ಬೆಳಗಾವಿ: ಸಿಎಂ ಹುದ್ದೆಯ ಬಗ್ಗೆ ಈಗ ಮಾತನಾಡುವುದಿಲ್ಲ. ಮೊದಲು 113 ಜನ ಶಾಸಕರ ಆಯ್ಕೆ ಆಗಬೇಕು. ಭಿನ್ನಾಭಿಪ್ರಾಯದ ಬಗ್ಗೆ ವರಿಷ್ಠರು ಗಮನ ಹರಿಸುತ್ತಾರೆ. ಈ ಹಂತದಲ್ಲಿ ಚರ್ಚೆ ಮಾಡೊದು ಅನಾವಶ್ಯಕ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಉದ್ಯೋಗ ಖಾತ್ರಿ ಯೋಜನೆ ಕುರಿತಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು ಚುನಾವಣೆ ಮುಗಿದ ಮೇಲೆ ಎಲ್ಲದಕ್ಕೂ ಪರಿಹಾರವಿದೆ. 2023ರ ಮೇ ಕೊನೆಯ ವಾರದಲ್ಲಿ ಈ ಬಗ್ಗೆ ಹೇಳಬಲ್ಲೆ ಎಂದರು.
ಇನ್ನು ನರೇಗಾ ಯೋಜನೆಯಲ್ಲಿ ಸಾಕಷ್ಟು ಸಮಸ್ಯೆಗಳನ್ನು ಇದ್ದವು. ಹೀಗಾಗಿ ತಾಲೂಕು ಪಂಚಾಯತ್ ಅಧ್ಯಕ್ಷರು, ಸದಸ್ಯರಿಗೆ ಹೊಂದಾಣಿಕೆ ಆಗುತ್ತಿರಲಿಲ್ಲ. ಎಲ್ಲರೂ ಹೊಂದಾಣಿಕೆ ಇಟ್ಟುಕೊಂಡು ಕೆಲಸ ಮಾಡಬೇಕು. ಇದಲ್ಲದೇ ಕ್ರಿಯಾ ಯೋಜನೆಯಲ್ಲಿ ಸಿದ್ಧಪಡಿಸಲಾಗುವ ಕೆಲಸಗಳು ಜನರಿಗೆ ಸದುಪಯೋಗ ಆಗಬೇಕು. ಆ ನಿಟ್ಟಿನಲ್ಲಿ ಎಲ್ಲರಿಗೂ ಸಲಹೆ, ಸೂಚನೆಗಳನ್ನು ಕೊಟ್ಟಿದ್ದೇನೆ ಎಂದು ತಿಳಿಸಿದರು.