ETV Bharat / state

ಶಾಲಾ ವಾಹನ ಪಲ್ಟಿ: ಓರ್ವ ಗಂಭೀರ, 12 ವಿದ್ಯಾರ್ಥಿಗಳಿಗೆ ಗಾಯ - ಈ ಟಿವಿ ಭಾರತ ಕನ್ನಡ

ಚಾಲಕನ ನಿಯಂತ್ರಣ ತಪ್ಪಿ ಶಾಲಾ ವಾಹನವೊಂದು ಪಲ್ಟಿಯಾಗಿರುವ ಘಟನೆ ಸವದತ್ತಿ ತಾಲೂಕಿನ ಪೊಲೀಸ್​ ಠಾಣಾ ವ್ಯಾಪ್ತಿಯ ಕರಿಕಟ್ಟಿ ರಸ್ತೆ ಯಲ್ಲಿ ನಡೆದಿದೆ.

School bus accident
ಶಾಲಾ ವಾಹನ ಪಲ್ಟಿ
author img

By

Published : Nov 12, 2022, 2:50 PM IST

ಬೆಳಗಾವಿ: ಚಾಲಕನ ನಿಯಂತ್ರಣ ತಪ್ಪಿ ಶಾಲಾ ವಾಹನವೊಂದು ಪಲ್ಟಿಯಾಗಿರುವ ಘಟನೆ ಸವದತ್ತಿ ತಾಲೂಕಿನ ಪೊಲೀಸ್​ ಠಾಣಾ ವ್ಯಾಪ್ತಿಯ ಕರಿಕಟ್ಟಿ ರಸ್ತೆಯಲ್ಲಿ ನಡೆದಿದೆ.

ಬಸ್​ನಲ್ಲಿದ್ದ ಓರ್ವ ವಿದ್ಯಾರ್ಥಿಗೆ ಗಂಭೀರ ಗಾಯಗಳಾಗಿದ್ದು, 12 ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕುಮಾರೇಶ್ವರ ಶಾಲೆಯ 38 ಮಕ್ಕಳು ಶಾಲಾ ಬಸ್​ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ, ಚಾಲಕನ ನಿಯಂತ್ರಣ ತಪ್ಪಿ ಬಸ್ ರಸ್ತೆ ಬದಿಗೆ ಪಲ್ಟಿಯಾಗಿದೆ. ಗಾಯಗೊಂಡ ಮಕ್ಕಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನೂ ಓದಿ:ಗ್ಯಾಂಗ್​ಮನ್​ ಸಮಯಪ್ರಜ್ಞೆಯಿಂದ ತಪ್ಪಿತು ಭಾರಿ ರೈಲು ದುರಂತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.