ಚಿಕ್ಕೋಡಿ: ತಾಲೂಕಿನೆಲ್ಲೆಡೆ ಸ್ವಯಂ ಪ್ರೇರಿತವಾಗಿ ಲಾಕ್ಡೌನ್ ಅನುಸರಿಸಲಾಗುತ್ತಿದ್ದು, ವ್ಯಾಪಾರ-ವ್ಯವಹಾರ ಸೇರಿದಂತೆ ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ.
ಚಿಕ್ಕೋಡಿ ನಗರದಲ್ಲಿನ ಲಾಕ್ಡೌನ್ ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಜನರು ಸ್ವಯಂಪ್ರೇರಿತರಾಗಿ ಈ ಲಾಕ್ಡೌನ್ಗೆ ಬೆಂಬಲ ನೀಡುತ್ತಿದ್ದಾರೆ. ಇನ್ನು ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರ ಪುರಸಭೆ ಅವಕಾಶ ಕಲ್ಪಿಸಿದ್ದು, ಉಳಿದಂತೆ ವಾಹನ ಸಂಚಾರ, ಇನ್ನಿತರ ವ್ಯವಹಾರಗಳು ಸ್ಥಗಿತಗೊಂಡಿದೆ.
ಬೆಳಗಾವಿ ಜಿಲ್ಲೆಯ ಐದು ತಾಲೂಕುಗಳನ್ನು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಆದೇಶದಂತೆ ಲಾಕ್ ಡೌನ್ ಮಾಡಲಾಗಿದ್ದು, ಕೊರೊನಾ ತಡೆಯಲು ಮುಂಜಾಗ್ರತಾ ಕ್ರಮವಾಗಿ ಚಿಕ್ಕೋಡಿ ನಾಗರಿಕರು ಸ್ವಯಂ ಪ್ರೇರಿತವಾಗಿ ಲಾಕ್ಡೌನ್ ವಿಧಿಸಿಕೊಂಡಿದ್ಧಾರೆ.