ಬೆಳಗಾವಿ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಗ್ಗೆ ನಾನು ಮಾತನಾಡಲ್ಲ. ಆದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ಸೂಕ್ತ ಸಮಯದಲ್ಲಿ ಉತ್ತರಿಸುತ್ತೇನೆ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ಕೆಲ ಮೆಂಟಲ್‌ಗಳು ಏನೇನೋ ಮಾತನಾಡ್ತಾರೆ ಎಂಬ ಡಿಕೆಶಿ ಹೇಳಿಕೆಗೆ ಗೋಕಾಕ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಸಚಿವ ಜಾರಕಿಹೊಳಿ, ಪದೇ ಪದೇ ನಾನು ಹೇಳಿಕೆ ಕೊಡಲ್ಲ, ನಮ್ಮದು ರಾಷ್ಟ್ರೀಯ ಪಕ್ಷ. ನಮ್ಮ ಹೈಕಮಾಂಡ್ ಜತೆ ಮಾತನಾಡಿ ನಿಮಗೆ ಹೇಳುತ್ತೇನೆ. ಡಿಕೆಶಿ ಬಾಡಿ ಲ್ಯಾಂಗ್ವೇಜ್ ನೋಡಿದರೆ ಅವರು ಹತಾಶೆಗೊಂಡಿರುವುದು ಅರ್ಥವಾಗುತ್ತದೆ. ಅವರಿಗೆ ನಾನು ಸೂಕ್ತ ವೇದಿಕೆಯಲ್ಲೇ ಉತ್ತರ ನೀಡುತ್ತೇನೆ. ಆದರೆ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ. ಸಿದ್ದರಾಮಯ್ಯನವರು ಬೇರೆ ಪಕ್ಷದಲ್ಲಿದ್ದರೂ ಅವರ ಬಗ್ಗೆ ಗೌರವವಿದೆ. ಅವರು ಒಳ್ಳೆಯ ಲೀಡರ್ ಎಂದರು.