಮೀನು ನೀಡಲಾಗಿತ್ತು. ಈಗ ಎಲ್ಲ ವಿಚಾರಣೆ ಮಾಡಿದ ನ್ಯಾಯಾಧೀಶ ಮುಸ್ತಫಾ ಸೈಯದ್ ಆ ಜಾಮೀನನ್ನು ಮಂಜೂರು ಮಾಡಿ ಪ್ರಕರಣ ಖುಲಾಸೆ ಮಾಡಿದ್ದಾರೆ ಎಂದು ಸಂಜಯ್ ರಾವತ್ ಪರ ವಕೀಲ ಶ್ಯಾಮಸುಂದರ್ ತಿಳಿಸಿದ್ದಾರೆ.

ಇದನ್ನೂ ಓದಿ: ಪದ್ಮಶ್ರೀ ಪುರಸ್ಕೃತ ಸುಕ್ರಿ ಬೊಮ್ಮ ಗೌಡ, ತುಳಸಿ ಗೌಡರಿಂದ ಆಶೀರ್ವಾದ ಪಡೆದ ಪ್ರಧಾನಿ ಮೋದಿ

ಇದನ್ನೂ ಓದಿ: ಅವಹೇಳನಕಾರಿ ಟೀಕೆ : ಶಾಸಕರಾದ ಯತ್ನಾಳ್, ​​ಪ್ರಿಯಾಂಕ್ ಖರ್ಗೆಗೆ ಷೋಕಾಸ್ ನೋಟಿಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.