ETV Bharat / state

ಕಳ್ಳರ ಕೈ ಚಳಕ: ದಡ್ಡಿ-ಸಮಲಾವಾಡಿಯಲ್ಲಿ ಸರಣಿ ಕಳ್ಳತನ - Chikkodi_sanjay

ಹುಕ್ಕೇರಿ ತಾಲೂಕಲ್ಲಿ ಖದೀಮರು ಸರಣಿ ಕಳ್ಳತನ ನಡೆಸಿದ್ದಾರೆ. ಅಂಚೆ ಕಚೇರಿ, ಹಾರ್ಡ್‌ವೇರ್‌ ಅಂಗಡಿಗಳು ಸೇರಿದಂತೆ ಹಲವೆಡೆ ಕನ್ನ ಹಾಕಿದ್ದಾರೆ.

ದಡ್ಡಿ-ಸಮಲಾವಾಡಿಯಲ್ಲಿ ಸರಣಿ ಕಳ್ಳತನ
author img

By

Published : May 5, 2019, 2:42 PM IST

ಚಿಕ್ಕೋಡಿ: ಹುಕ್ಕೇರಿ ತಾಲೂಕಿನ ದಡ್ಡಿ-ಸಮಲಾವಾಡಿ ಗ್ರಾಮಗಳ ಮನೆ, ಅಂಚೆ ಕಚೇರಿ, ಹಾರ್ಡ್‌ವೇರ್‌ ಅಂಗಡಿಗಳು ಸೇರಿದಂತೆ ಹಲವೆಡೆ ಕಡೆ ಸರಣಿ ಕಳ್ಳತನ ನಡೆದಿದೆ.

ದಡ್ಡಿ ಗ್ರಾಮದ ವಿಲಾಸ ರಾಮಪ್ಪ ಮಡಲಗಿ ಎಂಬುವರ ಅಂಗಡಿಯಲ್ಲಿ 8 ಸಾವಿರ ನಗದು, ರವೀಂದ್ರ ಮನೋಹರ ಮುಳಕಿ ಹಾರ್ಡ್‌ವೇರ್‌ ಅಂಗಡಿಯಲ್ಲಿ 8 ಸಾವಿರ, ನಿಲೇಶ ಬಾಂದುಗೆರ್‌ ಮೆಡಿಕಲ್ ಸ್ಟೋರ್​ನಲ್ಲಿ 7 ಸಾವಿರ ರೂಪಾಯಿ ನಗದು ಕಳ್ಳತನವಾಗಿದೆ.

serial-theft-in-daddy-samalawadi
ದಡ್ಡಿ-ಸಮಲಾವಾಡಿಯಲ್ಲಿ ಸರಣಿ ಕಳ್ಳತನ

ಸಮಲಾವಾಡಿ ಗ್ರಾಮದಲ್ಲಿ ಅಂಚೆ ಕಚೇರಿಯ ಸೇಫ್ ಲಾಕರ್‌ ತೆರೆಯಲು ಸಹ ಯತ್ನಿಸಲಾಗಿದೆ. ಗ್ರಾಮದ ಅರ್ಜುನ ಸಾವಂತ, ವಸಂತ ಸಾವಂತ, ಅರ್ಜುನ ಸುತಾರ ಅವರ ಮನೆಯ ಬೀಗ ಮುರಿಯಲಾಗಿದೆ, ಆದರೆ ಅವರ ಮನೆಗಳಲ್ಲಿ ಏನು ಸಿಕ್ಕಿಲ್ಲ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಸ್ಥಳಕ್ಕೆ ಹುಕ್ಕೇರಿ ಸಿಪಿಐ, ಯಮಕನಮರಡಿ ಪಿಎಸ್ಐ ಹಾಗೂ ಶ್ವಾನದಳ ತಂಡ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ದಡ್ಡಿ-ಸಮಲಾವಾಡಿಯಲ್ಲಿ ಸರಣಿ ಕಳ್ಳತನBody:ಚಿಕ್ಕೋಡಿ :

ಹುಕ್ಕೇರಿ ತಾಲ್ಲೂಕಿನ ದಡ್ಡಿ-ಸಮಲಾವಾಡಿ ಗ್ರಾಮಗಳ ಮನೆ, ಅಂಚೆ ಕಚೇರಿ, ಹಾರ್ಡ್‌ವೇರ್‌ ಅಂಗಡಿಗಳು ಸೇರಿದಂತೆ ಹಲವು ಕಡೆ ಸರಣಿ ಕಳ್ಳತನ ನಡೆದಿದೆ.

ದಡ್ಡಿ ಗ್ರಾಮದ ವಿಲಾಸ ರಾಮಪ್ಪ ಮಡಲಗಿ ಅವರ ಅಂಗಡಿಯಲ್ಲಿ 8 ಸಾವಿರ, ರವೀಂದ್ರ ಮನೋಹರ ಮುಳಕಿ ಹಾರ್ಡ್‌ವೇರ್‌ ಅಂಗಡಿಯಲ್ಲಿ 8 ಸಾವಿರ, ನಿಲೇಶ ಬಾಂದುಗೆರ್‌ ಮೆಡಿಕಲ್ ಸ್ಟೋರ್‌ ನಲ್ಲಿ 7 ಸಾವಿರ ನಗದು ಕಳ್ಳತನವಾಗಿದೆ. ಅಂಚೆ ಕಚೇರಿಯ ಸೇಫ್ ಲಾಕರ್‌ ತೆರೆಯಲು ಸಹ ಯತ್ನಿಸಲಾಗಿದೆ.

ಸಮಲಾವಾಡಿ ಗ್ರಾಮದಲ್ಲಿ ಕಳ್ಳರು ಅಂಚೆ ಕಚೇರಿಯ ಸೇಫ್‌ ಲಾಕರ್‌ ತೆರೆಯಲು ಪ್ರಯತ್ನಿಸಿದ್ದರು. ಗ್ರಾಮದ ಅರ್ಜುನ ಸಾವಂತ, ವಸಂತ ಸಾವಂತ, ಅರ್ಜುನ ಸುತಾರ ಅವರ ಮನೆಯ ಬೀಗ ಮುರಿಯಲಾಗಿದೆ, ಆದರೆ ಅವರ ಮನೆಗಳಲ್ಲಿ ಏನು ಸಿಕ್ಕಿಲ್ಲ ಎಂದು ಪೊಲೀಸ ಮೂಲಗಳಿಂದ ತಿಳಿದು ಬಂದಿದೆ.

ಸ್ಥಳಕ್ಕೆ ಹುಕ್ಕೇರಿ ಸಿಪಿಐ, ಯಮಕನಮರಡಿ ಪಿಎಸ್ಐ ಹಾಗೂ ಶ್ವಾನದಳ ತಂಡ ಭೇಟಿ ನೀಡಿ ಪರಿಶೀಲಿಸಿದಾರೆ.

ಈ ಕುರಿತು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Conclusion:
ಸಂಜಯ ಕೌಲಗಿ
ಚಿಕ್ಕೋಡಿ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.