ಚಿಕ್ಕೋಡಿ : ವಿವಿಧ ರಾಜ್ಯಗಳಿಂದ ಕರ್ನಾಟಕಕ್ಕೆ ವಾಪಸ್ ಆಗುತ್ತಿರುವ ಹಾಗೂ ಕರ್ನಾಟಕದಿಂದ ಬೇರೆ ರಾಜ್ಯಕ್ಕೆ ಹೋಗುತ್ತಿರುವ ವಲಸೆ ಕಾರ್ಮಿಕರಿಗೆ ಜಿಲ್ಲಾಡಳಿತ ನಿಪ್ಪಾಣಿ ಕೊಗನೋಳಿ ಟೋಲ್ ಬಳಿ ಆರೋಗ್ಯ ತಪಾಸಣೆ ಹಾಗೂ ಆಹಾರದ ವ್ಯವಸ್ಥೆ ಕಲ್ಪಿಸಿದೆ.
ನಿಪ್ಪಾಣಿ ಕೊಗನೊಳಿ ಟೋಲ್ನಲ್ಲಿ ಪ್ರತಿಯೊಬ್ಬ ಕಾರ್ಮಿಕರಿಗೂ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಜೊತೆಗೆ ಕಾರ್ಮಿಕರು ಅಂತರ ರಾಜ್ಯ ಪಾಸ್ ಹಾಗೂ ಸೇವಾ ಸಿಂಧು ಆ್ಯಪ್‌ನಲ್ಲಿ ಅಪ್ಲೈ ಮಾಡಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಕೆಲ ಕಾರ್ಮಿಕರು ಪಾಸ್ ಇಲ್ಲದೆ ಬೇರೆ ರಾಜ್ಯಗಳಿಗೆ ಪ್ರವಾಸ ಪ್ರಾರಂಭಿಸಿದ್ದು, ಇಂತಹ ಕಾರ್ಮಿಕರನ್ನು ತಡೆ ಹಿಡಿದು ಆರೋಗ್ಯ ತಪಾಸಣೆ ಮಾಡುವುದರ ಜೊತೆಗೆ ಅವರಿಗೆ ಸೂಕ್ತ ಊಟದ ವ್ಯವಸ್ಥೆ ಸಹ ಕಲ್ಪಿಸಲಾಗಿದೆ ಎಂದು ನಿಪ್ಪಾಣಿ ಪೌರಾಯುಕ್ತ ಮಹಾವೀರ ಬೋರನ್ನವರ ತಿಳಿಸಿದ್ದಾರೆ.
ಕೆಲ ಸಂಘಟನೆಯವರು ಹೊರ ರಾಜ್ಯಗಳಿಗೆ ತೆರಳುತ್ತಿರುವ ಕಾರ್ಮಿಕರಿಗೆ ನೆರಳಿನ ವ್ಯವಸ್ಥೆ ಹಾಗೂ ಊಟದ ವ್ಯವಸ್ಥೆ ಮಾಡಿದ್ದಾರೆ.