ETV Bharat / state

ಸಂಗೊಳ್ಳಿ ರಾಯಣ್ಣ ಸೊಸೈಟಿ ಗ್ರಾಹಕರು-ಛಲವಾದಿ ಮಹಾಸಭಾ ಪ್ರತಿಭಟನೆ : ಸಮಸ್ಯೆ ಆಲಿಸಿದ ಸಚಿವರು

author img

By ETV Bharat Karnataka Team

Published : Dec 12, 2023, 7:46 AM IST

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೆಳಗಾವಿಯ ಸುವರ್ಣ ಗಾರ್ಡನ್ ಬಳಿ ಸಂಗೊಳ್ಳಿ ರಾಯಣ್ಣ ಸೊಸೈಟಿ ಗ್ರಾಹಕರು ಮತ್ತು ಛಲವಾದಿ ಮಹಾಸಭಾ ಸದಸ್ಯರು ಪ್ರತಿಭಟನೆ ನಡೆಸಿದರು.

ಸಂಗೊಳ್ಳಿ ರಾಯಣ್ಣ ಸೊಸೈಟಿ ಗ್ರಾಹಕರ ಪ್ರತಿಭಟನೆ

ಬೆಳಗಾವಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕೋ ಆಫ್​ ಕ್ರೆಡಿಟ್ ಸೊಸೈಟಿಯಲ್ಲಿ ಉಳಿತಾಯದ ಹಣವನ್ನು ಠೇವಣಿ ಮಾಡಿದ್ದ ಠೇವಣಿದಾರರು ಬೆಳಗಾವಿಯ ಸುವರ್ಣ ಗಾರ್ಡನ್ ಬಳಿಯ ಟೆಂಟ್​ನಲ್ಲಿ ಪ್ರತಿಭಟನೆ ನಡೆಸಿ, ಸಚಿವರಾದ ಎಚ್ ಸಿ ಮಹದೇವಪ್ಪ, ಕೆ ಎಚ್ ಮುನಿಯಪ್ಪ ಅವರಿಗೆ ಮನವಿ ಸಲ್ಲಿಸಿದರು.

ನಮ್ಮ ಹೋರಾಟದ ಫಲವಾಗಿ ಬೆಂಗಳೂರಿನಲ್ಲಿರುವ ವಿಶೇಷಾಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರಿಗಳು ಕಾನೂನಿನ ಪ್ರಕಾರ ಕ್ರಮ ಕೈಗೊಂಡು ಠೇವಣಿದಾರರ ಹಣ ಹಿಂದಿರುಗಿಸುವುದಕ್ಕಾಗಿ ಪ್ರಕಟಣೆ ಹೊರಡಿಸಿದ್ದಾರೆ. ಪರಿಹಾರ ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳೊಂದಿಗೆ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಖುದ್ದಾಗಿ ಸಲ್ಲಿಸುವಂತೆ ಹೇಳಿದ್ದಾರೆ. ಆದರೆ, ಠೇವಣಿದಾರರಲ್ಲಿ ಕೆಲವರು ವೃದ್ಧರು, ಮಹಿಳೆಯರು, ವಿಕಲಚೇತನರು ಇದ್ದಾರೆ. ಅವರಿಗೆ ಬೆಂಗಳೂರಿಗೆ ಹೋಗಿ ಬರಲು ತೊಂದರೆಯಾಗುತ್ತಿದ್ದು, ಕೂಡಲೇ ಬೆಳಗಾವಿಯಲ್ಲಿ ಅರ್ಜಿಗಳನ್ನು ಸ್ವೀಕರಿಸುವ ವ್ಯವಸ್ಥೆ ಮಾಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಗ್ರಾಹಕ ರಾಜೇಂದ್ರ ಎಂಬುವರು, ಸುಮಾರು 30 ಸಾವಿರಕ್ಕೂ ಹೆಚ್ಚು ಠೇವಣಿದಾರರು ಬೆಂಗಳೂರಿಗೆ ಅಲೆಯುವುದನ್ನು ತಪ್ಪಿಸಬೇಕು. ಠೇವಣಿ ಹಣ 5 ಸಾವಿರ ಹಾಗೂ 10 ಸಾವಿರ ರೂ. ಗಳಷ್ಟು ಇದ್ದು, ಈ ಮೊತ್ತಕ್ಕಾಗಿ ಬೆಂಗಳೂರವರೆಗೆ ಪ್ರಯಾಣ ಮಾಡುವುದು ಆರ್ಥಿಕ ಹೊರೆಯಾಗುತ್ತದೆ. ಇನ್ನೂ ಕೆಲವರು ನಿವೃತ್ತ ನೌಕರರು ಹಿರಿಯ ನಾಗರಿಕರಿದ್ದು ದೂರದ ಪ್ರಯಾಣ ಮಾಡಲು ಅಸಮರ್ಥರಾಗಿದ್ದಾರೆ. ಆದ್ದರಿಂದ ಸರ್ಕಾರಕ್ಕೆ ತಮ್ಮ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದರು.

ನಿರುದ್ಯೋಗ ಸಮಸ್ಯೆ: ಸರ್ಕಾರಿ ಕಚೇರಿಗಳಲ್ಲಿ ಖಾಲಿ ಉಳಿದಿರುವ ಎಲ್ಲ ಶ್ರೇಣಿಯ ಬ್ಯಾಕ್​ಲಾಗ್ ಹುದ್ದೆಗಳ ಭರ್ತಿಗಾಗಿ ಕ್ರಮಕೈಗೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸೋಮವಾರ ಛಲವಾದಿ ಮಹಾಸಭಾ ವತಿಯಿಂದ ಪ್ರತಿಭಟನೆ ನಡೆಸಿ ಸಚಿವ ಡಾ ಎಚ್ ಸಿ ಮಹದೇವಪ್ಪ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ದುರ್ಗೇಶ ಮೇತ್ರಿ, ಬೆಳಗಾವಿ ನಗರದಿಂದ ಹಿರೇಬಾಗೇವಾಡಿ ಗ್ರಾಮದವರೆಗೆ ಸುವರ್ಣ ವಿಧಾನಸೌಧದ ಎದುರಿನ ರಾಷ್ಟ್ರೀಯ ಹೆದ್ದಾರಿಗೆ ವೀರ ವನಿತೆ ಒನಕೆ ಓಬವ್ವನ ಹೆಸರನ್ನು ನಾಮಕರಣ ಮಾಡಬೇಕು.

ರಾಜ್ಯದಲ್ಲಿ ದಲಿತರಲ್ಲಿ ಹೆಚ್ಚಿನವರು ಛಲವಾದಿ ಸಮಾಜಕ್ಕೆ ಸೇರಿದವರಾಗಿದ್ದಾರೆ. ಅತಿ ಬಡವರು, ಭೂ ರಹಿತರು ಮತ್ತು ವಿದ್ಯೆಯನ್ನು ಕಲಿತರೂ ನಿರುದ್ಯೋಗಿಗಳಾಗಿದ್ದಾರೆ. ಡಾ. ಅಂಬೇಡ್ಕರ ಪರಿಶಿಷ್ಟ ಜಾತಿ ಅಭಿವೃದ್ಧಿ ನಿಗಮದಲ್ಲಿ 102 ಪರಿಶಿಷ್ಟ ಜಾತಿಗಳಿವೆ. ಹಾಗಾಗಿ, ನಿಗಮಕ್ಕೆ ಹೆಚ್ಚಿನ ಅನುದಾನವನ್ನು ಮಂಜೂರು ಮಾಡಿ, ಯುವಕರ ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: ಶತಶತಮಾನಗಳ ಹೋರಾಟದ ಫಲವಾಗಿ ಕಾನೂನು ಬದ್ದವಾಗಿ ರಾಮಮಂದಿರ ನಿರ್ಮಾಣ: ಪೇಜಾವರ ಶ್ರೀ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.