ಚಿಕ್ಕೋಡಿ: ಇಲ್ಲಿನ ಯಡೂರ ವೀರಭದ್ರೇಶ್ವರ ದೇವಸ್ಥಾನ ಸೇರಿದಂತೆ ಉಪ ವಿಭಾಗದ ಬಹುತೇಕ ದೇವಸ್ಥಾನಗಳು ಬೆಳಗ್ಗೆಯಿಂದ ಓಪನ್ ಆಗಿವೆ.
ಲಾಕ್ಡೌನ್ ಹಿನ್ನೆಲೆ ಕಳೆದ 80 ದಿನಗಳಿಂದ ದೇವಸ್ಥಾನಗಳು ಬಂದ್ ಆಗಿದ್ದು, ಈಗ ಹಲವಾರು ಮಾರ್ಗಸೂಚಿಗಳ ಮೂಲಕ ದೇವಸ್ಥಾನಗಳು ಮತ್ತೆ ಓಪನ್ ಆಗಿವೆ. ದೇವಸ್ಥಾನಗಳಲ್ಲಿ ಸ್ಯಾನಿಟೈಸರ್ ಜೊತೆಗೆ ಸಾಮಾಜಿಕ ಅಂತರ ಕಾಪಾಡುವ ಸಲುವಾಗಿ ಮಾರ್ಕ್ ಹಾಕಿ ಭಕ್ತರಿಗೆ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ.
ಯಡೂರಿನ ಸುಪ್ರಸಿದ್ಧ ವೀರಭದ್ರ ದೇವಸ್ಥಾನ ದೇವರ ದರ್ಶನಕ್ಕೆ ಮುಕ್ತವಾಗಿದ್ದು, ಭಕ್ತರು ಯಾವುದೇ ವಸ್ತುಗಳನ್ನು ದೇವಸ್ಥಾನಕ್ಕೆ ತರವುದಕ್ಕೆ ನಿಷೇಧ ಹೇರಲಾಗಿದೆ. ಹಾಗಾಗಿ ಬರಿಗೈಯಲ್ಲಿ ಬಂದು ಸಾಮಾಜಿಕ ಅಂತರ ಕಾಯ್ದುಕೊಂಡು ದೇವರ ದರ್ಶನ ಪಡೆದು ಭಕ್ತರು ಪುನೀತರಾದರು.