ETV Bharat / state

ಬೆಳಗಾವಿ ಅಧಿವೇಶನದಲ್ಲಿಂದು ಪ್ರತಿಧ್ವನಿಸಲಿದೆ ಮೀಸಲಾತಿ ವಿಚಾರ? - ತಿಪಕ್ಷ ನಾಯಕ ಸಿದ್ದರಾಮಯ್ಯ ಮೀಸಲಾತಿ ಹೆಚ್ಚಳ ಕುರಿತು

ಮೀಸಲಾತಿ ವಿಷಯವಾಗಿ ಶೂನ್ಯ ವೇಳೆ ಪ್ರಸ್ತಾಪಿಸಲು ಅನುಮತಿ ಕೋರಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಅಧಿವೇಶನದಲ್ಲಿಂದು ಪ್ರತಿಧ್ವನಿಸಲಿದೆ ಮಿಸಲಾತಿ ವಿಚಾರ?
reservation-issue-will-resonate-in-the-belagavi-winter-session
author img

By

Published : Dec 20, 2022, 10:30 AM IST

Updated : Dec 20, 2022, 12:33 PM IST

ಬೆಳಗಾವಿ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮೀಸಲಾತಿ ಹೆಚ್ಚಳ ಕುರಿತು ಸದನದಲ್ಲಿ ಪ್ರಸ್ತಾಪಿಸಲು ಸಿದ್ಧತೆ ಆರಂಭಿಸಿದ್ದು ಸ್ಪೀಕರ್​​ಗೆ ಈ ಸಂಬಂಧ ಮನವಿ ಸಲ್ಲಿಕೆ ಮಾಡಿದ್ದಾರೆ.

ಮೀಸಲಾತಿ ವಿಷಯವಾಗಿ ಶೂನ್ಯ ವೇಳೆ ಪ್ರಸ್ತಾಪಿಸಲು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಅನುಮತಿ ಕೋರಿರುವ ಸಿದ್ದರಾಮಯ್ಯ ಚರ್ಚೆಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಇತ್ತೀಚಿಗೆ ಎಸ್​​ಸಿ, ಎಸ್​​ಟಿ ಸಮುದಾಯಗಳಿಗೆ ಮೀಸಲಾತಿ ಹೆಚ್ಚಳ ಮಾಡಿದ್ದ ರಾಜ್ಯ ಸರ್ಕಾರ ಈ ವಿಚಾರವಾಗಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ಪ್ರಸ್ತಾವನೆ ಸಲ್ಲಿಸುವಂತೆ ಅವರು ಆಗ್ರಹಿಸಲಿದ್ದಾರೆ.

ಈಗಾಗಲೇ ರಾಜ್ಯದ ಮೀಸಲಾತಿ ಶೇ.50ರಷ್ಟು ಹೆಚ್ಚಳ ಮೀರಬಾರದು ಎಂದು ಸುಪ್ರೀಂ ಕೊರ್ಟ್ ಹೇಳಿದೆ. ಆದರೆ ರಾಜ್ಯ ಸರ್ಕಾರ ಹೆಚ್ಚಳ ಮಾಡಿದ್ದು, ಹೇಗೆ ಅನುಷ್ಠಾನ ಮಾಡುತ್ತೀರಾ ಎಂದು ಪ್ರಶ್ನಿಸಿ ಈ ಬಗ್ಗೆ ವರದಿ ಕೇಳಲು ತೀರ್ಮಾನಿಸಿದ್ದಾರೆ. ರಾಜ್ಯ ಸರ್ಕಾರ ಕೈಗೊಂಡ ನಿರ್ಧಾರದ ಕೆಲ ವಿಚಾರಗಳ ಮೇಲೆ ಹಂತ ಹಂತವಾಗಿ ಅಧಿವೇಶನದಲ್ಲಿ ವಿಚಾರ ಮಂಡಿಸಿ, ವಿವಿಧ ಹಂತದಲ್ಲಿ ಹೋರಾಟ ನಡೆಸಲು ಕಾಂಗ್ರೆಸ್​​ ಸಿದ್ಧತೆ ಆರಂಭಿಸಿದ್ದು, ಅಧಿವೇಶನದ ಆರಂಭಿಕ ಎರಡನೇ ದಿನವೇ ಸರ್ಕಾರದ ವಿರುದ್ಧ ಮುಗಿಬೀಳಲು ಸಜ್ಜಾಗಿದೆ.

ಇದನ್ನೂ ಓದಿ: ಸುವರ್ಣಸೌಧದತ್ತ ಪಂಚಮಸಾಲಿ ಸಮಾಜದ ಪಾದಯಾತ್ರೆ: ಅಧಿವೇಶನದ ಎರಡನೇ ದಿನ ಸಾಲು ಸಾಲು ಪ್ರತಿಭಟನೆ

Last Updated : Dec 20, 2022, 12:33 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.