ETV Bharat / state

ಕೋವಿಡ್ ನಿರ್ವಹಣೆಯ ಹಣ ದುರ್ಬಳಕೆ ಆರೋಪ: ರಾಯಬಾಗ ತಹಶೀಲ್ದಾರ್ ಅಮಾನತು

ಕೋವಿಡ್​ ನಿರ್ವಹಣೆಯ ಹಣವನ್ನು ದುರ್ಬಳಕೆ ಮಾಡಿಕೊಂಡ ಆರೋಪದಲ್ಲಿ ರಾಯಬಾಗ ತಹಶೀಲ್ದಾರ್​ನ್ನು ಅಮಾನತು ಮಾಡಲಾಗಿದೆ.

Rayabaga Tahsildar suspension
ಕೋವಿಡ್ ಹಣ ದುರ್ಬಳಕೆ ಮಾಡಿದ ರಾಯಬಾಗ ತಹಶೀಲ್ದಾರ್ ಅಮಾನತು
author img

By

Published : Nov 12, 2020, 10:26 PM IST

ಚಿಕ್ಕೋಡಿ: ಕೋವಿಡ್​ ನಿರ್ವಹಣೆಗೆ ನೀಡಿದ್ದ ಹಣವನ್ನು ದುರ್ಬಳಕೆ ಮಾಡಿದ ಆರೋಪದಡಿ ಬೆಳಗಾವಿ ಜಿಲ್ಲೆ ರಾಯಬಾಗ ತಹಶೀಲ್ದಾರ್​ ಚಂದ್ರಕಾಂತ ಭಜಂತ್ರಿಯನ್ನು ಅಮಾನತಗೊಳಿಸಲಾಗಿದೆ.

ಕೋವಿಡ್ -19 ನಿರ್ವಹಣೆ ಸಂದರ್ಭದಲ್ಲಿ ಲಕ್ಷಾಂತರ ಹಣ ವೆಚ್ಚ ಹಾಗೂ ಟಾಸ್ಕ್​ ಪೋರ್ಸ್ ಸಮಿತಿಯ ಅನುಮೋದನೆ ಪಡೆಯದೆ ಹಣವನ್ನು ದುರ್ಬಳಕೆ ಮಾಡಿದ ಅಧಿಕಾರಿ ವಿರುದ್ದ ಯಾವ ಕ್ರಮಕೈಗೊಳ್ಳಲಾಗಿದೆ ಎಂದು ಅಧಿವೇಶನದ ವೇಳೆ ವಿಧಾನಸಭೆಯಲ್ಲಿ ಚರ್ಚಿಸಲಾಗಿತ್ತು. ಈ ಕುರಿತು ಬೆಳಗಾವಿ ಜಿಲ್ಲೆ ಕುಡಚಿ ಬಿಜೆಪಿ ಶಾಸಕ ಪಿ.ರಾಜೀವ ನಿಲುವಳಿ ಸೂಚನೆ ಮಂಡಿಸಿದ್ದರು.

ಹೀಗಾಗಿ, ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಅವರು ಚಿಕ್ಕೋಡಿ ಎಸಿ ನೇತೃತ್ವದಲ್ಲಿ ಪ್ರಕರಣದ ತನಿಖೆಗೆ ಆದೇಶಿಸಿದ್ದರು. ತನಿಖಾ ವರದಿಯಲ್ಲಿ ಕರ್ತವ್ಯಲೋಪ ಸಾಭೀತಾದ ಹಿನ್ನಲೆ, ತಹಶೀಲ್ದಾರ್​ ಚಂದ್ರಕಾಂತ ಭಜಂತ್ರಿಯನ್ನು ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.