ಬೆಳಗಾವಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಮೂವರು ಪ್ರಭಾವಿಗಳು ಅಲಂಕರಿಸಿರುವ ಡಿಸಿಎಂ ಹುದ್ದೆಗಳು ಅಸಂವಿಧಾನಿಕ ಎಂಬುದು ಮಾಹಿತಿ ಕಾಯ್ದೆಯಡಿ ಬೆಳಕಿಗೆ ಬಂದಿದೆ.
ಡಿಸಿಎಂ ಹುದ್ದೆಗಳನ್ನು ತಕ್ಷಣವೇ ರದ್ದುಪಡಿಸುವಂತೆ ರಾಜ್ಯಪಾಲ ಹಾಗೂ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಆರ್ಟಿಐ ಕಾರ್ಯಕರ್ತ ಭೀಮಪ್ಪ ಗಡಾದ್ ಪತ್ರ ಬರೆದಿದ್ದಾರೆ. ಡಿಸಿಎಂ ಹುದ್ದೆಗಳನ್ನು ರದ್ದುಗೊಳಿಸದಿದ್ದರೆ ಕಾನೂನು ಹೋರಾಟ ಅನಿವಾರ್ಯ ಎಂದು ಅವರು ಎಚ್ಛರಿಕೆ ನೀಡಿದ್ದಾರೆ.
ಕಾನೂನು ಹೋರಾಟ ಆರಂಭವಾದರೆ ಗೋವಿಂದ ಕಾರಜೋಳ, ಲಕ್ಷ್ಮಣ್ ಸವದಿ, ಅಶ್ವತ್ಥ ನಾರಾಯಣ್ ಅವರಿಗೆ ಡಿಸಿಎಂ ಹುದ್ದೆ ಕಳೆದುಕೊಳ್ಳುವ ಭೀತಿ ಎದುರಾಗಲಿದೆ. ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸಲು ಸಂವಿಧಾನದಲ್ಲಿ ಅವಕಾಶವಿಲ್ಲ. ಅಲ್ಲದೇ ಡಿಸಿಎಂ ಹುದ್ದೆಗಳ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಬಳಿ ಹಾಗೂ ಸಂಸದೀಯ ವ್ಯವಹಾರ, ಶಾಸನ ರಚನಾ ಶಾಖೆ ಮತ್ತು ಕಾನೂನು ಇಲಾಖೆ ಬಳಿ ಮಾಹಿತಿ ಇಲ್ಲ. ಮಾಹಿತಿ ಹಕ್ಕು ಕಾಯ್ದೆಯಡಿ ಈ ಸಂಗತಿ ಬೆಳಕಿಗೆ ಬಂದಿದೆ.
ಓದಿ: ಪತ್ರಕರ್ತ ಸರಜೂ ಕಾಟ್ಕರ್ಗೆ ಬಸವರಾಜ ಕಟ್ಟಿಮನಿ ಪತ್ರಿಕೋದ್ಯಮ ಪ್ರಶಸ್ತಿ
ಹೀಗಾಗಿ ತಕ್ಷಣವೇ ರಾಜ್ಯದಲ್ಲಿರುವ ಮೂರು ಡಿಸಿಎಂ ಹುದ್ದೆಗಳನ್ನು ರದ್ದುಪಡಿಸಬೇಕು. ಸಾರ್ವಜನಿಕ ತೆರಿಗೆ ಹಣ ಪೋಲಾಗುವುದನ್ನು ತಡೆಯಬೇಕು. ಇಲ್ಲವಾದಲ್ಲಿ ಡಿಸಿಎಂ ಹುದ್ದೆಗಳ ರದ್ಧತಿಗೆ ಕಾನೂನು ಹೋರಾಟ ಅನಿವಾರ್ಯ ಎಂದು ಭೀಮಪ್ಪ ಗಡಾದ್ ಎಚ್ಛರಿಕೆ ನೀಡಿದ್ದಾರೆ.