ETV Bharat / state

ಬೆಳಗಾವಿ: ನೂಪುರ್ ಶರ್ಮಾ, ನವೀನ್ ಜಿಂದಾಲ್ ಬಂಧನಕ್ಕೆ ಎಸ್​ಡಿಪಿಐ ಆಗ್ರಹ - ಬೆಳಗಾವಿಯಲ್ಲಿ ನೂಪುರ ಶರ್ಮಾ ನವೀನ್ ಜಿಂದಾಲ್ ಬಂಧನಕ್ಕೆ ಒತ್ತಾಯ

ದೇಶದಲ್ಲಿ ನಿರಂತರವಾಗಿ ಅಲ್ಪಸಂಖ್ಯಾತ, ದಲಿತ, ಹಿಂದುಳಿದ ವರ್ಗಗಳ ವಿರೋಧಿ ಅಲೆ ಸೃಷ್ಟಿಸಲಾಗುತ್ತಿದೆ ಎಂದು ಎಸ್‌ಡಿಪಿಐ ಸಂಘಟನೆ ಆರೋಪಿಸಿದೆ.

ಬಿಜೆಪಿ ನಾಯಕಿ ನೂಪುರ ಶರ್ಮಾ- ನವೀನ್ ಜಿಂದಾಲ್ ಬಂಧನಕ್ಕೆ ಒತ್ತಾಯಿಸಿ ಎಸ್​ಡಿಪಿಐ ಸಂಘಟನೆ ಆಗ್ರಹ

author img

By

Published : Jun 10, 2022, 6:10 PM IST

ಬೆಳಗಾವಿ: ಪ್ರವಾದಿ ಮೊಹಮದ್​ ಪೈಗಂಬರ್ ಕುರಿತಂತೆ ವಿವಾದಾತ್ಮಕ ಹೇಳಿಕೆ ನೀಡಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾ ಹಾಗೂ ನವೀನ್ ಜಿಂದಾಲ್ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿ ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಎಸ್‌ಡಿಪಿಐ ಸಂಘಟನೆ ಪ್ರತಿಭಟನೆ ನಡೆಸಿತು.

ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ ಕಾರ್ಯಕರ್ತರು ಕೂಡಲೇ ನೂಪುರ್ ಶರ್ಮಾ ಹಾಗೂ ನವೀನ್ ಜಿಂದಾಲ್ ಅವರನ್ನು ಬಂಧಿಸಬೇಕು. ಅಲ್ಲದೇ ದೇಶದ ಘನತೆಯನ್ನು ಕಳೆದ ಬಿಜೆಪಿ ಸರ್ಕಾರ ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಆಗ್ರಹಿಸಿದರು.

ದೇಶದಲ್ಲಿ ನಿರಂತರವಾಗಿ ಅಲ್ಪಸಂಖ್ಯಾತ, ದಲಿತ, ಹಿಂದುಳಿದ ವರ್ಗಗಳ ವಿರೋಧಿ ಅಲೆ ಸೃಷ್ಟಿಸಲಾಗುತ್ತಿದೆ. ಸಂಘ ಪರಿವಾರ ದೇಶದಲ್ಲಿ ನಡೆಸುತ್ತಿರುವ ಮುಸ್ಲಿಂ ವಿರೋಧಿ ಹಿಂಸಾತ್ಮಕ ಕೃತ್ಯಗಳಿಗೆ ಅಧಿಕಾರದಲ್ಲಿರುವ ಬಿಜೆಪಿ ಮೌನ ಸಮ್ಮತಿ ನೀಡುತ್ತಿದೆ. ಜೊತೆಗೆ, ಎಲ್ಲಾ ಆಡಳಿತಾತ್ಮಕ ನೆರವನ್ನೂ ನೀಡುತ್ತಿದೆ ಎಂದು ಆರೋಪಿಸಿದರು.

ಇದನ್ನೂ ಓದಿ: ರೋಹಿತ್ ಚಕ್ರತೀರ್ಥ ಬಂಧಿಸಿ, ಸಚಿವ ನಾಗೇಶ್​ ವಜಾಗೊಳಿಸಿ: ಸಿದ್ದರಾಮಯ್ಯ ಆಗ್ರಹ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.